Kavya Shaiva: ಕಿರುತೆರೆ ನಟಿ, ಬಿಗ್ ಬಾಸ್ ಬೆಡಗಿ ಕಾವ್ಯ ಶೈವ ಇಲ್ಲಿವರೆಗೂ ತುಂಬಾನೆ ಬ್ಯುಸಿಯಾಗಿದ್ದರು, ಮೂರು ತಿಂಗಳು ಬಿಗ್ ಬಾಸ್, ಬಳಿಕ ಹಲವು ಇಂಟರ್ವ್ಯೂ, ಕಾರ್ಯಕ್ರಮ ಮುಗಿಸಿ, ಇದೀಗ ನಟಿ ನೆಮ್ಮದಿ ಹುಡುಕಿಕೊಂಡು ಎಲ್ಲೋ ಹೊರಟಂತಿದೆ.

‘ಕೆಂಡ ಸಂಪಿಗೆ’ ಧಾರಾವಾಹಿಯಲ್ಲಿ ಸುಮನಾ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ಕಾವ್ಯ ಶೈವ. ಆ ಸೀರಿಯಲ್ ಅರ್ಧದಲ್ಲಿ ಬಿಟ್ಟರೂ ಸಹ ಕಾವ್ಯಾ ಪಾತ್ರವನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ನಂತರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಭಾಗವಹಿಸಿ ವಿನ್ನರ್ ಕೂಡ ಆಗಿದ್ದರು ಕಾವ್ಯ.

ಅದಾದ ಬಳಿಕ ಕಾವ್ಯಾ ಶೈವ ಚಂದನವನಕ್ಕೆ ಕಾಲಿಡುವ ದೊಡ್ಡ ಆಫರ್ ಸಿಕ್ಕಿ ಬಿಡ್ತು. ಅವರು ಯಶ್ ತಾಯಿ ಪುಷ್ಪಾ ನಿರ್ಮಾಣ ಮಾಡಿರುವ ಕೊತ್ತಲವಾಡಿ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಕೂಡ ಹಿಟ್ ಆಗಿತ್ತು.

ಇನ್ನು ಕಾವ್ಯಾಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಅಂದ್ರೆ ಅದು ಬಿಗ್ ಬಾಸ್. ಇತ್ತೀಚೆಗಷ್ಟೇ ಮುಗಿದ ಸೀಸನ್ ನಲ್ಲಿ ಕಾವ್ಯಾ ತಮ್ಮ ಒಳ್ಳೆಯತನ, ಪ್ರೌಢ ಮಾತು ಹಾಗೂ ತಮ್ಮ ಗುಣ ನಡತೆಯಿಂದಲೇ ಜನಮನ ಗೆದ್ದರು. ಗಿಲ್ಲಿ ಮತ್ತು ಕಾವ್ಯಾ ಜೋಡಿಯನ್ನು ಸಹ ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.

ಬಿಗ್ ಬಾಸ್ ಮುಗಿದ ಬಳಿಕ ಕಾವ್ಯಾ ಶೈವ ಹಲವಾರು ಟಿವಿ ಸಂದರ್ಶನಗಳಲ್ಲಿ, ಕಾರ್ಯಕ್ರಮಗಳಲ್ಲಿ, ಟಿವಿ ಶೋಗಳಲ್ಲಿ ತುಂಬಾನೆ ಬ್ಯುಸಿಯಾಗಿದ್ದರು. ಮೂರು ತಿಂಗಳು ಬಿಗ್ ಬಾಸ್, ನಂತರ ಕಾರ್ಯಕ್ರಮಗಳು ಎಂದು ನಟಿ ತಮಗೆ ಸಮಯ ಕೊಡಲಾರದಷ್ಟು ಬ್ಯುಸಿಯಾಗಿದ್ದರು. ಇದೀಗ ನಟಿ ಬ್ರೇಕ್ ತೆಗೆದುಕೊಂಡಿದ್ದಾರೆ.

ಇದೀಗ ಕಾವ್ಯ ನೆಮ್ಮದಿ ಹುಡುಕಿ ತಮ್ಮ ಗ್ರಾಮಕ್ಕೆ ಅಜ್ಜಿಮನೆಗೆ ಹೊರಟಿದ್ದಾರೆ. ಅಲ್ಲಿನ ಸುಂದರ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಾವ್ಯಾ ಶೈವ ‘ನೆಮ್ಮದಿ’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ಅಜ್ಜಿಮನೆಯ ತೆಂಗು, ಅಡಿಕೆ ತೋಟದಲ್ಲೆಲ್ಲಾ ಅಲೆದಾಡಿ, ಎಳನೀರು ಕುಡಿದು, ಕೈತುಂಬಾ ಗಾಜಿನ ಬಳೆ ತೊಟ್ಟು, ಅಜ್ಜಿ ಮನೆ ಮುಂದೆ ಕುಳಿತು ಅಜ್ಜಿಮನೆ= ನೆಮ್ಮದಿ ಎಂದು ಬರೆದುಕೊಂಡಿದ್ದಾರೆ. ಇನ್ನು ಜನರು ನೀವು ಗಿಲ್ಲಿ ಜೊತೆ ಇದ್ರೆನೆ ನೆಮ್ಮದಿ ಕಾಣ್ತೀರಿ ಎಂದು ಬರೆದುಕೊಂಡಿದ್ದಾರೆ.

Source link
ಬಿಗ್ ಬಾಸ್ ಬಳಿಕ ‘ನೆಮ್ಮದಿ’ ಹುಡುಕಿ ಯಾರ ಮನೆಗೆ ಹೋದ್ರು ನಟಿ Kavya Shaiva?