ಬಿಗ್ಬಾಸ್ ಖ್ಯಾತಿಯ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಗಿಲ್ಲಿ ನಟ ನಾವು ಸ್ನೇಹಿತರಷ್ಟೇ ಎಂದರೂ, ಅವರ ತಾಯಿ ಮಗ ಇಷ್ಟಪಟ್ಟ ಹುಡುಗಿಯ ಜೊತೆ ಮದುವೆ ಮಾಡಿಸುವುದಾಗಿ ಹೇಳಿದ್ದಾರೆ. ಅಭಿಮಾನಿಗಳು, ಕಾವ್ಯಾ ಅವರನ್ನೇ ಮದುವೆ ಮಾಡಿಸೋ ಪಟ್ಟು ಹಿಡಿದಿದ್ದಾರೆ.

ಈಗ ಎಲ್ಲೆಲ್ಲೂ ಬಿಗ್ಬಾಸ್ ಗಿಲ್ಲಿ ನಟನ ಹವಾ. ಗಿಲ್ಲಿ ಹೆಸರು ಕೇಳಿಬರುತ್ತಿದ್ದಂತೆಯೇ ಅವರ ಹೆಸರಿನ ಜೊತೆ ಕಾವ್ಯಾ ಶೈವ ಹೆಸರು ಕೂಡ ಕೇಳಿಬರುತ್ತಿದೆ. ಅಷ್ಟಕ್ಕೂ ಇವರೇನು ಬಿಗ್ಬಾಸ್ ಮನೆಯಲ್ಲಿ ಲವರ್ಸ್ ರೀತಿಯೇನೂ ವರ್ತಿಸಿರಲಿಲ್ಲ. ಆದರೆ ಗಿಲ್ಲಿ ನಟ ಮಾತ್ರ ಕಾವು ಕಾವು ಎಂದು ತಮಾಷೆ ಮಾಡುತ್ತಿದ್ದರು ಅಷ್ಟೇ.

ಆದರೆ ಬಿಗ್ಬಾಸ್ ಮನೆಯಲ್ಲಿ ಇವರ ಜೋಡಿ ನೋಡಿ ಇಷ್ಟಪಟ್ಟವರು ಹಲವರು. ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದೇ ಅಂದುಕೊಂಡವರೂ ಹಲವರು. ಆದ್ದರಿಂದ ಇವರಿಬ್ಬರ ಮದುವೆ ಮಾಡಿಸಲು ಮುಂದಾಗಿದ್ದಾರೆ.

ಗಿಲ್ಲಿ ನಟ (Bigg Boss Gilli Nata) ಹೊರಕ್ಕೆ ಬಂದಾಗ ಕಾವ್ಯಾ ಶೈವ ಬಗ್ಗೆ ಕೇಳಿದ ಮಾತಿಗೆ, ನಾವಿಬ್ಬರೂ ಸ್ನೇಹಿತರು ಅಷ್ಟೇ. ಅಂಥದ್ದೇನೂ ಇಲ್ಲ ಎಂದಿದ್ದರು. ಆದರೆ ಅವರ ಕೆಲವು ಅಭಿಮಾನಿಗಳು ಮಾತ್ರ ಬಿಡುತ್ತಿಲ್ಲ. ಕಾವ್ಯಾ ಶೈವ ನಮಗೆ ಇಷ್ಟ ಆಗಿದ್ದಾಳೆ. ಇಬ್ಬರನ್ನೂ ಮದುವೆ ಮಾಡಿಸುತ್ತೇವೆ ಎನ್ನುತ್ತಿದ್ದಾರೆ.

ಅತ್ತ ಗಿಲ್ಲಿ ನಟನ ಮದುವೆಯ ಬಗ್ಗೆ ಕೇಳಿದ ಮಾತಿಗೆ ಅವರ ತಾಯಿ, ಅವನು ನಮಗೆ ಇಷ್ಟು ಕೀರ್ತಿ ತಂದುಕೊಟ್ಟಿದ್ದಾನೆ. ಅವನು ಇಷ್ಟಪಟ್ಟ ಹುಡುಗಿಯ ಜೊತೆ ನಾವು ಮದುವೆ ಮಾಡಿಸುತ್ತೇವೆ. ಅವನು ಯಾರನ್ನೇ ಇಷ್ಟಪಟ್ಟರೂ, ಅವರ ಜೊತೆ ಮದುವೆ ಮಾಡಿಸುತ್ತೇವೆ ಎಂದಿದ್ದಾರೆ.

ಇಷ್ಟು ಹೇಳುತ್ತಿದ್ದಂತೆಯೇ ಗಿಲ್ಲಿ ನಟನ ಅಭಿಮಾನಿಗಳು ಕಾವ್ಯಾ ಅವರನ್ನು ಎತ್ತಾಕಿಕೊಂಡು ಬಂದು ಮದುವೆ ಮಾಡಿಸುವುದಾಗಿ ಮಾಧ್ಯಮಗಳಿಗೆ ಹೇಳಿಕೆ ಕೊಡುತ್ತಿದ್ದಾರೆ. ನಮಗೆ ಅವರಿಬ್ಬರ ಜೋಡಿ ಇಷ್ಟ ಆಗಿರುವ ಕಾರಣ ಅವರನ್ನು ಮದುವೆ ಮಾಡಿಸಿಯೇ ತೀರುತ್ತೇವೆ ಎನ್ನುತ್ತಿದ್ದಾರೆ.

Source link
BBK ಗಿಲ್ಲಿ ಮದ್ವೆಗೆ ಅಮ್ಮನ ಗ್ರೀನ್ ಸಿಗ್ನಲ್: ಕಾವ್ಯಾಳನ್ನು ಎತ್ತಾಕ್ಕೊಂಡು ಬಂದು ಮದ್ವೆ ಮಾಡಿಸ್ತೀವಿ ಎಂದ ಫ್ಯಾನ್ಸ್!