BBK 12 ಪುನರ್ಮಿಲನ 'ದೊಡ್ಮನೆ ಹಬ್ಬ': ಜೋಡಿ ಹಕ್ಕಿಗಳ, ಸಿಟ್ಟು ಮಾಡ್ಕೊಂಡೋರ ಮುಖಾಮುಖಿ ಹೇಗಿದೆ ನೋಡಿ!

BBK 12 ಪುನರ್ಮಿಲನ 'ದೊಡ್ಮನೆ ಹಬ್ಬ': ಜೋಡಿ ಹಕ್ಕಿಗಳ, ಸಿಟ್ಟು ಮಾಡ್ಕೊಂಡೋರ ಮುಖಾಮುಖಿ ಹೇಗಿದೆ ನೋಡಿ!

BBK 12 ಪುನರ್ಮಿಲನ 'ದೊಡ್ಮನೆ ಹಬ್ಬ': ಜೋಡಿ ಹಕ್ಕಿಗಳ, ಸಿಟ್ಟು ಮಾಡ್ಕೊಂಡೋರ ಮುಖಾಮುಖಿ ಹೇಗಿದೆ ನೋಡಿ!

ಬಿಗ್‌ಬಾಸ್ 12ರ ಎಲ್ಲಾ ಸ್ಪರ್ಧಿಗಳು ‘ದೊಡ್ಮನೆ ಹಬ್ಬ’ ಎಂಬ ವಿಶೇಷ ಕಾರ್ಯಕ್ರಮಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ.  ಈ ಕಾರ್ಯಕ್ರಮದಲ್ಲಿ, ಸ್ಪರ್ಧಿಗಳ ಡಾನ್ಸ್, ಕಾಮಿಡಿ ಹಾಗೂ ಅಸಮಾಧಾನಿತರ ಮುಖಾಮುಖಿಯನ್ನು ನಿರೀಕ್ಷಿಸಬಹುದು.  ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿದೆ.

ಬಿಗ್​ಬಾಸ್​ 12 (Bigg Boss 12) ಮುಕ್ತಾಯಗೊಂಡು ಹಲವು ದಿನಗಳು ಕಳೆದಿದ್ದು, ಸದ್ಯ ಅದರ ಮೇಲಿನ ಕ್ರೇಜ್​ ಕ್ರಮೇಣ ಜನರ ಮನಸ್ಸಿನಲ್ಲಿ ಕಡಿಮೆಯಾಗತೊಡಗಿದೆ. ಬಿಗ್​ಬಾಸ್​ ಸಂದರ್ಭದಲ್ಲಿ ವಾಹಿನಿಯ ಟಿಆರ್​ಪಿ ಒಂದೇ ಸಮನೆ ಏರಿದರೆ, ಅದು ಮುಗಿದ ಮೇಲೆ ಸಹಜವಾಗಿ ಕುಸಿತ ಕಾಣುವುದು ಇದ್ದೇ ಇದೆ. ಆದರೆ ಇನ್ನೊಮ್ಮೆ ಬಿಗ್​ಬಾಸ್​ 12ರ ಎಲ್ಲಾ ಸ್ಪರ್ಧಿಗಳನ್ನು ಒಟ್ಟಿಗೇ ವೇದಿಕೆ ಮೇಲೆ ಕರೆತಂದಿದೆ ಕಲರ್ಸ್​ ವಾಹಿನಿ.

ಇದೇ ಫೆಬ್ರುವರಿ 14ರಂದು ದೊಡ್ಮನೆ ಹಬ್ಬದ ಹೆಸರಿನಲ್ಲಿ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಸುಷ್ಮಾ ಕೆ.ರಾವ್​ ಅವರ ನಿರೂಪಣೆಯಲ್ಲಿ, ಬಿಗ್​ಬಾಸ್​​ 12ನೇ ಸೀಸನ್​ನ ಎಲ್ಲಾ ಸ್ಪರ್ಧಿಗಳನ್ನು ಪುನಃ ಒಟ್ಟಿಗೇ ನೋಡುವ ಅವಕಾಶವನ್ನು ವೀಕ್ಷಕರು ಪಡೆದುಕೊಳ್ಳಬಹುದಾಗಿದೆ.

ಈ ಸೀಸನ್​ನಲ್ಲಿ ಜೋಡಿ ಹಕ್ಕಿಗಳೆಂದೇ ಫೇಮಸ್​ ಆದವರು ರಾಶಿಕಾ ಶೆಟ್ಟಿ- ಸೂರಜ್​ ಸಿಂಗ್​ (Rashika Shetty and Suraj Singh) ಮತ್ತು ಗಿಲ್ಲಿ ನಟ- ಕಾವ್ಯಾ ಶೈವ. ಇವರ ಜೋಡಿಯನ್ನು ಮತ್ತೊಮ್ಮೆ ಒಟ್ಟಿಗೇ ನೋಡಿ ವೀಕ್ಷಕರು ಕಣ್ತುಂಬಿಸಿಕೊಳ್ಳಬಹುದಾಗಿದೆ.

ಇದರ ಜೊತೆಗೆ, ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಅಸಮಾಧಾನ ಹೊರಹಾಕುತ್ತಿರುವ ಸ್ಪರ್ಧಿಗಳೂ ಇದ್ದಾರೆ. ಗಿಲ್ಲಿ ನಟ ವಿನ್​ ಆಗಿರುವುದಕ್ಕೆ ವಿವಿಧ ಮಾಧ್ಯಮಗಳಲ್ಲಿ ಭಾರಿ ಕೋಪವನ್ನೂ ತೋಡಿಕೊಂಡಿರುವ ಸ್ಪರ್ಧಿಗಳೂ ಇದ್ದಾರೆ. ಅವರು ಇದೀಗ ಮತ್ತೊಮ್ಮೆ ಗಿಲ್ಲಿ ನಟನ ಮುಖಾಮುಖಿಯಾದರೆ ಹೇಗಿರುತ್ತದೆ ಎನ್ನುವುದನ್ನೂ ಇದರಲ್ಲಿ ನೋಡಬಹುದಾಗಿದೆ.

ಒಟ್ಟಿನಲ್ಲಿ ಕಲರ್ಸ್​ ವಾಹಿನಿ ವೀಕ್ಷಕರಿಗೆ ಮತ್ತೊಮ್ಮೆ ಬಿಗ್​ಬಾಸ್​ ಸವಿಯೂಟವನ್ನು ಬಡಿಸಲು ಮುಂದಾಗಿದೆ. ಇದರ ಪ್ರೊಮೋ ಬಿಡುಗಡೆಯಾಗಿದ್ದು, ಇದರಲ್ಲಿ ಎಲ್ಲರೂ ಭರ್ಜರಿ ಹೆಜ್ಜೆ ಹಾಕುವುದನ್ನು ನೋಡಬಹುದು.

ಜೊತೆಗೆ ಸುಷ್ಮಾ ಕೆ.ರಾವ್​ ಅವರ ನಿರೂಪಣೆ ಎಂದರೆ, ಸಹಜವಾಗಿ ಅದರಲ್ಲಿ ಕಾಮಿಡಿ ಇದ್ದೇ ಇರುತ್ತದೆ. ಮಲ್ಲಮ್ಮ ಅವರಿಗೆ ಸುಷ್ಮಾ ಅವರು ಗಾಸಿಪ್​ ಎಂದರೆ ಏನು ಎಂದು ಕೇಳಿದಾಗ, ಮಲ್ಲಮ್ಮ ತೆಂಗಿನ ಚಿಪ್ಪು ಎಂದಿದ್ದಾರೆ. ಹೀಗೆ ಹಲವು ರೀತಿಯ ಕಾಮಿಡಿಗಳನ್ನೂ ಇದರಲ್ಲಿ ನೋಡಬಹುದು. ಜೊತೆಗೆ ಬಿಗ್​ಬಾಸ್​ ಸ್ಪರ್ಧಿಗಳ ಕುಟುಂಬಸ್ಥರ ಜೊತೆಗಿನ ಮೋಜು ಮಸ್ತಿಯನ್ನೂ ನೋಡಬಹುದಾಗಿದೆ.

Source link

Leave a Reply

Your email address will not be published. Required fields are marked *