Headlines

ರೇಜಿಗೆ ಹುಟ್ಟಿಸಿದ ಅಶ್ವಿನಿ ಗೌಡ-ಜಾನ್ವಿ; ಅಸಮಾಧಾನ ಹೊರಹಾಕಿದ ಬಿಗ್ ಬಾಸ್

ರೇಜಿಗೆ ಹುಟ್ಟಿಸಿದ ಅಶ್ವಿನಿ ಗೌಡ-ಜಾನ್ವಿ; ಅಸಮಾಧಾನ ಹೊರಹಾಕಿದ ಬಿಗ್ ಬಾಸ್


ಬಿಗ್ ಬಾಸ್ (ಬಿಗ್ ಬಾಸ್ ) ಮನೆಯಲ್ಲಿ ಪದೇ ಪದೇ ನಿಯಮ ಮುರಿಯುವ ಸಾಹಸಕ್ಕೆ ಯಾರೂ ಹೋಗುವುದಿಲ್ಲ. ಒಮ್ಮೆ ನಿಯಮ ಮುರಿದ ಬಳಿಕ ಬಿಗ್ ಬಾಸ್ ನಿಂದ ಎಚ್ಚರಿಕೆ ಬಂದರೆ ಎಚ್ಚೆತ್ತುಕೊಳ್ಳುತ್ತಾರೆ. ಆದರೆ, ಅಶ್ವಿನಿ ಗೌಡ ಜಾನ್ವಿ ಆ ರೀತಿ ಅಲ್ಲ. ಅವರು ಪದೇ ಪದೇ ನಿಯಮ ಉಲ್ಲಂಘನೆ ಮಾಡಿದ್ದಾರೆ. ಅವರು ಬಾಸ್ ನಡೆದುಕೊಂಡ ರೀತಿಗೆ ದೊಡ್ಡ ಅಸಮಾಧಾನ ಹೊರಹಾಕಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಅಶ್ವಿನಿ ಗೌಡ ಹಾಗೂ ಜಾನ್ವಿ ಅವರು ಬಿಗ್ ಬಾಸ್ ನಲ್ಲಿ ಈ ವಾರ ನೇರವಾಗಿ ನಾಮಿನೇಟ್ ಆಗಿದ್ದಾರೆ. ಇದಕ್ಕೆ ಕಾರಣ ಅವರು ಮಾಡಿದ ತಪ್ಪು. ಈ ಮೊದಲು ಚೇಂಜಿಂಗ್ ರೂಂನಲ್ಲಿ ಪಿಸುದನಿಯಲ್ಲಿ ಇವರು ಮಾತನಾಡಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಬಗ್ಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು. ಆದರೂ ಇವರು ಬದಲಾಗಲಿಲ್ಲ.

ಆ ವಾರದ ಎಪಿಸೋಡ್ ಮುಗಿಯುತ್ತಿದ್ದಂತೆ ಮತ್ತೆ ಡ್ರೆಸ್ಸಿಂಗ್ ರೂಂಗೆ ಹೋಗಿ ತಪ್ಪನ್ನು ಮಾಡಿದ್ದೆ. ಮತ್ತೆ ಪಿಸುದನಲ್ಲಿ ಮಾತನಾಡಿದ್ದರು. ಇದರಿಂದ ಅಸಮಾಧಾನಗೊಂಡ ಬಿಗ್ ಬಾಸ್ ಇವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಆದರೂ ಇವರು ಬುದ್ಧಿ ಕಲಿತಂತೆ ಇಲ್ಲ. ನವೆಂಬರ್ 19 ರ ಎಪಿಸೋಡ್ ನಲ್ಲಿ ಇವರು ಪಿಸುಧ್ವನಿಯಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಬಿಟ್ಟು ತೆರಳುವ ನಿರ್ಧಾರ ಮಾಡಿದ ಅಶ್ವಿನಿ ಗೌಡ

ಎಲ್ಲರೂ ಸೋಫಾ ಮೇಲೆ ಕುಳಿತಿದ್ದರು. ಈ ವೇಳೆ ಅಶ್ವಿನಿ ಹಾಗೂ ಜಾನ್ವಿ ಪಿಸುಧ್ವನಿಯಲ್ಲಿದೆ. ಇದರಿಂದ ಬಿಗ್ ಬಾಸ್ ಸಿಟ್ಟಾದರು. ‘ಅಶ್ವಿನಿ, ಜಾನ್ವಿ ನೇರವಾಗಿ ನಾಮಿನೇಟ್ ಆಗಲು ಕಾರಣ ಗೊತ್ತಿದೆ ಅಲ್ಲವೇ? ಗೊತ್ತಿದ್ದೂ ಪದೇ ಪದೇ ಪಿಸುಧ್ವನಿಯಲ್ಲಿ ಮಾತನಾಡೋದು ಎಷ್ಟು ಸರಿ’ ಎಂದು ಬಿಗ್ ಬಾಸ್ ಕೇಳಿದರು. ಈ ವೇಳೆ ಇಬ್ಬರೂ ಕ್ಷಮೆ ಕೇಳಿದರು. ಈ ವೇಳೆ ಬಿಗ್ ಬಾಸ್ ‘ಇರಲಿ’ ಎಂದು ಬೇರೆಯದೇ ಟೋನ್ ನಲ್ಲಿ ಹೇಳಿದರು. ಅವರ ಧ್ವನಿಯಲ್ಲಿ ಅಸಮಧಾನ ಸ್ಪಷ್ಟವಾಗಿ ಕಾಣಿಸುತ್ತಿದೆ. ನೇರ ನಾಮಿನ ಯಾವುದೇ ದೊಡ್ಡ ಶಿಕ್ಷೆ ಕೊಟ್ಟರೂ ಅವರು ಬದಲಾಗಿಲ್ಲ ಎಂದರೆ ಇನ್ನೇನು ಮಾಡಲು ಸಾಧ್ಯ ಎಂದು ಬಿಗ್ ಬಾಸ್‌ಗೆ ಇರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *