‘ಇಂಗ್ಲೆಂಡ್​ ಮಹಾರಾಣಿ’ಗೆ Bigg Bossನಲ್ಲಿ ಭಾರೀ ಅವಮಾನ: ಅಶ್ವಿನಿ ಗೌಡ ಅವ್ರನ್ನ ಪ್ಲೀಸ್​ ಬಿಟ್ಟುಬಿಡಿ- ವೀಕ್ಷಕರ ಆ | Bigg Boss Ashwini Gowda Fasting Inside House Netizens Trolls Suc

‘ಇಂಗ್ಲೆಂಡ್​ ಮಹಾರಾಣಿ’ಗೆ Bigg Bossನಲ್ಲಿ ಭಾರೀ ಅವಮಾನ: ಅಶ್ವಿನಿ ಗೌಡ ಅವ್ರನ್ನ ಪ್ಲೀಸ್​ ಬಿಟ್ಟುಬಿಡಿ- ವೀಕ್ಷಕರ ಆ | Bigg Boss Ashwini Gowda Fasting Inside House Netizens Trolls Suc


19

ಉಪವಾಸದ ಚರ್ಚೆ

Image Credit : Instagram

ಉಪವಾಸದ ಚರ್ಚೆ

ಬಿಗ್​ಬಾಸ್​ನಲ್ಲಿ (Bigg Boss) ಸದ್ಯ ಅಶ್ವಿನಿ ಗೌಡ ಅವರ ಉಪವಾಸ ಸತ್ಯಾಗ್ರಹದ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿಯೂ ಹವಾ ಸೃಷ್ಟಿಸುತ್ತಿದೆ. ಕಾಫಿ ಕಪ್​ನಿಂದ ರಘು ಜೊತೆ ಶುರುವಾದ ಜಗಳ ಅಶ್ವಿನಿ ಗೌಡ ಅವರ ಉಪವಾಸದವರೆಗೆ ಬಂದು ತಲುಪಿದೆ.

29

ಆಗಿದ್ದೇನು?

Image Credit : Instagram

ಆಗಿದ್ದೇನು?

ಅಷ್ಟಕ್ಕೂ ಆಗಿದ್ದೇನೆಂದರೆ, ಅಶ್ವಿನಿ ಗೌಡ ಅವರು ತಾವು ಕುಡಿದ ಕಾಫಿ ಕಪ್​ ಅನ್ನು ತೊಳೆದಿರಲಿಲ್ಲ. ಆ ಬಗ್ಗೆ ರಘು ಪ್ರಶ್ನಿಸಿದ್ದರು. ಆದರೆ ಅದಕ್ಕೆ ಅಶ್ವಿನಿ ತಮ್ಮದೇ ಆದ ರೀತಿಯಲ್ಲಿ ಉತ್ತರ ಕೊಟ್ಟು ರಘು ಅವರ ಕೋಪಕ್ಕೆ ಕಾರಣವಾಗಿದ್ದರು.

39

ಕಪ್​ ವಿಷ್ಯದಲ್ಲಿ ಜಗಳ

Image Credit : Instagram

ಕಪ್​ ವಿಷ್ಯದಲ್ಲಿ ಜಗಳ

ತಮಗೆ ಬೆನ್ನು ನೋವು ಇರುವ ಕಾರಣ, ಈಗ ಮಾಡಲು ಆಗಲ್ಲ, ಹತ್ತು ನಿಮಿಷ ಬಿಟ್ಟು ಕಪ್​ ತೊಳೆಯುತ್ತೇನೆ ಎಂದಾಗ ಮೊದಲೇ ರೇಗಿದ್ದ ರಘು, ಹತ್ತು ನಿಮಿಷದಲ್ಲಿ ನೋವು ಹೋಗತ್ತಾ ಎಂದಾಗ ಇದು ಅಶ್ವಿನಿ ಗೌಡ (Bigg Boss Ashwini Gowda) ಅವರ ಇಗೋ ಹರ್ಟ್​ ಮಾಡಿದೆ.

49

ಸಮರ್ಥನೆ ಹೀಗೆ

Image Credit : Instagram

ಸಮರ್ಥನೆ ಹೀಗೆ

ಇಬ್ಬರ ನಡುವೆ ಇದೇ ವಿಷಯಕ್ಕೆ ಜಗಳವಾಗಿ, ಅಲ್ಲಿರುವ ಇತರ ಸ್ಪರ್ಧಿಗಳು ಒಬ್ಬೊಬ್ಬರ ಪರ ವಹಿಸಿಕೊಂಡು ಮಾತನಾಡಿದ್ದಾರೆ. ಅಷ್ಟಕ್ಕೂ ಅಶ್ವಿನಿ ಅವರ ಹೆಸರು ಹೇಳಿ ಕರೆದದ್ದು, ಅಶ್ವಿನಿ ಅವರಿಗೆ ಕೋಪ ತರಿಸಿದೆ. ಇದು ತುಂಬಾ ವಿಚಿತ್ರವಾಗಿದೆ ಎಂದು ರಘು ಹೇಳಿದ್ದಾರೆ.

59

ರಘು ಪ್ರಶ್ನೆ

Image Credit : Instagram

ರಘು ಪ್ರಶ್ನೆ

ಜಾಹ್ನವಿ ಈ ಬಗ್ಗೆ ಪ್ರಶ್ನೆ ಮಾಡಲು ಬಂದಾಗ, “ಹೆಸರು ಕರೆದರೂ ಅವರಿಗೆ ಬೇಸರ ಆಗತ್ತಾ?” ಎಂದು ಅಚ್ಚರಿಕೆಯಿಂದ ಕೇಳಿದ್ದಾರೆ. ಹಾಗಿದ್ರೆ ಇನ್ಮುಂದೆ ಅವರು ಊಟನೇ ಮಾಡಲ್ವಾ ಎಂದು ಧ್ರುವಂತ್‌ ಕೇಳಿದ್ದಾರೆ.

69

ಅಶ್ವಿನಿ ಗೌಡ ಉಪವಾಸ

Image Credit : Instagram

ಅಶ್ವಿನಿ ಗೌಡ ಉಪವಾಸ

ಯಾರು ಹೇಳಿದರೂ ಅಶ್ವಿನಿ ಗೌಡ ಊಟ ಮಾಡುತ್ತಿಲ್ಲ. ನನಗೆ ತುಂಬಾ ಹರ್ಟ್​ ಆಗಿದೆ ಎಂದಿದ್ದಾರೆ. ಇದರ ಬಗ್ಗೆ ಈಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ.

79

ಇಂಗ್ಲೆಂಡ್​ ರಾಣಿಗೆ ಮೋಸ!

Image Credit : Facebook

ಇಂಗ್ಲೆಂಡ್​ ರಾಣಿಗೆ ಮೋಸ!

ಪಾಪ ಇಂಗ್ಲೆಂಡ್​ ರಾಣಿಗೆ ಮಹಾ ಮೋಸ ಆಗಿ ಬಿಟ್ಟಿದೆ ಎಂದು ತಮಾಷೆ ಮಾಡಿರುವ ನೆಟ್ಟಿಗರು, ಮೊದಲು ಇತರರಿಗೆ ಗೌರವ ಕೊಟ್ಟು ಆಮೇಲೆ ಗೌರವ ತೆಗೆದುಕೊಳ್ಳುವುದನ್ನು ಕಲಿಯಬೇಕು. ಬೇರೆಯವರಿಗೆ ರೆಸ್​ಪೆಕ್ಟ್​ ಕೊಟ್ಟರಷ್ಟೇ, ಇವರಿಗೂ ಗೌರವ ಕೊಡೋದು ಎನ್ನುತ್ತಿದ್ದಾರೆ ನೆಟ್ಟಿಗರು.

89

ಅಶ್ವಿನಿ ಗೌಡ ನಾಟಕ?

Image Credit : colors kannada facebook

ಅಶ್ವಿನಿ ಗೌಡ ನಾಟಕ?

ಬಿಗ್​ಬಾಸ್​​ ಮನೆಯಲ್ಲಿ ಏನು ಮಾಡಿದರೂ ನಡೆಯತ್ತೆ, ಸುಲಭದಲ್ಲಿ ತಾವು ಹೊರಕ್ಕೆ ಹೋಗುವುದಿಲ್ಲ ಎನ್ನುವುದು ಅಶ್ವಿನಿ ಅವರಿಗೆ ದೃಢವಾಗಿರುವ ಕಾರಣ ಇಂಥದ್ದೆಲ್ಲಾ ನಾಟಕ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಉಪವಾಸ ಮಾಡಿ ಹೆಚ್ಚೂ ಕಮ್ಮಿಯಾದರೆ ಕಷ್ಟ, ಬೇಗ ಅವರನ್ನು ಮನೆಯಿಂದ ಹೊರಕ್ಕೆ ಕಳಿಸಿ ಎಂದು ಕಾಲೆಳೆಯುತ್ತಿದ್ದಾರೆ.

99

ಹೊರಕ್ಕೆ ಹೋಗಲ್ಲ ಬಿಡಿ

Image Credit : Instagram

ಹೊರಕ್ಕೆ ಹೋಗಲ್ಲ ಬಿಡಿ

ಒಟ್ಟಿನಲ್ಲಿ ಅಶ್ವಿನಿ ಗೌಡ ಪರ ಇರುವ ವೀಕ್ಷಕರು ತುಂಬಾ ಕಮ್ಮಿ. ಆದರೂ ಅವರು ಇಷ್ಟುಬೇಗ ಬಿಗ್​ಬಾಸ್​ನಿಂದ ಹೊರಕ್ಕೆ ಹೋಗುವುದಿಲ್ಲ ಎನ್ನುವುದೂ ಅಷ್ಟೇ ದಿಟ ಎಂದು ತಮ್ಮದೇ ಆದ ರೀತಿಯಲ್ಲಿ ಹೇಳಿಕೆಗಳನ್ನು ಮೊದಲಿನಿಂದಲೂ ಸೋಷಿಯಲ್​ ಮೀಡಿಯಾದಲ್ಲಿ ಬರುತ್ತಲೇ ಇದೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗವನ್ನು ಅನ್ವೇಷಿಸಿ. ಚಲನಚಿತ್ರ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿಗಳಲ್ಲಿ ನಾಟಕ ಮತ್ತು ಮನರಂಜನಾ ಜಗತ್ತಿನಲ್ಲಿ ಟ್ರೆಂಡ್‌ಸ್ಪಾಟಿಂಗ್‌ನೊಂದಿಗೆ ನವೀಕೃತವಾಗಿರಿ. ತೆರೆಮರೆಯ ಕಥೆಗಳು, OTT ಬಿಡುಗಡೆಗಳು ಮತ್ತು ರೆಡ್ ಕಾರ್ಪೆಟ್ ಕ್ಷಣಗಳನ್ನು ಅನ್ವೇಷಿಸಿ. ಗ್ಲಿಟ್ಜ್, ಗ್ಲಾಮರ್ ಮತ್ತು ಮನರಂಜನೆಗೆ ಇದು ನಿಮ್ಮ ಒಂದು-ನಿಲುಗಡೆ ತಾಣವಾಗಿದೆ.



Source link

Leave a Reply

Your email address will not be published. Required fields are marked *