ಬಿಗ್ ಬಾಸ್ (ಬಿಗ್ ಬಾಸ್) ಮನೆ ಒಳಗೆ ಪ್ರವೇಶ ಪಡೆದ ಬಳಿಕ ಅಲ್ಲಿ ಹೊರ ಜಗತ್ತಿನ ಸಂಪರ್ಕ ಇರೋದೇ ಇಲ್ಲ. ಮಾಡಿದರೂ ಮನೆಯವರನ್ನು ಸಂಪರ್ಕಿಸಲು ಸಾಧ್ಯವಾಗುವುದೇ ಇಲ್ಲ. ಆದರೆ, ಈ ಬಾರಿ ಕೆಲವು ಸ್ಪರ್ಧಿಗಳು ತಲೆ ಉಪಯೋಗಿಸಿ ಹೊರಗಿನ ಕೋಡ್ವರ್ಡ್ ಸೆಟ್ ಮಾಡಿಕೊಂಡು ಬಂದಿದ್ದಾರಂತೆ. ಈ ವಿಚಾರವನ್ನು ಸುದೀಪ್ ಹೇಳಿದ್ದು ಅನೇಕರಿಗೆ ಶಾಕ್ ಆಗಿದೆ ಎಂದರೂ ತಪ್ಪಾಗಲಾರದು.
ಬಿಗ್ ಬಾಸ್ ಮನೆಗೆ ಹೋದ ಮೇಲೆ ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಇಡೀ ಸೀಸನ್ ನಲ್ಲಿ ಒಮ್ಮೆ ಅಥವಾ ಎರಡು ಬಾರಿಯೋ ಸ್ಪರ್ಧಿಗಳಿಗೆ ಮನೆಯವರ ಜೊತೆ ಮಾತನಾಡಲು ಅವಕಾಶ ಸಿಗುತ್ತದೆ. ಒಂದೊಮ್ಮೆ ಹೊರಗೆ ನೆಗೆಟಿವ್ ಹೋಗುತ್ತಿದ್ದರೂ ಆ ಮಾಹಿತಿ ಸ್ಪರ್ಧಿಗಳಿಗೆ ಸಿಗೋದೇ ಇಲ್ಲ. ಈ ಕಾರಣದಿಂದಲೇ ಕೆಲವು ದಾರಿ ತಪ್ಪೋದು. ಆದರೆ, ಈ ಬಾರಿ ಸ್ಪರ್ಧಿಗಳು ಮನೆಯ ಹೊರಗೆ ಕೋಡ್ ವರ್ಡ್ ಮಾಡಿಟ್ಟುಕೊಂಡು ಬಂದಿದ್ದಾರೆ.
‘ಹೊರಗೆ ಏನಾಗ್ತಿದೆ ಎಂಬ ವಿಚಾರವನ್ನು ಗುಟ್ಟಾಗಿ ತಿಳಿಸಲಾಗುತ್ತಿದೆ ಎಂಬ ವಿಷಯ ನಮಗೆ ಗೊತ್ತಾಗಿದೆ. ನಮಗೆ ಬಹಳ ಚೆನ್ನಾಗಿದೆ ಗೊತ್ತಿದೆ. ಡಿಸೈನರ್ ಜೊತೆ ಈ ರೀತಿ ಅಂಡರ್ ಸ್ಟಾಂಡಿಂಗ್ ಇದೆ ಅಂತ ಗೊತ್ತಿರಲಿಲ್ಲ. ಕೆಂಪು ಬಟ್ಟೆ ಕಳುಹಿಸಿದ್ದೀವಿ ಎಂದರೆ, ನಿಮ್ಮ ಬಗ್ಗೆ ಹೊರಗೆ ನೆಗೆಟಿವ್ ಚರ್ಚೆ ಆಗ್ತಿದೆ ಎಂದರ್ಥ. ಹಸಿರು ಬಣ್ಣದ ಬಟ್ಟೆ ಕಳುಹಿಸಿದ್ರೆ ಪಾಸಿಟಿವ್ ಎಂದರ್ಥವಂತೆ’ ಎಂದರು ಸುದೀಪ್.
ಇದನ್ನೂ ಓದಿ
‘ಕೋಡ್ಗಳನ್ನು ಡೀಕೋಡ್ ಮಾಡಲು ಎತ್ತಿದ ಕೈ ನಮ್ಮದು. ಈ ವಿಚಾರ ನಮ್ಮವರೆಗೆ ಬರಲ್ಲ ಎಂದು ಅನೇಕರು ಅಂದುಕೊಂಡಿರುತ್ತಾರೆ. ಆದರೆ, ಈ ರೀತಿಯ ವಿಚಾರ ಬಂದುಬಿಡ್ತದೆ. ಬಟ್ಟೆ ಬಟ್ಟೆಯಾಗಿರುತ್ತದೆ. ಕೋಡ್ವರ್ಡ್ ಆಗಬಾರದು. ಇದರಿಂದ ನೀವು ಹೊರ ಹೋಗುವಂತೆ ಆಗಬಾರದು’ ಎಂದರು ಸುದೀಪ್. ಇದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ‘ಹೀಗೆ ಮುಂದುವರಿದರೆ ಜನ ಬಿಗ್ ಬಾಸ್ ನೋಡೋದು ಬಿಡ್ತಾರೆ’; ಕೆಲವರ ಬಗ್ಗೆ ಸುದೀಪ್ ಅಸಮಾಧಾನ
‘ಇಷ್ಟು ವರ್ಷಗಳಲ್ಲಿ ಈ ರೀತಿ ಯಾರೂ ಮಾಡಲಿಲ್ಲ. ಆದರೆ, ನಮಗೆ ಈಗ ಈ ವಿಚಾರ ತಿಳಿದು ಬಂದಿದೆ’ ಎಂದು ಸುದೀಪ್ ಹೇಳಿದರು. ಇದನ್ನು ಮಾಡಿದ್ದು ಯಾರು ಇರಬಹುದು ಎಂಬ ಕತೂಹಲ ಅನೇಕರಿಗೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.