ಚೀನಾದಲ್ಲಿ ಡ್ರೋನ್​ ಹಾರಿಸಲು ಹೋಗಿ ಚೀನಿ ಬೆಡಗಿ ಜೊತೆ Bigg Boss ಪ್ರತಾಪನ ಡ್ಯುಯೆಟ್​!

ಚೀನಾದಲ್ಲಿ ಡ್ರೋನ್​ ಹಾರಿಸಲು ಹೋಗಿ ಚೀನಿ ಬೆಡಗಿ ಜೊತೆ Bigg Boss ಪ್ರತಾಪನ ಡ್ಯುಯೆಟ್​!

ಚೀನಾದಲ್ಲಿ ಡ್ರೋನ್​ ಹಾರಿಸಲು ಹೋಗಿ ಚೀನಿ ಬೆಡಗಿ ಜೊತೆ Bigg Boss ಪ್ರತಾಪನ ಡ್ಯುಯೆಟ್​!

ವಿವಾದಗಳಿಂದಲೇ ಖ್ಯಾತರಾಗಿದ್ದ ಡ್ರೋನ್ ಪ್ರತಾಪ್, ಬಿಗ್ ಬಾಸ್ ಮೂಲಕ ಮತ್ತೆ ಜನಪ್ರಿಯತೆ ಗಳಿಸಿದ್ದರು. ಇದೀಗ ಚೀನಾಕ್ಕೆ ಹಾರಿದ್ದು, ಅಲ್ಲಿ ಚೀನಿ ಯುವತಿಯೊಂದಿಗೆ ಕಾಣಿಸಿಕೊಂಡು ಡ್ರೋನ್ ಬಗ್ಗೆ ಪಾಠ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಡ್ರೋನ್​ ಪ್ರತಾಪ್​ (Drone Pratap) ಎರಡು ವರ್ಷಗಳ ಹಿಂದೆ ಭಾರಿ ಸದ್ದು ಮಾಡಿದ ಹೆಸರು. ಡ್ರೋನ್​ ತಯಾರಿಸುವುದಾಗಿ ಹೇಳಿ ಘಟಾನುಘಟಿಗಳು, ದಿಗ್ಗಜರನ್ನೇ ಯಾಮಾರಿಸಿ ಸದ್ದು ಮಾಡಿದ್ದರು ಡ್ರೋನ್​ ಪ್ರತಾಪ್​. ತಾವೊಬ್ಬ ಸೈಂಟಿಸ್ಟ್​ ಎಂದು ಹೇಳಿ, ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಛಾನ್ಸ್​ ಗಿಟ್ಟಿಸಿಕೊಂಡು, ತಮ್ಮ ಬಡತನದ ಕಟ್ಟುಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿ ಕೊನೆಗೆ ತಗ್ಲಾಕ್ಕೊಂಡು ಜೈಲಿಗೂ ಹೋಗಿ ಬಂದರು.

ಇಷ್ಟು ಕಾಂಟ್ರವರ್ಸಿಯಾದ ಬಳಿಕ ಬಿಗ್​ಬಾಸ್​ನಲ್ಲಿ ಅವಕಾಶ ಸಿಗದಿದ್ದರೆ ಹೇಗೆ? ಬಿಗ್​ಬಾಸ್​ನಲ್ಲಿ ಅವಕಾಶ ಗಿಟ್ಟಿಸಿಕೊಂಡು ಬಿಗ್​ಬಾಸ್​ ಡ್ರೋನ್​ ಪ್ರತಾಪ್​ (Bigg Boss Drone Pratap) ಆದ ಪ್ರತಾಪ್​, ಕೊನೆಗೆ ಸೆಲೆಬ್ರಿಟಿಯಾದರು. ವಿವಿಧ ರಿಯಾಲಿಟಿ ಷೋಗಳಲ್ಲಿ, ವಿವಿಧ ಫಂಕ್ಷನ್​ಗಳಲ್ಲಿ ಛಾನ್ಸ್​ ಗಿಟ್ಟಿಸಿಕೊಂಡು ಅಭಿಮಾನಿಗಳ ಸಂಖ್ಯೆಯನ್ನು ಏರಿಸಿಕೊಂಡರು. ಮಾತಿನಲ್ಲಿಯೇ ಎಂಥವರನ್ನೂ ಮೋಡಿ ಮಾಡುವ ತಾಕತ್ತು ಮೊದಲಿನಿಂದಲೂ ಇರುವ ಹಿನ್ನೆಲೆಯಲ್ಲಿ ತಮ್ಮ ಸೊಗಸಾದ ಮಾತುಗಳಿಂದಲೇ ದೊಡ್ಡ ಅಭಿಮಾನಿ ಬಳಗವನ್ನು ಸ್ಥಾಪಿಸಿಕೊಂಡಿರುವ ಡ್ರೋನ್​ ಪ್ರತಾಪ್​ ಈಗ ಚೀನಾಕ್ಕೆ ಹಾರಿದ್ದಾರೆ.

ಚೀನಾದಲ್ಲಿ ಚೀನಿ ಬೆಡಗಿಯ ಜೊತೆ ಡ್ಯುಯೆಟ್​ ಹಾಡುತ್ತಾ ಅದರ ವಿಡಿಯೋ ಮಾಡಿರುವ ಡ್ರೋನ್​ ಪ್ರತಾಪ್​, ಅಲ್ಲಿರುವ ಕೆಲವು ದಿಗ್ಗಜರಿಗೆ ಡ್ರೋನ್​ ಬಗ್ಗೆ ಪರಿಚಯಿಸುತ್ತಿದ್ದಾರೆ. ಕಾರಿನಲ್ಲಿ ಚೀನಾದ ಕೆಲವು ಮುಖಂಡರ ಜೊತೆ ಡ್ರೈವ್​ ಮಾಡುತ್ತಾ ಅವರ ಪರಿಚಯವನ್ನೂ ಮಾಡಿಸಿದ್ದಾರೆ ಡ್ರೋನ್​ ಪ್ರತಾಪ್​.

ಅದಾದ ಬಳಿಕ ಒಂದು ವಿಡಿಯೋದಲ್ಲಿ ಡ್ರೋನ್​ ಇರುವುದನ್ನು ನೋಡಬಹುದು. ಇದನ್ನು ನೋಡಿದರೆ ಅಲ್ಲಿ ಡ್ರೋನ್​ ಬಗ್ಗೆ ಪಾಠ ಮಾಡಲು ಹೋಗಿದ್ದಾರೆ ಎಂದು ತಿಳಿಯುತ್ತದೆ.

ಯಾವ್ಯಾವುದೋ ಕಂಪೆನಿಯ ಡ್ರೋನ್​ ಪಾರ್ಟ್​ಗಳನ್ನು ತಂದು ತಾವು ತಯಾರು ಮಾಡಿದ್ದು ಎಂದು ಹೇಳಿ ಸಾಕಷ್ಟು ಹೆಸರು ಕೆಡಿಸಿಕೊಂಡಿದ್ದ ಡ್ರೋನ್​, ಅದರಿಂದ ಪಾಠ ಕಲಿತು ಇದೀಗ ಒಳ್ಳೆಯ ರೀತಿಯಲ್ಲಿ ನಡೆಯಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.

ಇವರ ವಿಡಿಯೋಗೆ ಇದಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗೆ ಬೆಳವಣಿಗೆ ಸಾಗಲಿ ಎಂದು ಹಲವರು ಆಶೀರ್ವದಿಸುತ್ತಿದ್ದಾರೆ. ಆದರೆ ಹಿಂದೆ ಮಾಡಿದ ತಪ್ಪು ಮತ್ತೆ ಮಾಡಬೇಡ, ಒಮ್ಮೆ ಹೋಗಿರೋ ಮಾನ ಬಿಗ್​ಬಾಸ್​ನಿಂದಾಗಿ ವಾಪಸ್​ ಬಂದಿದೆ, ಮತ್ತದೇ ತಪ್ಪು ಮಾಡಬೇಡ ಎಂದು ಅವರ ಅಭಿಮಾನಿಗಳು ಕಮೆಂಟ್​ನಲ್ಲಿ ತಿಳಿಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *