Bigg Boss ಗಿಲ್ಲಿ ನಟ- ರಘು ನಡುವೆ ನಿಜಕ್ಕೂ ಏನಾಯ್ತು? ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ಯಾಕೆ? ಗಿಲ್ಲಿ ರಿಯಾಕ್ಷನ್‌

Bigg Boss ಗಿಲ್ಲಿ ನಟ- ರಘು ನಡುವೆ ನಿಜಕ್ಕೂ ಏನಾಯ್ತು? ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ಯಾಕೆ? ಗಿಲ್ಲಿ ರಿಯಾಕ್ಷನ್‌

Bigg Boss ಗಿಲ್ಲಿ ನಟ- ರಘು ನಡುವೆ ನಿಜಕ್ಕೂ ಏನಾಯ್ತು? ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ಯಾಕೆ? ಗಿಲ್ಲಿ ರಿಯಾಕ್ಷನ್‌

ಬಿಗ್‌ಬಾಸ್‌ 12ರ ಸ್ಪರ್ಧಿ ಮ್ಯೂಟಂಟ್‌ ರಘು ಅವರು ಸಹ ಸ್ಪರ್ಧಿ ಗಿಲ್ಲಿ ನಟ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗಿಲ್ಲಿ ನಟ, ತಮಗೆ ಇದರ ಅರಿವಿಲ್ಲವೆಂದೂ, ತಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂದಿದ್ದು ಹೇಳಿದ್ದೇನು?

ಬಿಗ್‌ಬಾಸ್‌ 12 ಮುಗಿದು ತಿಂಗಳುಗಳೇ ಕಳೆದರೂ ಇಂದಿಗೂ ಅದರ ಹವಾ ನಿಂತಿಲ್ಲ. ಈ ಬಾರಿಯ ಸ್ಪರ್ಧಿಗಳು ಸ್ವಲ್ಪ ಹೆಚ್ಚೇ ಎನ್ನುವ ರೀತಿಯಲ್ಲಿ ಸೌಂಡ್‌ ಮಾಡುತ್ತಿದ್ದಾರೆ.

ಇದೀಗ ಮ್ಯೂಟಂಟ್‌ ರಘು ಅವರು ಗಿಲ್ಲಿ ನಟ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿರುವುದು ಭಾರಿ ಸುದ್ದಿ ಮಾಡುತ್ತಿದೆ. ಅಷ್ಟಕ್ಕೂ ಬಿಗ್‌ಬಾಸ್‌ನಲ್ಲಿ ಇವರಿಬ್ಬರು ಚೆನ್ನಾಗಿಯೇ ಇದ್ದರು. ಗಿಲ್ಲಿ ರಘು ಅಣ್ಣ ಎಂದೇ ಸಂಬೋಧಿಸುತ್ತಿದ್ದರು. ಹೀಗಿರುವಾಗ ಏಕಾಏಕಿ ಆಗಿದ್ದೇನು ಎನ್ನುವ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.

ಇದರ ಬಗ್ಗೆ ಇದೀಗ ಗಿಲ್ಲಿ ನಟ (Bigg Boss Gilli Nata) ರಿಸ್‌ಪಾನ್ಸ್‌ ಮಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, ನಾನು ಮತ್ತು ರಘು ಅಣ್ಣ ತುಂಬಾ ಚೆನ್ನಾಗಿದ್ದೇವೆ, ನಮ್ಮಿಬ್ಬರ ನಡುವೆ ಏನೂ ಸಿಟ್ಟು, ಜಗಳ ಇಲ್ಲ ಎಂದಿದ್ದಾರೆ.

ನಾನು ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವೇ ಇಲ್ಲ. ಫಾಲೋ, ಅನ್‌ಫಾಲೋ ಬಗ್ಗೆ ನಾನು ಗಮನಿಸುವುದೂ ಇಲ್ಲ. ಯಾರ್‍ಯಾರು ಫಾಲೋವರ್ಸ್ ಎನ್ನುವ ಬಗ್ಗೆಯೂ ನನಗೆ ಅಷ್ಟೆಲ್ಲಾ ಗೊತ್ತಿಲ್ಲ. ನಾನು ರಘು ಅವರನ್ನು ಫಾಲೋ ಮಾಡುತ್ತಿಲ್ಲ ಎನ್ನುವ ವಿಷಯ ಕೂಡ ನನಗೆ ತಿಳಿದಿಲ್ಲ ಎಂದಿದ್ದಾರೆ.

ಬಹುಶಃ ನಾನು ಫಾಲೋ ಮಾಡ್ತಿಲ್ಲ ಎಂದು ಅವರು ಹಾಗೆ ಮಾಡಿರಬಹುದು. ನನಗೆ ಅದರ ಬಗ್ಗೆ ಐಡಿಯಾನೇ ಇಲ್ಲ. ಆದರೆ ನನ್ನ ಮತ್ತು ರಘು ಅಣ್ಣ ತುಂಬಾ ಸ್ನೇಹಿತರಾಗಿದ್ದೇವೆ. ಯಾವ ವೈಮನಸ್ಸೂ ಇಲ್ಲ ಎಂದು ಹೇಳಿದ್ದಾರೆ.

ಅಷ್ಟಕ್ಕೂ ಗಿಲ್ಲಿ ನಟ ಮತ್ತು ರಘು ಅವರ ನಡುವೆ ಏನಾಗಿದೆ ಎನ್ನುವುದು ಅಭಿಮಾನಿಗಳಿಗೆ ಇನ್ನೂ ಸಸ್ಪೆನ್ಸ್‌ ಆಗಿಯೇ ಉಳಿದಿದೆ. ಗಿಲ್ಲಿ ನಟ ತಮಗೆ ಇದರ ಬಗ್ಗೆ ಅರಿವಿಲ್ಲ ಎನ್ನುತ್ತಿದ್ದರೂ, ರಘು ಅವರಿಗೆ ಏನಾದ್ರೂ ಆಯ್ತಾ ಎಂದು ಪ್ರಶ್ನಿಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *