Bigg Boss ಗಿಲ್ಲಿ ಲೈಫ್​ ಜಿಂಗಾಲಾಲಾ: ಇನ್ಮುಂದೆ ಗಂಟೆ ಲೆಕ್ಕದಲ್ಲಿ ಸಂಪಾದನೆ- ಎಷ್ಟು ದುಡೀತಾರೆ ನೋಡಿ

Bigg Boss ಗಿಲ್ಲಿ ಲೈಫ್​ ಜಿಂಗಾಲಾಲಾ: ಇನ್ಮುಂದೆ ಗಂಟೆ ಲೆಕ್ಕದಲ್ಲಿ ಸಂಪಾದನೆ- ಎಷ್ಟು ದುಡೀತಾರೆ ನೋಡಿ

Bigg Boss ಗಿಲ್ಲಿ ಲೈಫ್​ ಜಿಂಗಾಲಾಲಾ: ಇನ್ಮುಂದೆ ಗಂಟೆ ಲೆಕ್ಕದಲ್ಲಿ ಸಂಪಾದನೆ- ಎಷ್ಟು ದುಡೀತಾರೆ ನೋಡಿ
ಬಿಗ್​ಬಾಸ್​ ಸೀಸನ್​ 12ರಲ್ಲಿ ದಾಖಲೆಯ 37 ಕೋಟಿಗೂ ಅಧಿಕ ವೋಟ್ ಪಡೆದು ಗಿಲ್ಲಿ ನಟ ಜಯಿಸಿದ್ದಾರೆ. ಈ ಗೆಲುವಿನಿಂದಾಗಿ ಅವರ ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದ್ದು, ಈವೆಂಟ್‌ಗಳು, ಜಾಹೀರಾತುಗಳಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುವ ಸಾಧ್ಯತೆ ಇದೆ.
ಬಿಗ್​ಬಾಸ್​ ಸೀಸನ್​ 12 (Bigg Boss Season 12) ಗಿಲ್ಲಿ ನಟ ಬಿಗ್​ಬಾಸ್​ ಇತಿಹಾಸದಲ್ಲಿಯೇ ದಾಖಲೆ ಬರೆದಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚು ವೋಟ್​ ಅಂದರೆ 37 ಕೋಟಿಗೂ ಅಧಿಕ ವೋಟ್​ ಪಡೆದು ಜಯ ಸಾಧಿಸಿದ್ದಾರೆ.

ಒಮ್ಮೆ ಬಿಗ್​ಬಾಸ್ ಮನೆ ಹೊಕ್ಕು ಬಂದರೇನೇ ಸಾಕು, ಅವಕಾಶಗಳ ಸುರಿಮಳೆಯೇ ಸಿಗುತ್ತದೆ. ಅಂಥದ್ದರಲ್ಲಿ ಬಿಗ್​ಬಾಸ್​ ವಿನ್​ ಆಗುವುದು ಎಂದರೆ, ಅದು ನೆಕ್ಸ್ಟ್​ ಲೆವೆಲ್​. ಅವರು ಸಿನಿಮಾ ಸೆಲೆಬ್ರಿಟಿಗಳನ್ನೂ ಮೀರಿಸುವ ಲೆವಲ್​ಗೆ ಬೆಳೆಯುವ ಹಿನ್ನೆಲೆಯಲ್ಲಿ, ಭರಪೂರ ಅವಕಾಶಗಳು ಸಿಗುತ್ತವೆ.

ಇದೀಗ ಗಿಲ್ಲಿ ನಟ ವಿನ್​ ಆಗಿರುವ ಕಾರಣದಿಂದ ಹಾಗೂ ಇದಾಗಲೇ ಅವರ ಯುಟ್ಯೂಬ್​ನಲ್ಲಿ ಫಾಲೋವರ್ಸ್​ ಸಂಖ್ಯೆ 18 ಲಕ್ಷಕ್ಕೆ ಏರಿರುವ ಕಾರಣದಿಂದ, ಅವರ ತಿಂಗಳ ಲೆಕ್ಕಾಚಾರ ಹಾಕಿದ್ರೆ ಕನಿಷ್ಠ ಇನ್ನೊಂದು ಹತ್ತು ವರ್ಷ ಗಿಲ್ಲಿ ತಿಂಗಳಿಗೆ ಲಕ್ಷ ಲಕ್ಷ ಮೀರಿ ದುಡಿಮೆ ಮಾಡುವ ಸಾಧ್ಯತೆ ಇದೆ.

’ಪ್ರಶಾಂತ್​ ಟಾಕ್ಸ್’​ನಲ್ಲಿ ಇದರ ಬಗ್ಗೆ ವಿವರಣೆ ನೀಡಲಾಗಿದೆ. ಹೇಗೆ ಗಿಲ್ಲಿ ನಟ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡಬಹುದು ಎನ್ನುವ ಬಗ್ಗೆ ಪ್ರಶಾಂತ್​ ಅವರು ವಿವರಿಸಿದ್ದಾರೆ.

ಇದಾಗಲೇ ಗಿಲ್ಲಿ 50 ಲಕ್ಷ ಕ್ಯಾಷ್​ ಪ್ರೈಜ್​ ಸೇರಿದಂತೆ ಹಲವಾರು ಉಡುಗೊರೆಗಳನ್ನು ಪಡೆದಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಅವರ ಸಂಪಾದನೆ ಇನ್ನಷ್ಟು ಹೆಚ್ಚಾಗಲಿದೆ. ಇಂಥ ಸೆಲೆಬ್ರಿಟಿಗಳನ್ನು ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಬರಮಾಡಿಕೊಳ್ಳುತ್ತಾರೆ. ಅಂಥ ಸಮಯದಲ್ಲಿ ಅವರಿಗೆ ಗಂಟೆಗಳ ಲೆಕ್ಕದಲ್ಲಿ ಲಕ್ಷ ಲಕ್ಷ ಹಣ ನೀಡಲಾಗುತ್ತದೆ.

ಕೆಲವು ಈವೆಂಟ್​ ಕಂಪೆನಿಗಳು ಮೂರ್ನಾಲ್ಕು ಗಂಟೆ ಇಂಥ ಸೆಲೆಬ್ರಿಟಿಗಳು ಬಂದರೆ 4-5 ಲಕ್ಷ ರೂಪಾಯಿ ನೀಡುತ್ತಾರೆ. ಅದರಲ್ಲಿಯೂ ಗಿಲ್ಲಿಯು ಕೇವಲ ಬಿಗ್​ಬಾಸ್​ ವಿನ್ನರ್​ ಮಾತ್ರವಲ್ಲ. ಉತ್ತಮ ಕಲಾವಿದ. ಪಟಕ್ಕನೆ ಏನೋ ಹೇಳಿ ಜನರನ್ನು ನಗಿಸುವ ತಾಕತ್ತು ಅವರಲ್ಲಿ ಇದೆ. ಆದ್ದರಿಂದ ಅವರಿಗೆ ವ್ಯಾಲ್ಯೂ ಇನ್ನೂ ಹೆಚ್ಚಿರುತ್ತದೆ ಎನ್ನುವ ಬಗ್ಗೆ ಇವರು ವಿವರಣೆ ನೀಡಿದ್ದಾರೆ.

ಪ್ರತಿಯೊಂದು ಈವೆಂಟ್​ಗೂ ಏನಿಲ್ಲವೆಂದರೂ 2 ರಿಂದ 3 ಲಕ್ಷ ರೂಪಾಯಿ ಅತ್ಯಂತ ಸುಲಭವಾಗಿ ಸಂಪಾದನೆ ಮಾಡಬಹುದು. ಇಷ್ಟೇ ಅಲ್ಲದೇ ಕಾಮಿಡಿ ಷೋಗಳಲ್ಲಿಯೂ ಈಗ ಇವರ ವ್ಯಾಲ್ಯೂ ಹೆಚ್ಚಾಗುವ ಕಾರಣ, ಅಲ್ಲಿಯೂ ಅವರು ಹೆಚ್ಚಿನ ಚಾರ್ಜ್​ ಮಾಡಬಹುದು. ಅಷ್ಟೇ ಅಲ್ಲದೇ ಇನ್​ಸ್ಟಾಗ್ರಾಮ್​ನಲ್ಲಿ ಅವರ ಫಾಲೋವರ್ಸ್​ ಸಂಖ್ಯೆ 18 ಲಕ್ಷಕ್ಕೆಏರಿರುವ ಕಾರಣದಿಂದ ಕೊಲಾಬರೇಷನ್​ ಪೋಸ್ಟ್​, ಜಾಹೀರಾತು ಇತ್ಯಾದಿಗಳಲ್ಲಿ ಒಂದೊಂದಕ್ಕೂ ಒಂದರಿಂದ ಎರಡು ಲಕ್ಷ ರೂಪಾಯಿ ನೀಡಲಾಗುತ್ತದೆ. ಇವನ್ನೆಲ್ಲಾ ಲೆಕ್ಕ ಹಾಕಿದರೆ ಇನ್ಮುಂದೆ ಗಿಲ್ಲಿ ನಟ ಗಂಟೆಗಳಲ್ಲಿ ಲಕ್ಷ ಲಕ್ಷ ದುಡಿಯಲಿದ್ದಾರೆ ಎಂದು ಉದಾಹರಣೆ ಸಹಿತ ಪ್ರಶಾಂತ್​ ಅವರು ವಿವರಣೆ ನೀಡಿದ್ದಾರೆ.

Source link

Leave a Reply

Your email address will not be published. Required fields are marked *