Bigg boss ಗಿಲ್ಲಿ ನಟನ ಮುಗಿಯದ ಹವಾ! ಪರೀಕ್ಷೆಯಲ್ಲೂ ಗಿಲ್ಲಿ ಕುರಿತ ಬಿಟ್ಟಸ್ಥಳ ತುಂಬಿ; ಏನಿದು ಪ್ರಶ್ನೆ?

Bigg boss ಗಿಲ್ಲಿ ನಟನ ಮುಗಿಯದ ಹವಾ! ಪರೀಕ್ಷೆಯಲ್ಲೂ ಗಿಲ್ಲಿ ಕುರಿತ ಬಿಟ್ಟಸ್ಥಳ ತುಂಬಿ; ಏನಿದು ಪ್ರಶ್ನೆ?

Bigg boss ಗಿಲ್ಲಿ ನಟನ ಮುಗಿಯದ ಹವಾ! ಪರೀಕ್ಷೆಯಲ್ಲೂ ಗಿಲ್ಲಿ ಕುರಿತ ಬಿಟ್ಟಸ್ಥಳ ತುಂಬಿ; ಏನಿದು ಪ್ರಶ್ನೆ?
ಬಿಗ್​ಬಾಸ್​ 12ರ ಸ್ಪರ್ಧಿ ಗಿಲ್ಲಿ ನಟನ ಜನಪ್ರಿಯತೆ ಹೊಸ ಮೈಲಿಗಲ್ಲು ತಲುಪಿದೆ. ಪ್ರಥಮ ಪಿಯುಸಿಯದ್ದು ಎನ್ನಲಾದ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯೊಂದರಲ್ಲಿ ಗಿಲ್ಲಿ ಕುರಿತು ಪ್ರಶ್ನೆ ಕೇಳಲಾಗಿದ್ದು, ಈ ಪತ್ರಿಕೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಬಿಗ್​ಬಾಸ್​ 12 ಹಿಂದೆಂದಿಗಿಂತಲೂ ಹೆಚ್ಚಿನ ಹವಾ ಸೃಷ್ಟಿಸಿರೋದು ಬಿಗ್​ಬಾಸ್​​ ಫ್ಯಾನ್ಸ್​ಗೆ ಗೊತ್ತಿರುವ ವಿಷಯವೇ. ಅದರಲ್ಲಿಯೂ ಗಿಲ್ಲಿ ನಟ ಐತಿಹಾಸಿಕ ದಾಖಲೆ ಬರೆದಿದ್ದಾರೆ.

ಸಾಮಾನ್ಯವಾಗಿ ಬಿಗ್​ಬಾಸ್​ ಸೀಸನ್​ ಮುಗಿದ ಮೇಲೆ ಒಂದಷ್ಟು ದಿನಗಳಲ್ಲಿಯೇ ಅದರ ಹವಾ ಕಡಿಮೆಯಾಗುತ್ತದೆ. ಆದರೆ ಈ ಬಾರಿ ಮಾತ್ರ ಗಿಲ್ಲಿಯ ಕ್ರೇಜ್​ ಒಂದು ಲೆವೆಲ್​ ಮೇಲಕ್ಕೆ ಹೋಗಿದೆ.

ಇದೀಗ ಪ್ರಥಮ ಪಿಯುಸಿಯದ್ದು ಎನ್ನಲಾದ ಪ್ರಶ್ನೆ ಪತ್ರಿಕೆಯೊಂದು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. fan_of_givya ಸೇರಿದಂತೆ ಹಲವು ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ.

ಇದರಲ್ಲಿ ಗಿಲ್ಲಿ ನಟನ ಕುರಿತಾದ ಪ್ರಶ್ನೆಯೊಂದು ಬಂದಿದೆ. ಬಿಟ್ಟ ಸ್ಥಳ ತುಂಬುವ ಪ್ರಶ್ನೆ ಅದು. ಇಂಗ್ಲಿಷ್​ನಲ್ಲಿ ಇರುವ ಈ ಪ್ರಶ್ನೆ ಪತ್ರಿಕೆಯನ್ನು ನೋಡಿ ಗಿಲ್ಲಿ ಫ್ಯಾನ್ಸ್​ ಫುಲ್ ಖುಷ್​ ಆಗಿದ್ದಾರೆ. ಅವರ ಜೀವನದ ಪಠ್ಯವೂ  ಬರಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು.

ಗ್ರಾಮರ್​ ವಿಭಾಗದಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದೆ. Gilli stood on the Bigg Boss stage — pride after the grand finale — Kannada ‘Big Boss season 12’ among all the contestants, he reached vicotry to determination and support — the audience ಎನ್ನುವ ಪ್ರಶ್ನೆ ಇದಾಗಿದೆ. ಬಿಟ್ಟ ಸ್ಥಳದಲ್ಲಿ From, With In, Under ಅನ್ನು ಫಿಲ್​ ಮಾಡಬೇಕು.

ಈ ವಾಕ್ಯದ ತಾತ್ಪರ್ಯ ಹೇಳುವುದಾದರೆ, ಬಿಗ್ ಬಾಸ್ ವೇದಿಕೆಯಲ್ಲಿ ನಿಂತ ಗಿಲ್ಲಿ ಗ್ರ್ಯಾಂಡ್ ಫಿನಾಲೆಯ ನಂತರ ದೃಢನಿಶ್ಚಯ ಮತ್ತು ಬೆಂಬಲದೊಂದಿಗೆ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ, ಕನ್ನಡ ಬಿಗ್ ಬಾಸ್ ಸೀಸನ್ 12 ವಿಜಯವನ್ನು ಪಡೆದರು ಎನ್ನುವುದು. ಒಟ್ಟಿನಲ್ಲಿ ಗಿಲ್ಲಿ ನಟ ಪ್ರಶ್ನೆ ಪತ್ರಿಕೆಯಲ್ಲಿಯೂ ಬರುವ ಹಾಗೆ ಆಗಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.

Source link

Leave a Reply

Your email address will not be published. Required fields are marked *