Headlines

ಕೊಟ್ಟ ಮಾತಿಗೆ ತಪ್ಪಿದ Bigg Boss ಗಿಲ್ಲಿ ನಟ? ಟ್ಯಾಟೂ ಹಾಕಿಸಿಕೊಂಡ ಫ್ಯಾನ್​ ಕೆಂಡಾಮಂಡಲ

ಕೊಟ್ಟ ಮಾತಿಗೆ ತಪ್ಪಿದ Bigg Boss ಗಿಲ್ಲಿ ನಟ? ಟ್ಯಾಟೂ ಹಾಕಿಸಿಕೊಂಡ ಫ್ಯಾನ್​ ಕೆಂಡಾಮಂಡಲ

ಕೊಟ್ಟ ಮಾತಿಗೆ ತಪ್ಪಿದ Bigg Boss ಗಿಲ್ಲಿ ನಟ? ಟ್ಯಾಟೂ ಹಾಕಿಸಿಕೊಂಡ ಫ್ಯಾನ್​ ಕೆಂಡಾಮಂಡಲ
ಬಿಗ್​ಬಾಸ್​ 12 ವಿನ್ನರ್​ ಗಿಲ್ಲಿ ನಟ, ಗೆಲುವಿನ ನಂತರ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ, ತನ್ನ ಟ್ಯಾಟೂ ಹಾಕಿಸಿಕೊಂಡಿದ್ದ ಅಭಿಮಾನಿಗೆ ನೀಡಿದ್ದ ಭೇಟಿಯ ಮಾತನ್ನು ಮರೆತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ನೊಂದ ಅಭಿಮಾನಿ, ಸಂದರ್ಶನವೊಂದರಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಬಿಗ್​ಬಾಸ್​ 12 ವಿನ್ನರ್​ ಗಿಲ್ಲಿ ನಟ (Bigg Boss 12 Winner Gilli Nata) ಸದ್ಯ ಆಕಾಶದಲ್ಲಿ ತೇಲುತ್ತಿದ್ದಾರೆ. ಬಿಗ್​ಬಾಸ್​ ವಿನ್​ ಆಗುತ್ತಲೇ ಸಿನಿಮಾ ಸೆಲೆಬ್ರಿಟಿಗಳಿಗಿಂತಲೂ, ರಾಜಕಾರಣಿಗಿಂತಲೂ ಒಂದು ಹಂತ ಮೇಲೆ ಹೋಗಿದ್ದಾರೆ. ಇವರ ಒಂದು ಝಲಕ್​ಗಾಗಿ ಹೋದಲ್ಲಿ ಬಂದಲ್ಲಿ ಲಕ್ಷಾಂತರ ಅಭಿಮಾನಿಗಳು ಕಾದು ಕುಳಿತುಕೊಳ್ಳುತ್ತಿದ್ದಾರೆ.

ಇದಾಗಲೇ ಹಲವು ನಟರು, ರಾಜಕಾರಣಿಗಳು, ವಿವಿಧ ಫಂಕ್ಷನ್​ಗಳು, ವಿವಿಧ ಮಾಧ್ಯಮಗಳು… ಹೀಗೆ ಒಂದರ ಮೇಲೊಂದರಂತೆ ಗಿಲ್ಲಿ ನಟ ಸಕತ್​ ಬಿಜಿ. ಸದ್ಯ ಈ ಬಿಗ್​ಬಾಸ್​ ಹವಾ ಮುಗಿಯುವವರೆಗೂ ಗಿಲ್ಲಿ ನಟನಿಗೆ ಬಿಡುವೇ ಇಲ್ಲದ ಕಾರ್ಯಕ್ರಮಗಳು ಒಂದೊಂದಾಗಿ ಬರುತ್ತಿವೆ.

ಇವುಗಳ ಮಧ್ಯೆ, ಗಿಲ್ಲಿ ನಟ ತಮ್ಮ ಟ್ಯಾಟೂ ಅಭಿಮಾನಿಯನ್ನು ಮರೆತುಬಿಟ್ಟಿದ್ದಾರೆ! ಗಿಲ್ಲಿ ನಟ ಅವರು ತಮ್ಮ ಅಭಿಮಾನಿಯೊಬ್ಬರು, ತಮ್ಮ ಫೋಟೋದ ಟ್ಯಾಟೂ ಹಾಕಿಸಿಕೊಂಡ ಬಗ್ಗೆ ಬಿಗ್​ಬಾಸ್​ ಸಮಯದಲ್ಲಿ ತುಂಬಾ ಖುಷಿಪಟ್ಟು ಶ್ಲಾಘನೆ ವ್ಯಕ್ತಪಡಿಸಿದ್ದರು. ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಅವರನ್ನು ಖಂಡಿತವಾಗಿಯೂ ಭೇಟಿಯಾಗುತ್ತೇನೆ ಎಂದಿದ್ದರು.

ಈ ಅಭಿಮಾನಿ, ಗಿಲ್ಲಿ ನಟನ ಟ್ಯಾಟೂ ಹಾಕಿಸಿಕೊಳ್ಳುತ್ತಲೇ ಸೋಷಿಯಲ್​ ಮೀಡಿಯಾದ ಹೀರೋ ಆದರು. ಮಾಧ್ಯಮಗಳಲ್ಲಿ ಸಂದರ್ಶನವನ್ನೂ ನೀಡುವ ಮಟ್ಟಿಗೆ ಬಂದರು. ಇವರು ಯಾವಾಗ ಇಷ್ಟು ಫೇಮಸ್​ ಆದರೋ, ಆಗ ಇನ್ನೂ ಕೆಲವರು ಗಿಲ್ಲಿ ನಟ ಟ್ಯಾಟೂ ಹಾಕಿಸಿಕೊಂಡು ಫೇಮಸ್​ ಆಗಲು ಹವಣಿಸಿದರು. ಅವರಲ್ಲಿ ಕೆಲವರು ಅಲ್ಲಿ ಇಲ್ಲಿ ಕಾಣಿಸಿಕೊಂಡರೆ, ಮತ್ತೆ ಕೆಲವರು ಬೆಳಕಿಗೆ ಬರಲೇ ಇಲ್ಲ!

ಆದರೆ ಮೊದಲಿಗೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಇದೀಗ ಭಾರಿ ಗರಂ ಆಗಿದ್ದಾರೆ. ಅದಕ್ಕೆ ಕಾರಣ, ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ನಾನು ಅವರನ್ನು ಭೇಟಿಯಾಗುತ್ತೇನೆ ಎಂದು ಗಿಲ್ಲಿ ನಟ ಹೇಳಿದ್ದರಂತೆ. ಆದರೆ ಇಷ್ಟುದಿನವಾದರೂ ಭೇಟಿಯಾಗಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ಕೆಂಡಾಮಂಡಲ ಆಗಿದ್ದಾರೆ.

ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು, ಎಲ್ಲ ಸೆಲೆಬ್ರಿಟಿಗಳು, ಖ್ಯಾತನಾಮರನ್ನು ಬಿಟ್ಟು ಗಿಲ್ಲಿ ನಟನ ಟ್ಯಾಟೂ ಹಾಕಿಸಿಕೊಂಡೆ. ಅವರಿಗೆ ಸರಸ್ವತಿ ಒಲಿದಿದೆ, ಒಳ್ಳೆಯ ಕಲಾವಿದ ಎಂದುಕೊಂಡು ಹಾಕಿಸಿಕೊಂಡೆ. ಆ ಬಳಿಕ ಅವರು ಮನೆಯಿಂದ ಹೊರಕ್ಕೆ ಬಂದ ಮೇಲೆ ಭೇಟಿಯಾಗುವೆ ಅಂದರು. ಆದರೆ ಇದುವರೆಗೂ ಪತ್ತೆ ಇಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ಗಿಲ್ಲಿ ನಟ ಸದ್ಯ ಸಕತ್​ ಬಿಜಿ ಇರುವ ಕಾರಣ, ಅವರಿಗೆ ಭೇಟಿಯಾಗಲು ಸಮಯ ಸಿಗದೇ ಹೋಗಿರಬಹುದು. ಆದರೆ ಅವರನ್ನು ಭೇಟಿಯಾಗಿ ಫೋಟೋ ಕ್ಲಿಕ್ಕಿಸಿ ಸ್ಟಾರ್​ ಆಗುವ ಹಂಬಲ ಇರುವ ಇವರಿಗೆ ಇದು ಬೇಸರ ತರಿಸಿರುವುದು ಸಹಜವೇ.

Source link

Leave a Reply

Your email address will not be published. Required fields are marked *