ಬಿಗ್ಬಾಸ್ ಸ್ಪರ್ಧಿ ಗಿಲ್ಲಿ ನಟ, ತಮ್ಮ ತರ್ಲೆಗೆ ಹೆಸರುವಾಸಿ. ತಮ್ಮ ಮೃತ ಅಜ್ಜಿಯ ಶ್ರದ್ಧಾಂಜಲಿ ಬ್ಯಾನರ್ಗೆ ಬಾಲಿವುಡ್ ನಟಿ ಮತ್ತು ತೆಲುಗು ಹೀರೋಯಿನ್ರ ಕಣ್ಣು, ತುಟಿಗಳನ್ನು ಸೇರಿಸಿ, ತಮ್ಮ ಕುಟುಂಬದವರಿಗೆ ಶಾಕ್ ನೀಡಿದ ಘಟನೆಯನ್ನು ಅವರು ಬಿಗ್ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದಾರೆ.
ಬಿಗ್ಬಾಸ್ ಗಿಲ್ಲಿ ನಟ (Bigg Boss Gilli Nata) ಬಿಗ್ಬಾಸ್ ಮನೆಯಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ತರ್ಲೆಗೆ ಫೇಮಸ್. ಇದೇ ಕಾರಣಕ್ಕೆ ಕಾಮಿಡಿ ಷೋನಲ್ಲಿಯೂ ಅವರು ಫೇಮಸ್ ಆಗಿದ್ದು, ಬಿಗ್ಬಾಸ್ನಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿರೋದು.

ಇದೀಗ ಗಿಲ್ಲಿ ನಟ, ಮೃತಪಟ್ಟ ಅಜ್ಜಿಯ ಶ್ರದ್ಧಾಂಜಲಿ ಬ್ಯಾನರ್ನಲ್ಲಿ ಮಾಡಿರುವ ಕಿತಾಪತಿಯ ಬಗ್ಗೆ ಸಹ ಸ್ಪರ್ಧಿಗಳ ಜೊತೆ ನೆನಪು ಹಂಚಿಕೊಂಡಿದ್ದಾರೆ.

ನನ್ನ ಅಜ್ಜಿಗೆ ಒಂದು ಕಣ್ಣು ಇರಲಿಲ್ಲ, ತುಂಬಾ ವಯಸ್ಸಾಗಿತ್ತು. ಅವರು ಮೃತಪಟ್ಟ ಬಳಿಕ ಶ್ರದ್ಧಾಂಜಲಿ ಬ್ಯಾನರ್ ಮಾಡಿಸಲು ಅಜ್ಜಿಯ ಫೋಟೋ ಕೊಟ್ಟರು ಎಂದು ಹೇಳುತ್ತಲೇ ತಾವು ಮಾಡಿರುವ ಕಿತಾಪತಿಯ ಬಗ್ಗೆ ತಿಳಿಸಿದ್ದಾರೆ.

ಅಜ್ಜಿ ನೋಡಲು ಚೆನ್ನಾಗಿ ಫೋಟೋದಲ್ಲಿ ಕಾಣಿಸುತ್ತಿರಲಿಲ್ಲವಾದ್ದರಿಂದ ಕಣ್ಣು ಮತ್ತು ಹುಬ್ಬಿನ ಜಾಗದಲ್ಲಿ ಬಾಲಿವುಡ್ ನಟಿಯ ಹುಬ್ಬು-ಕಣ್ಣು ಹಾಕಿಸಿದೆ. ತೆಲುಗು ಹೀರೋಯಿನ್ ತುಟಿ ಹಾಕಿದೆ. ಕೊನೆಗೆ ನನ್ನ ಅಪ್ಪ-ದೊಡ್ಡಪ್ಪ ಬಂದು ನೋಡಿ ಶಾಕ್ ಆದರು ಎಂದು ಗಿಲ್ಲಿನಟ ಹೇಳಿದ್ದಾರೆ.

ಬ್ಯಾನರ್ ನೋಡಿ ಅಜ್ಜಿಯ ಶ್ರದ್ಧಾಂಜಲಿ ಬ್ಯಾನರ್ ಎಂದು ಗೊತ್ತೇ ಆಗಲಿಲ್ಲ ಅವರಿಗೆ. ಊರಲ್ಲಿ ಬೇರೆ ಯಾರೋ ಸತ್ತುಹೋಗಿದ್ದಾರೆ ಎಂದರು. ಅಲ್ಲ ಅವ್ರು ನಮ್ಮ ಅಜ್ಜಿನೇ ಎಂದಾಗ ಅವರು ಸುಸ್ತಾಗಿ ಹೋದರು ಎಂದು ತಾವು ಮಾಡಿರುವ ಕಿತಾಪತಿ ಹೇಳಿದ್ದಾರೆ.

Source link
ಮೃತಪಟ್ಟ ಅಜ್ಜಿಯನ್ನೂ ಬಿಡದ Bigg Boss ಗಿಲ್ಲಿ ನಟ: ಶ್ರದ್ಧಾಂಜಲಿ ಬ್ಯಾನರ್ನಲ್ಲಿ ನಟಿಯ ಕಣ್ಣು-ಬಾಯಿ!