Headlines

ಮಡಿಕೇರಿ ಡಬಲ್ ಮರ್ಡರ್​​​​ ಕೇಸಿಗೆ ಬಿಗ್ ಟ್ವಿಸ್ಟ್:ಹೆಂಡ್ತಿ ಇದ್ರೂ ತಂಗಿ ಸಂಗ ಬೆಳೆಸಿದ್ದ ಅಣ್ಣ

ಮಡಿಕೇರಿ ಡಬಲ್ ಮರ್ಡರ್​​​​ ಕೇಸಿಗೆ ಬಿಗ್ ಟ್ವಿಸ್ಟ್:ಹೆಂಡ್ತಿ ಇದ್ರೂ ತಂಗಿ ಸಂಗ ಬೆಳೆಸಿದ್ದ ಅಣ್ಣ


ಮಡಿಕೇರಿ ಡಬಲ್ ಮರ್ಡರ್ ಕೇಸಿಗೆ ಬಿಗ್ ಟ್ವಿಸ್ಟ್:ಹೆಂಡ್ತಿ ಇದ್ರೂ ತಂಗಿ ಸಂಗ ಬೆಳೆಸಿದ್ದ ಅಣ್ಣ

ಕೊಡಗು, (ಮಾರ್ಚ್ 12): ಮಡಿಕೇರಿ (ಮಡಿಕೇರಿ) ತಾಲೂಕಿನ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ (ಕೊಡಗು ಡಬಲ್ ಮರ್ಡರ್ ಪ್ರಕರಣ) ಬಿಗ್ ಟ್ವಿಸ್ಟ್ ಸಿಕ್ಕಿದೆ. ಯಶೋಧಾ45) ಹಾಗೂ ಕುಂನ ರಾಮ(47) ಕೊಲೆಯಾದ ಜೋಡಿ. ಈ ಡಬಲ್ ಮರ್ಡರ್ ಕುಂದಚೇರಿ ಗ್ರಾಮವನ್ನೇ ಬೆಚ್ಚಿ ಬೀಳಿಸಿದ್ದು, ಇದೀಗ ಪೊಲೀಸರ ಪ್ರಾಥನಿಕ ತನಿಖೆಯಲ್ಲಿ ಈ ಜೋಡಿ ಕೊಲೆ ರಹಸ್ಯ ಬಯಲಿಗೆ ಬಂದಿದೆ. ಹೌದು.. ಸ್ವಂತ ಅಕ್ಕ ತಂಗಿಯರ ಮಕ್ಕಳ ಮಧ್ಯೆಯೇ ಅಕ್ರಮ ಸಂಬಂಧ ಬೆಳೆದಿದೆ. ಯಶೋಧಾ ಮತ್ತು ಕುಂರಾಮ ಇವರಿಬ್ಬರ ಸಂಬಂಧದಲ್ಲಿ ಅಣ್ಣ ತಂಗಿ. ಆದರೆ, ಈ ಇಬ್ಬರಿಬ್ಬರು ಪವಿತ್ರ ಸಂಬಂಧವನ್ನೇ ಮೀರಿ ಅಕ್ರಮ ಸಂಬಂಧ ಹೊಂದಿದ್ದು, ಬಳಿಕ ಇಬ್ಬರು ಲಿವಿಂಗ್ ಟುಗೆದರ್ ಅಲ್ಲಿದ್ದರು. ಇನ್ನು ಹಂತಕ ಚಂದ್ರು ಸಹ ಯಶೋಧಾ ಮತ್ತು ಕುಂರಾಮನಿಗೆ ಸಹೋದರನಾಗಬೇಕು. ಆದರೆ, ಯಶೋಧಾ ಮತ್ತು ಕುಂರಾಮ ಅಕ್ರಮ ಸಂಬಂಧ ಹೊಂದಿದ್ದರಿಂದ ಆಕ್ರೋಶಗೊಂಡು ಇಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

ಅಣ್ಣ-ತಂಗಿ ನಡುವೆ ಅಕ್ರಮ ಸಂಬಂಧ

ನಿನ್ನೆ (ಮಾರ್ಚ್ 11) ಇವರಲ್ಲಿ ನಾಮಕರಣ ಸಮಾರಂಭವೊಂದು ನಡೆದಿದೆ. ಅಲ್ಲಿಗೆ ತೆರಳಿದ್ದ ಈ ಮಂದಿ ಗುಂಡು ಪಾರ್ಟಿ ಮಾಡಿ ತಮ್ಮ ಮನೆಗೆ ಮರಳಿದ್ದಾರೆ. ಆದರೆ ರಾತ್ರಿ ಚಂದು ಎಂಬಾತನಿಗೆ ಅದೇನಾಯ್ತೋ ಗೊತ್ತಿಲ್ಲ. ಮಚ್ಚು ಹಿಡಿದು ನೇರವಾಗಿ ತನ್ನ ಮಲಸಹೋದರಿ ಮನೆಗೆ ತೆರಳಿ ಯಶೋಧಳ ಮತ್ತು ಆಕೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕುಂ ರಾಮನನ್ನ ಕೊಚ್ಚಿ ಕೊಲೆ ಮಾಡಿದ್ದಾನೆ. ಮಚ್ಚಿನೇಟಿಗೆ ಇಬ್ಬರೂ ಮಲಗಿದ್ದಲ್ಲೇ ಉಸಿರು ಚೆಲ್ಲಿದ್ದಾರೆ. ಇನ್ನು ಎರೆಡು ದೇಹಗಳು ಉರುಳಲು ಕಾರಣ ಮಾತ್ರ ಬಹಳ ವಿಚಿತ್ರವಾಗಿದೆ. ಕೊಲೆಯಾದ ಯಶೋಧ, ಕುಂ ರಾಮ ಮತ್ತು ಕೊಲೆ ಆರೋಪಿ ಚಂದು ಸಂಬಂಧದಲ್ಲಿ ಸಹೋದರಿ ಸಹೋದರರು ಆಗಬೇಕು. ಹೇಗಂದ್ರೆ ಕೊಲೆಯಾದ ಯಶೋಧಳ ತಾಯಿ, ಕುಂ ಪರ್ಯಾಯಿರಾಮನ ತಾಯಿ ನಾರಾಯಣೀ ಮತ್ತು ಕೊಲೆ ಆರೋಪಿ ಚಂದುವಿನ ತಾಯಿ ಸ್ವಂತ ಅಕ್ಕತಂಗಿಯರು. ಆದರೆ, ಇಲ್ಲಿ ಸ್ವಂತ ಅಕ್ಕ ತಂಗಿಯರ ಮಕ್ಕಳ ಮಧ್ಯೆಯೇ ಅಕ್ರಮ ಸಂಬಂಧ ಬೆಳೆದಿದೆ.

ಇದನ್ನೂ ಓದಿ: ಮದ್ಯದ ನಾಶೆಯಲ್ಲಿದ್ದವ ಹರಿಸಿದ್ದು ರಕ್ತದಕೋಡಿ: ಡಬಲ್ ಮರ್ಡರ್ ಮಂಡಲಕ್ಕೆ ಬೆಚ್ಚಿಬಿದ್ದ ಭಾಗ

ಮಲಗಿದ್ದ ಅಣ್ಣ-ತಂಗಿ ಮೇಲೇಳಲೇ ಇಲ್ಲ

ಕೊಲೆಯಾದ ಕುಂಇರಾಮ ಎರಡು ವರ್ಷಗಳ ಹಿಂದೆ ಪತ್ನಿ ಕಲ್ಯಾಣಿಯನ್ನ ತ್ಯಜಿಸಿ ತನ್ನ ಸಹೋದರಿ ಯಶೋಧಳ ಜೊತೆ ಸಂಬಂಧ ಬೆಳೆಸಿದ್ದ. ಎರಡು ವರ್ಷಗಳಿಂದ ಇವರಿಬ್ಬರು ಒಟ್ಟಿಗೆ ನೆಲೆಸಿದ್ದರು. ಇದು ಸಹೋದರ ಸಂಬಂಧಿ ಚಂದುವಿಗೆ ಇಷ್ಟವಿರಲಿಲ್ಲ. ಚಂದುವಿಗೆ ಯಶೋಧಳ ಮೇಲೆ ಮನಸ್ಸಿತ್ತು. ಇದರ ಅಲ್ಲಿಯವರ ಜೊತೆ ಈ ಹಿಂದೆಯೂ ಹಲವು ಬಾರಿ ಹೇಳಿದ್ದನಂತೆ. ಮಾರ್ಚ್ 11 ರಂದು ಕುಡಿದ ಮತ್ತಿನಲ್ಲಿ ಯಶೋಧಳ ಮನೆಗೆ ತೆರಳಿ ನೋಡಿದಾಗ ಯಶೋಧ -ಕುಂ ಯಶರಾಮ ಒಟ್ಟಿಗೆ ಇರುವುದು ಕಂಡು ಮತ್ತಷ್ಟು ಆಕ್ರೋಶಗೊಂಡಿದ್ದು, ಏನು ನೋಡದೆ ಇಬ್ಬರ ಮೇಲೆ ಮನಸೋಇಚ್ಛೆ ಮಚ್ಚಿನಿಂದ ದಾಳಿ ಮಾಡಿದ್ದಾನೆ. ಪರಿಣಾಮ ಮಲಗಿದ್ದ ಯಶೋಧ ಹಾಗೂ ಕುಂ ರಾಮ ಮೇಲೇಳಲೇ ಇಲ್ಲ.

ಈ ಪ್ರಕರಣವು ಕೇವಲ ಒಂದು ಅಪರಾಧವಾಗಿದೆ, ಅಡಿಯ ಜನಾಂಗದ ನಿಕೃಷ್ಟ ಪರಿಸ್ಥಿತಿಯನ್ನ ಬಯಲಿಗೆಳೆದಿದೆ. ಸುಶಿಕ್ಷಿತರಾಗದೇ ಇರುವುದು, ಕಾನೂನಿನ ಕೊರತೆ, ಇವರನ್ನ ಸಮಾಜದ ಮುಖ್ಯವಾಹಿನಿಗಳಿಗೆ ಅಧಿಕಾರಿಗಳು ನೀಡುತ್ತಿಲ್ಲ ಇವೆಲ್ಲವೂ ಕೂಡ ಇದೀಗ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಕೊಲೆ ಆರೋಪಿ ಚಂದನ್ನ ಬಂಧಿಸಿರೋ ಭಾಗಮಂಡಲ ಪ್ರಕರಣ ದಾಖಲಿಸಿ ತನಿಖೆಗೆ ಹಾಜರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *