ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..! | Bigg Boss Jahnvi Eliminated And Told The Fact About Gilli Actor Natraj

ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..! | Bigg Boss Jahnvi Eliminated And Told The Fact About Gilli Actor Natraj


ಜನ ಮರುಳೋ.. ಜಾತ್ರೆ ಮರುಳೋ.. ಎಂದ ಸ್ಪರ್ಧಿ
‘ಜಾನು ನೀನು ಗಾನು..’ ಎಂದಿದ್ದ ಗಿಲ್ಲಿ ನಟ
ಕಳೆದ ವಾರ ದೊಡ್ಮನೆಯಿಂದ ಜಾಹ್ನವಿ ಔಟ್
ಜಾಹ್ನವಿ ಜೊತೆ ಬಿಗ್​ ಬಾಸ್ ಮನೆಯ ಕಥೆ..!

ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿರೋ ಸ್ಪರ್ಧಿ ಜಾಹ್ನವಿ. ದೊಡ್ಮನೆಯಲ್ಲಿ ಜಾಹ್ನವಿಗೂ ಗಿಲ್ಲಿಗೂ ಬಹಳಾನೇ ವಾದ ವಾಗ್ವಾದ ನಡೆದಿದ್ವು. ಗಿಲ್ಲಿ ಬಗ್ಗೆ ದೊಡ್ಮನೆಯಿಂದ ಹೊರ ಬಂದಿರೋ ಜಾಹ್ನವಿ ಹೇಳಿದ್ದೇನು..? ನೋಡೋಣ ಬನ್ನಿ.

ಗಿಲ್ಲಿ ಅಂದ್ರೆ ಸಿಲ್ಲಿ.. ಜಾಹ್ನವಿ ಹೇಳಿದ ಇನ್​ಸೈಡ್ ಸ್ಟೋರಿ; ಜನ ಮರುಳೋ.. ಜಾತ್ರೆ ಮರುಳೋ.. ಎಂದ ಬಿಗ್ ಸ್ಪರ್ಧಿ
ಯೆಸ್ ಕಳೆದ ವಾರ ಬಿಗ್​ ಬಾಸ್ ಮನೆಯಿಂದ ಜಾಹ್ನವಿ ಹೊರಬಿದ್ದಿದ್ರು. ಸ್ಟ್ರಾಂಗ್ ಸ್ಪರ್ಧಿಯಾದ್ರೂ ಜಾಹ್ನವಿ ದೊಡ್ಮನೆಯಿಂದ ಆಚೆ ಬಂದಿದ್ದು ವೀಕ್ಷಕರಿಗೆ ಆಶ್ಚರ್ಯ ತಂದಿತ್ತು. ಅದ್ರಲ್ಲೂ ಜಾಹ್ನವಿ , ಅಶ್ವಿನಿ ಸ್ನೇಹ ಬೆಳೆಸಿ ಗಿಲ್ಲಿ ಜೊತೆಗೆ ಜಿದ್ದಿಗೆ ಬಿದ್ದಿದ್ರು.

ಗಿಲ್ಲಿ ಜಾಹ್ನವಿ ನಡುವೆ ಹಲವು ಬಾರಿ ವಾದ ವಿವಾದ ನಡೆದಿದ್ವು. ನೀನು ಸ್ವಯಂಘೋಷಿತ ಬಿಗ್ ಬಾಸ್ ಸೀಸನ್-12 ವಿಜೇತ ಅಂತ ಗಿಲ್ಲಿಗೆ ಜಾನು ರೇಗಿಸಿದ್ರೆ, ಜಾನು ನೀನು ಗಾನು ಅಂತ ಗಿಲ್ಲಿ ಕಿಚಾಯಿಸಿದ್ದ.

ಕೊನೆಗೂ ಗಿಲ್ಲಿ ಮಾತಿನಂತೆಯೇ ಜಾಹ್ನವಿ ಮನೆಯಿಂದ ಹೊರಬಂದಿದ್ದಾರೆ. ಆದ್ರೆ ಹೊರಗೆ ಜನರು ಗಿಲ್ಲಿಯನ್ನ ಇಷ್ಟ ಪಡೋದು ನೋಡಿ ಅವರಿಗೆ ಬೇಸರ ಆಗಿದೆ. ಜನ ಮರಳೋ.. ಜಾತ್ರೆ ಮರಳೋ ಅನ್ನೊ ಜಾಹ್ನವಿ , ಗಿಲ್ಲಿ ಬರೀ ಸಿಲ್ಲಿ ಅಂತಿದ್ದಾರೆ.

ಎಲ್ಲರನ್ನೂ ಕೆಳಗೆ ಹಾಕಿ ಗಿಲ್ಲಿ ತಾನು ಹೀರೋ ಆಗ್ತಿದ್ದಾನೆ ಅಂತಾರೆ ಜಾಹ್ನವಿ . ಒಳಗೆ ನಡೆಯೋ ಪೂರ್ತಿ ವಿಷ್ಯ ಜನಕ್ಕೆ ಗೊತ್ತಾಗಲ್ಲ. ಎಪಿಸೋಡ್​​ನಲ್ಲಿ ಕಾಣೋದಷ್ಟೇ ನಿಜ ಅಲ್ಲ ಅಂತಾರೆ ಜಾಹ್ನವಿ.

ಗಿಲ್ಲಿ ತನ್ನ ಬಗ್ಗೆನೂ ಕೆಟ್ಟದಾಗಿ ಬಿಂಬಿಸಿ ತಾನು ಬಿಗ್​ಬಾಸ್ ನಿಂದಾನೆ ಹೊರಬರುವಂತೆ ಮಾಡಿದ ಅನ್ನೋ ಸಿಟ್ಟು ಜಾಹ್ನವಿಗೆ ಇದ್ದಂತಿದೆ. ಎನಿ ವೇ ಜಾನು ಮತ್ತು ಗಿಲ್ಲಿ ಗಲಾಟೆ ಬಿಗ್​ಬಾಸ್ ನೋಡುಗರಿಗಂತೂ ಸಖತ್ ಮಜಾ ಕೊಡ್ತಾ ಇತ್ತು. ಇನ್ಮುಂದೆ ಬಿಗ್​ಬಾಸ್ ವೀಕ್ಷಕರು ಅದನ್ನ ಪಕ್ಕಾ ಮಿಸ್ ಮಾಡಿಕೊಳ್ತಾರೆ ಅನ್ನೋದಂತೂ ಸತ್ಯ…!
ಹೆಚ್ಚಿನ ಮಾಹಿತಿಗೆ ವೀಡಿಯೋ ನೋಡಿ..



Source link

Leave a Reply

Your email address will not be published. Required fields are marked *