ಬಿಗ್ ಬಾಸ್ ಹಾಗೂ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ ಖ್ಯಾತಿಯ ನಟಿ ಹಂಸಾ ನಾರಾಯಣಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಸಿಗರೇಟ್ ಮಾದರಿಯಲ್ಲಿ ಕೇಕ್ ಹಚ್ಚುವ ಮೂಲಕ ವಿಭಿನ್ನವಾಗಿ ಆಚರಿಸಿಕೊಂಡಿದ್ದು, ಈ ವಿಡಿಯೋ ಗಮನ ಸೆಳೆದಿದೆ.
ಬಿಗ್ ಬಾಸ್ ಮನೆಯಲ್ಲಿ 4 ವಾರಗಳ ಕಾಲ ಇದ್ದು ಎಲಿಮಿನೇಟ್ ಆಗಿ ಹೊರಬಂದವರು ಹಂಸಾ ನಾರಾಯಣಸ್ವಾಮಿ ಉರ್ಫ್ ಹಂಸಾ ಪ್ರತಾಪ್. ಬಿಗ್ಬಾಸ್ ಮನೆಯಲ್ಲಿ ಇರುವಷ್ಟು ದಿನ ಹವಾ ಕ್ರಿಯೇಟ್ ಮಾಡಿದ್ದರು. ಇವರು ಸಕತ್ ಸದ್ದು ಮಾಡಿದ್ದು, ಲಾಯರ್ ಜಗದೀಶ್ ಅವರೊಂದಿಗಿನ ಒಡನಾಟದಿಂದಾಗಿ. ಕೊನೆಗೆ ಇಬ್ಬರೂ ಹೊರಕ್ಕೆ ಬಂದರು.

ಇದು ಬಿಗ್ಬಾಸ್ ಹಂಸಾರ ಕಥೆಯಾದ್ರೆ, ಪುಟ್ಟಕ್ಕನ ಮಕ್ಕಳು ರಾಜಿಯಾಗಿ ಎಲ್ಲರ ಮನ ಗೆದ್ದವರು ಹಂಸಾ. ಸವತಿ ಪಾತ್ರಕ್ಕೆ ಜೀವ ತುಂಬಿದ್ದ ರಾಜಿ ಪಾತ್ರಧಾರಿ ಹಂಸಾ ಅವರನ್ನು ಕಾಣದೇ ಅಭಿಮಾನಿಗಳು ಶಾಕ್ ಆಗಿದ್ದರು. ಕೊನೆಗೆ ಹೇಳದೇ ಕೇಳದೇ ಹಂಸಾ ಅವರು, ಸೀರಿಯಲ್ ತಂಡಕ್ಕೆ ಮೋಸ ಮಾಡಿದ್ದಾರೆ ಎಂದು ನಿರ್ದೇಶಕರು ಮಾಧ್ಯಮಗಳ ಎದುರು ಆರೋಪ ಮಾಡಿದ್ದೂ ಆಯಿತು, ಅದಕ್ಕೆ ಹಂಸಾ ತಿರುಗೇಟು ನೀಡಿದ್ದೂ ಆಯ್ತು.

ಇದೀಗ ಹಂಸಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ. ವಿಭಿನ್ನ ರೀತಿಯ ರೀಲ್ಸ್ ಮಾಡುತ್ತಿರುತ್ತಾರೆ. ಇದೀಗ ನಟಿ, ಹುಟ್ಟುಹಬ್ಬವನ್ನೂ ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡು ಅದರ ವಿಡಿಯೋ ಶೇರ್ ಮಾಡಿದ್ದಾರೆ.

ಕೇಕ್ ಮೇಲೆ ಹಂಸಾ ಎಂದು ಬರೆಯಲಾಗಿದೆ. ಸಿಗರೆಟ್ ರೀತಿಯಲ್ಲಿ ಬಾಯಲ್ಲಿ ಕಡ್ಡಿ ಇಟ್ಟು ಅದರ ತುದಿಗೆ ಲೈಟರ್ಯಿಂದ ಲೈಟ್ ಹಚ್ಚಿ ಅದನ್ನು ಕೇಕ್ ಮೇಲೆ ಹಚ್ಚಿದ್ದಾರೆ ನಟಿ. ಕೊನೆಗೆ ಅದನ್ನು ಉಫ್ ಮಾಡಿ ಆಫ್ ಮಾಡಿದ್ದಾರೆ It’s new life ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಈ ಮೂಲಕ ಹೊಸ ವಿಧಾನದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಇನ್ನು ಹಂಸ ಅವರ ಕುರಿತು ಹೇಳುವುದಾದರೆ, ಅವರು ಈ ಹಿಂದೆ, ಧ್ರುವ, ಅಮ್ಮ, ರಾಜಾಹುಲಿ, ಸಖತ್, ಜೇಮ್ಸ್, ಉಂಡೆನಾಮ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ರಿಯಾಲಿಟಿ ಷೋಗಳಲ್ಲಿಯೂ ಭಾಗಿಯಾಗಿದ್ದಾರೆ.

ಅಂದಹಾಗೆ ಹಂಸ ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟಿವ್. ಬಗೆಬಗೆಯ ಡ್ರೆಸ್ ತೊಟ್ಟು ಹಂಸ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇದ್ದಾರೆ. ರೆಡ್ ಬ್ಲೇಜರ್ ತೊಟ್ಟು, ಬ್ಲಾಕ್ ಕಲರ್ ಸೂಟ್, ಮಿಡಿ, ಮಿನಿ, ಫ್ರಾಕ್, ಸಲ್ವಾರ್, ಸೀರೆ… ಹೀಗೆ ವಿಭಿನ್ನ ಉಡುಗೆ ತೊಟ್ಟು ಅವರು ಫೋಟೋಶೂಟ್ ಮಾಡಿಸಿಕೊಂಡಿದ್ದು ಅದರ ಫೋಟೋ ಶೇರ್ ಮಾಡುತ್ತಿರುತ್ತಾರೆ. . ಈ ಫೋಟೋಗಳಿಗೆ ಸಕತ್ ಕಮೆಂಟ್ಗಳ ಸುರಿಮಳೆಯಾಗುತ್ತಿರುತ್ತದೆ. ಅಂದಹಾಗೆ ಹಂಸ ಅವರಿಗೆ ಓರ್ವ ಮಗನಿದ್ದಾನೆ.

Source link
ಸ್ಮೋಕಿಂಗ್ ಸ್ಟೈಲ್ನಲ್ಲಿ ಹುಟ್ಟುಹಬ್ಬದ ದೀಪ ಹಚ್ಚಿದ Bigg Boss ಹಂಸಾ ನಾರಾಯಣಸ್ವಾಮಿ- Video viral