
ಹಾಸನ (ಏಪ್ರಿಲ್.13): 8 ವರ್ಷಗಳ ಕಾಲ ಪತಿಯೊಂದಿಗೆ ಸಂಸಾರ ನಡೆಸಿದ್ದ ಗೃಹಿಣಿಯೊಬ್ಬರು, ಈಗ ತನ್ನ ಏಳು ವರ್ಷದ ಮಗ ಹಾಗೂ ಪತಿಯನ್ನು ಬಿಟ್ಟು ಪ್ರಿಯಕರನ (ಪ್ರೇಮಿ) ಜೊತೆ ಕಾರಿನಲ್ಲೇ ವಿವಾಹವಾಗಿರುವ ವಿಚಿತ್ರ ಘಟನೆ ಹಾಸನದಲ್ಲಿ (ಹಾಸನ) ನಡೆದಿದ್ದು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ಚಿಸ್ಟ್ ಸಿಕ್ಕಿದೆ. ಮನೆಬಿಟ್ಟು ಹೋಗಿ ಪ್ರಿಯಕರನ ಕೈಯಿಂದ ತಾಳಿಕಟ್ಟಿಸಿಕೊಂಡಿದ್ದ ಮಹಿಳೆ ಇದೀಗ ತನ್ನನ್ನು ವಾಪಸ್ ಕರೆದುಕೊಂಡು ಹೋಗಿ ಎಂದು ಗಂಡನ ಮುಂದೆ ಅಳಲು ತೋಡಿಕೊಂಡಿದ್ದಾರೆ. ಹೌದು…ಪ್ರಕಾಶ್-ಹರ್ಷಿತಾ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಪ್ರಿಯಕರನಿಂದ ಹೋಗಿದ್ಯಾಕೆ? ಕಾರಿನಲ್ಲಿ ತಾಳಿಕಟ್ಟಿಸಿಕೊಂಡಿದ್ಯಾಕೆ? ಎನ್ನುವುದನ್ನು ಗಂಡನ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ತಪ್ಪಾಯ್ತು ಎಂದು ಸಹ ಬೇಡಿಕೊಂಡಿದ್ದಾಳೆ.
ಇದನ್ನೂ ಓದಿ: ಹಾಸನ: ಪತಿ, 7 ವರ್ಷದ ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ಮದುವೆಯಾದ ಮಹಿಳೆ!
ಪ್ರಕಾಶ್-ಹರ್ಷಿತಾ ಮಾತನಾಡಿದ ಆಡಿಯೋನಲ್ಲೇನಿದೆ?
ಪ್ರಕಾಶ್ (ಗಂಡ) : ಇಷ್ಟೆಲ್ಲಾ ಆಗಿದ್ದು ಅಪ್ಪಿ ಏನ್ಮಾಡೋದು, ನೋಡಿದ್ರೆ ಅವನು ನೂರಕ್ಕೆ ನೂರು ಈ ತರ ಆಗಬೇಕಾದರೆ ರಿಪೋರ್ಟ್ ಎಲ್ಲಾ ಇದೆ ಕಳುಸ್ಲಾ ಅಂದ.
ಹರ್ಷಿತಾ (ಹೆಂಡ್ತಿ) : ಕಳುಸ್ಕೊಡಿ ಆಯ್ತು
ಪ್ರಕಾಶ್ : ಗೊತ್ತಾಗುತ್ತಲಾ ಈಗ ಆಗಿರೋದು ಏನಂತ, ನೀನು ಅದು ಹೇಗೆ ಕಾರಿನಲ್ಲಿ ನಗು ನಗುತ್ತಾ ತಾಳಿ ಕಟ್ಟಿಕೊಂಡೆ, ಬ್ಲಾಕ್‌ಮೇಲೆ ಮಾಡಿದ್ರೆ ನಿನ್ನ ಮನಸ್ಸಿನಲ್ಲಿ, ಮುಖದಲ್ಲಿ ಇದು ಇರಬೇಕಿತ್ತು.
ಹರ್ಷಿತಾ : ಅವ ಬ್ಲಾಕ್‌ಮೇಲ್ ಅಲ್ಲಾ, ಈಗ ಲಾಸ್ಟ್‌ಗೆ ಬ್ಲಾಕ್‌ಮೇಲ್ ಮಾಡಿದ್ದು ಅದಕ್ಕೆ ಬಂದಿದ್ದು, ಇಲ್ಲ ಅಂದರೆ ಏನಕ್ಕೆ ಬರ್ತಿದ್ದೆ
ಪ್ರಕಾಶ್ : ಅವಾಗ ಏಕೆ ಮಾತ್ರ ಖುಷಿಯಾಗಿ ಕಟ್ಟಿಸಿಕೊಂಡೆ
ಹರ್ಷಿತಾ : ಅವಾಗ ಅವನು ಎಲ್ಲಿ ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದ, ನನ್ನ ತಲೆಗೆ ಬರುತ್ತೆ ನಾನು ಹೇಳಿಬಿಟ್ಟು ಸುಮ್ನೆ ಬರೋಣ ಅಂಥ ಬಂದೆ, ಹಿಂಗೆ ಆಗುತ್ತೆ, ಬ್ಲಾಕ್ ಮೇಲ್ ಮಾಡ್ತಾನೆ ಅಂಥ ಗೊತ್ತಿರಲಿಲ್ಲ.
ಪ್ರಕಾಶ್ : ಅವನ್ಯಾಕೆ ಸೂಸೈಡ್ ಮಾಡ್ಕತನೆ, ನಿನಗೆ ಯಾಕೆ ಹೀಗ್ ಮಾಡ್ದಾ, ನೀನು ಹೇಳದ್ರಲ್ಲಿ ಒಂದು ಕ್ಲಾರಿಫಿಕೇಷನ್ ಇಲ್ಲಾ
ಹರ್ಷಿತಾ : ಸೂಸೈಡ್ ಮಾಡ್ಕತಿನಾ ಅಂದ ಅದ್ಕೆ
ಪ್ರಕಾಶ್ : ನೀನು ಕಾರಲ್ಲಿ ತಾಳಿ ಕಟ್ಟಿಸಿಕೊಳ್ಳುತ್ತಿದ್ದೀಯಲ್ಲವಾ
ಹರ್ಷಿತಾ : ಒಂಚೂರು ವಿಷ ಕುಡಿದಿದ್ದಕ್ಕೆ ಹಾಸನಕ್ಕೆ ಬಂದೆ
ಪ್ರಕಾಶ್ :ಪಡುವಲಹಿಪ್ಪೆ ಆಸ್ಪತ್ರೆಯಲ್ಲಿ ರೆಡ್ ಶರ್ಟ್ ಹಾಕೊಂಡು ಗ್ಲೂಕೋಸ್ ಹಾಕುಸ್ಕಂಡು ನೀನು ಮದುವೆ ಆಗಲಿಲ್ಲ ಎಂದರೆ ಸೂಸೈಡ್ ಮಾಡ್ಕತಿನಿ ಅಂಥ ಅವನಿಗೆ ಕಳ್ಸಿದಿಯಾ, ಆ ಫೋಟೋ ನನ್ನ ಹತ್ರ ಇದೆ.
ಹರ್ಷಿತಾ : ನಾನು ಮದುವೆಯಾಗು ಅಂಥ ಏನು ಹೇಳಲೇ ಇಲ್ಲ, ಯಾವ ಕಾರಣಕ್ಕೂ ಹೇಳಲೇ ಇಲ್ಲ, ನಾನು ಯಾವ ಟೀ ಶರ್ಟ್ ಹಾಕಿಕೊಂಡು ಏನಕ್ಕೆ ಹೋಗಲಿ
ಪ್ರಕಾಶ್ : ಹ್ಯಾಪಿ ಮ್ಯಾರಿಡ್ ಲೈಫ್ ಕಿರಾಕತ ಅಂಥ ಕಳ್ಸಿದಿಯಾ, ಅವತ್ತು ನೀನು ಬಹಳ ಖುಷಿಯಾಗಿದಿಯಾ, ಇಲ್ಲಿ ಸಾಕ್ಷಿ ಸಿಗ್ತಿದೆಯೆಲ್ಲಾ, ನಾನು ಆಸ್ಪತ್ರೆಯಿಂದ ಮನೆಗೆ ಬಂದಾಗ ಅವನು ಊಟ ಮಾಡಿಸಿ ಹೋದನಂತೆ
ಹರ್ಷಿತಾ : ಅವನು ಹೇಗೆ ಊಟ ಮಾಡುಸ್ತನೆ, ಪಕ್ಕದ ಬೆಡ್ ಅವನು ಇರಲಿಲ್ಲ, ಅವನು ಬಂದು ನೋಡಿಕೊಂಡು ಹೋದನು, ಊಟ ಮಾಡಲಿಲ್ಲ.
ಪ್ರಕಾಶ್ : ನಾನು ಊಟ ತಂದು ಕೊಟ್ಟಿರಲಿಲ್ವಾ ಮುಂಡಗೋಡಿಗೆ ಹೋಗಿ ಲೋಕೇಷನ್ ಹಾಕು ಅಂಥ ಹೇಳಿರ್ಲಿಲ್ವಾ
ಹರ್ಷಿತಾ : ನಾನು ತಡೆ ಒಡೆಸಲು ಹೋಗಿದ್ದೆ
ಪ್ರಕಾಶ್ : ಈಗಾಗಲೇ ಸುಳ್ಳು ಹೇಳ್ತಿದಿಯಲ್ಲ, ಹೇಳು ಈಗ
ಹರ್ಷಿತಾ : ಸರಿ ಈಗ ಬರ್ತೀನಿ, ಅವನ ಜೊತೆ ಹೋಗಲ್ಲ, ಅವನಿಗೂ ನನಗೂ ಸಂಬಂಧವಿಲ್ಲ, ಅವನ ಹತ್ತಿರನೂ ಸಹಿ ಹಾಕಿಸಿಕೊಳ್ಳಿ, ತಪ್ಪಾಯ್ತು, ಇನ್ಮುಂದೆ ಹೀಗೆ ಮಾಡಲ್ಲ, ಪಾಪು ಮುಖ ನೋಡ್ಕಂಡು ಇರ್ತಿನಿ, ಬಂದು ಕರ್ಕಂಡು ಹೋಗಿ ಇಲ್ಲಿಂದ.
ಪ್ರಕಾಶ್: ಬೇರೆ ಏನೇನ್ ಮುಚ್ಚಿಟ್ಟಿದ್ದೀ ನನ್ನಿಂದ ಹೇಳು
ಹರ್ಷಿತಾ : ಇಷ್ಟೇ ಬೇರೆ ಏನು ನಡೆದಿಲ್ಲಾ
ಪ್ರಕಾಶ್ : ಸುಳ್ಳು ಮೇಲೆ ಸುಳ್ಳು ಹೇಳ್ಕಂಡೆ ಹೋದೆ
ಹರ್ಷಿತಾ : ಮನೆ ಹತ್ತಿರ ಬಂದು ಜಗಳ ಆಡ್ತಿರಾ ಅಂಥ ಹೇಳ್ದೆ
ಪ್ರಕಾಶ್ : ನನ್ನ ಕೈಯಲ್ಲಿ ಏನು ಆಗಲ್ಲ ಅನ್ಕೊಂಡೆ ಅಲ್ವಾ, ಎಲ್ಲಾ ಏನಂತಾರೆ ಗೊತ್ತಾ, ಮೂಮೂಲಿ ಕ್ರಿಮಿನಲ್ ಅಲ್ಲಾ, ಇಂಟರ್‌ನ್ಯಾಷನಲ್ ಕ್ರಿಮಿನಲ್ ತರ ಯೋಚನೆ ಮಾಡಿದ್ದಾಳೆ ಅಂತಾರೆ, ಆ ತರ ಮೈಂಡ್ ಯಾರಿಗೂ ಓಡಿಲ್ಲ, ಆ ಸ್ಪೀಡ್‌ಲಿ ಮೈಂಡ್ ಓಡ್ಸಿದಿಯಾ
ಹರ್ಷಿತಾ : ಎಲ್ಲಾ ಅವನು ಹೇಳ್ಕೊಟ್ಟಿದ್ದು, ನಾನೇನು ಹೇಳಿಲ್ಲ, ಲಾಯರ್ ಹತ್ರ ಅವನೇ ಮಾತನಾಡಿದ್ದು, ನೀನು ಹೋದರೆ ಫೋಟೋಸ್ ಸೋಶಿಯಲ್ ಮಿಡಿಯಾಗೆ ಹಾಕ್ತಿನಿ ಅಂಥ ಹೆದ್ರುಸ್ದಾ, ನನ್ನ ಹತ್ತಿರ ದುಡ್ಡು ಎಲ್ಲಿ ಇತ್ತು ಲಾಯರ್‌ಗೆ ಕೊಡೋಕೆ
ಪ್ರಕಾಶ್ : ಅವರ ಮನೆ ಆಯಾ ಮಾಡ್ಸೋ ವಿಡಿಯೋ ಮಾಡಿ ಮನೆ, ಸೈಟ್ ಸಿಗುತ್ತೆ ಅಂತ ಖುಷಿ ಆಗ್ಬಿಟ್ಟೆ ಅಲ್ವಾ
ಹರ್ಷಿತಾ : ಅವನು ಬ್ಲಾಕ್‌ಮೇಲ್ ಮಾಡ್ದಾ, ಅವನು ಸೋಶಿಯಲ್ ಮಿಡಿಯಾದಲ್ಲಿ ಹಾಕಿದ್ರೆ ಏನ್ ಮಾಡ್ಲಿ
ಪ್ರಕಾಶ್ : ನೀನು ಹೇಳಬೇಕಿತ್ತು
ಹರ್ಷಿತಾ : ನಾನು ರಕ್ಷಿ ಹತ್ತಿರ ಹೇಳ್ಕೊಬೇಕಿತ್ತು
ಪ್ರಕಾಶ್ : ಅವತ್ತು, ಇನ್ಸ್ ಪೆಕ್ಟರ್ ಅಷ್ಟು ಕೇಳ್ದಾಗ್ಲೆ ಹೇಳಬೇಕಿತ್ತಲ್ವಾ, ಯಾವುದು ಹೊರಗಡೆ ಬರ್ದಂಗೆ ಮಾಡೋರು, ಗೋರೂರಲ್ಲಿ ಅಷ್ಟೊಂದು ಹೇಳಿದ್ರು, ನೀನು ಏನು ಮಾಡ್ಲಿಲ್ವಲಾ, ಯಾವ್ಯಾವ ತರ ಸುಳ್ಳು ಹೇಳ್ದೆ, ಸುಳ್ಳು ಹೇಳ್ದೆ ನೀನು, ಕನ್ಸಿವ್ ಆಗ್ತಿದೆ ಅಂದೆ, ನನ್ನಿಂದ ಅಂತೂ ಹೇಳ್ದೆ, ಈಗ ಕ್ಲಿ ಮಾಡ್ಕಂಡ ಅಲ್ವಾ.
ಹರ್ಷಿತಾ : ಕ್ಲಿಯರ್ ಮಾಡ್ಕಂಡೆ, ಅವನದ್ದು ಅಂಥ ಹೇಗೆ ಪಕ್ಕಾ ಆಗುತ್ತೆ, ನನಗೆ ಬೇಡ ಅಂಥ ಕ್ಲಿಯರ್ ಮಾಡ್ಕಂಡೆ, ಅವನ ಜೊತೆ ಸೇರಿದ್ರೆ ಸುಮ್ನೆ ಮಾಡ್ಕೊತ್ತಿದ್ದೆ.
ಪ್ರಕಾಶ್ : ಸೇರಿರೋದ್ಕೆ ಬೇಡ ಅಂತ ಈ ತರ ಮಾಡ್ಕಂಡಿದಿಯಾ
ಹರ್ಷಿತಾ : ನಾನು ನನಗೆ ಬೇಡ ಅಂಥ ಮಾಡ್ಕಂಡಿದ್ದು
ಪ್ರಕಾಶ್ : ಎಸ್‌ಎಸ್‌ಎಂ ಆಸ್ಪತ್ರೆಗೆ ತೋರ್ಸಿದ್ನಾ
ಹರ್ಷಿತಾ : ಎಸ್‌ಎಸ್‌ಎಂಗಲ್ಲ, ನಾನು ಅವನಿಗೆ ಏನು ಹೇಳಿಲ್ಲ, ನಿಮಗೆ ಹೇಳ್ಕಂಡು ಮಾಡ್ಕೊಂಡಿರೋದು
ಪ್ರಕಾಶ್ : ಅವನು ನನ್ನಂದಾನೆ ಆಗಿರೋದು ರಿಪೋರ್ಟ್ ಇದೆ ಅಂಥ ಹೇಳ್ದಾ
ಹರ್ಷಿತಾ : ನೀನು ತಾನೇ ಸಹಿ ಮಾಡಿದ್ದು ಆಸ್ಪತ್ರೆ, ಅವನನ್ನು ಕೇಳಿದ್ರೆ ಅವನೇ ಮಾಡ್ತಿದ್ದಾ ತಾನೇ
ಪ್ರಕಾಶ್ : ನನ್ನನ್ನು ಉಪಯೋಗಿಸಿಕೊಂಡೆ ಅಷ್ಟೇ, ನನ್ನನ್ನು ನಂಬಿಸಿದಿಯಾ, ಇಷ್ಟು ವರ್ಷದಿಂದ ಆಗಿದ್ದು ಈಗ ಹೇಗೆ ಆಗುತ್ತೆ
ಹರ್ಷಿತಾ : ಆ ತರ ಇದ್ದಿದ್ರೆ ಅವನನ್ನು ಕೇಳಿ ಅವನತ್ರನೇ ತೆಗಿಸಿಕೊಳ್ತಿದ್ದೆ
ಪ್ರಕಾಶ್ : ಅರ್ಧ ಗಂಟೆಯಿಂದಲೂ ಸುಳ್ಳೇ ಹೇಳ್ತಿದಿಯಾ
ಹರ್ಷಿತಾ : ಸತ್ಯ ಹೇಳ್ತಿದ್ದೀನಿ ಅಷ್ಟೇ, ಅವನು ಬ್ಲಾಕ್‌ಮೇಲ್ ಮಾಡ್ದಾ, ಅದಕ್ಕೆ ಹೋಗಿದ್ದು, ಗೋಲ್ಡ್ ಹರಾಜಾಗುತ್ತೆ ಅಂಥ ತಗೊಂಡು ಹೋದೆ, ದುಡ್ಡು ನಾನೇ ಹಾಕ್ಲಿಲ್ವಾ
ಪ್ರಕಾಶ್ : ಹಾಕ್ದೆ, ಅಲ್ಲಿ ಕೋಟಿ ಕೋಟಿ ಸಿಗುತ್ತೆ, ಅವನತ್ರ ಮನೆ, ಸೈಟ್ ಸಿಗುತ್ತೆ, ದಿಲ್ದಾರ್ ಆಗಿ ಇರಬಹುದು ಅಂಥ ಹಾಕ್ದೆ, ಅವನ ಕಥೆ ಏನು ಹೇಳು
ಹರ್ಷಿತಾ : ನನಗೂ ಅವನಿಗೂ ಸಂಬಂಧವಿಲ್ಲ, ಪೊಲೀಸ್ ಠಾಣೆಯಲ್ಲಿ ಬರ್ಕೊಡ್ತಿನಿ
ಪ್ರಕಾಶ್ : ನಿರಂಜನ್ ಅನ್ನೋನ್ನ ಏಕೆ ಉಪಯೋಗಿಸಿಕೊಂಡೆ
ಹರ್ಷಿತಾ : ಆದರ್ಶಕ್ಕೆ ಎಲ್ಲ ಗೊತ್ತು ಅದು
ಪ್ರಕಾಶ್ : ಫೋಟೋ ಎಲ್ಲಾ ಕಳ್ಸಿದಿಯಾ, ಇವರ ಜೊತೆ ನನ್ನ ಎಂಗೇಜ್ಮೆಂಟ್ ಇದೆ ಅಂಥ, ಇಸ್ಕ್ಟಾಗ್ರಾಮ್ ಅಕೌಂಟ್ ಏಕೆ ಎರಡೆರಡು ಮಾಡ್ಕೊಂಡೆ
ಹರ್ಷಿತಾ : ನನ್ನ ಹತ್ತಿರ ಎರಡು ಎಲ್ಲಿದೆ, ಒಂದೇ ಅಕೌಂಟ್ ಇರೋದು
ಪ್ರಕಾಶ್ : ವರ್ಷ 29 ನಾ
ಹರ್ಷಿತಾ : ಅದಲ್ಲಾ, ವರ್ಷಾP29 ರೆಡ್ ಶಾರ್ಟ್ ಹಾಕಿರೋದು, ಅದನ್ನ ಹ್ಯಾಕ್ ಮಾಡಿ ಎಲ್ಲರಿಗೂ ಮೆಸೇಜ್ ಮಾಡಿದ್ರು, ಕಿರಗಡಲು ದರ್ಶು ಕೇಳಿ
ಪ್ರಕಾಶ್ : ನೀನು ಬರ್ತಾ ಬರ್ತಾ ಸಿಂಗಲ್ ಫೋಟೋ ಹಾಕೋದು, ಏಕೆ ಬೇಕಾಗಿತ್ತು ನಿನಗೆ ಇದೆಲ್ಲವಾ, ಅವಾಗ್ಲೆ ವಾರ್ನ್ ಮಾಡಿದ್ದೆ, ನಾನೇ ಊಟ ಮಾಡ್ಸಿದ್ದೆ, ಅವತ್ತು ನಾನು ತಿಳಿದುಕೊಳ್ಳಲಿಲ್ಲ, ನಿನಗೆ ದುಡ್ಡು ಮುಖ್ಯ ಆಯ್ತು ಅಷ್ಟೇ, ಫೋನ್ ಇಡು