Bigg Bossಗೆ​ ಅಂತ ಸಾಲ ಮಾಡ್ದೆ, ಇನ್ನೂ ಪೇಮೆಂಟೇ ಕೊಟ್ಟಿಲ್ಲ! ಜಾಹ್ನವಿ ಕೋಪಕ್ಕೆ ಇಲ್ಲಿದೆ ಕಾರಣ

Bigg Bossಗೆ​ ಅಂತ ಸಾಲ ಮಾಡ್ದೆ, ಇನ್ನೂ ಪೇಮೆಂಟೇ ಕೊಟ್ಟಿಲ್ಲ! ಜಾಹ್ನವಿ ಕೋಪಕ್ಕೆ ಇಲ್ಲಿದೆ ಕಾರಣ

Bigg Bossಗೆ​ ಅಂತ ಸಾಲ ಮಾಡ್ದೆ, ಇನ್ನೂ ಪೇಮೆಂಟೇ ಕೊಟ್ಟಿಲ್ಲ! ಜಾಹ್ನವಿ ಕೋಪಕ್ಕೆ ಇಲ್ಲಿದೆ ಕಾರಣ

ಬಿಗ್ ಬಾಸ್‌ನಿಂದ ಹೊರಬಂದ ನಂತರವೂ ಆ್ಯಂಕರ್ ಜಾಹ್ನವಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ತಮಗೆ ಇನ್ನೂ ಬಿಗ್ ಬಾಸ್ ಪೇಮೆಂಟ್ ಬಂದಿಲ್ಲ ಮತ್ತು ಸಾಲ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಹೀಗೆ ಹೇಳಿದ್ದು ಯಾಕೆ?

Bigg Bossನಲ್ಲಿ ಎಲ್ಲರಿಗಿಂತ ತಾವು ಸ್ಟ್ರಾಂಗ್​ ಸ್ಪರ್ಧಿಯಾಗಿದ್ದರೂ ತಮ್ಮನ್ನು ಬೇಗನೇ ಮನೆಗೆ ಕಳುಹಿಸಿದರು ಎಂದು ಇದಾಗಲೇ ಆ್ಯಂಕರ್​ ಜಾಹ್ನವಿ ಸಾಕಷ್ಟು ಬಾರಿ ನೊಂದುಕೊಂಡು ನುಡಿದಿದ್ದಾರೆ.

ಅದೇನೇ ಇದ್ದರೂ ಸದ್ಯ ಬಿಗ್​ಬಾಸ್​​ ಮೂಲಕ ಫೇಮಸ್​ ಆಗಿರುವ ಕಾರಣದಿಂದ ಅವರಿಗೆ ಪ್ರಮೋಷನ್​ ಆ್ಯಡ್​ಗಳಂತೂ ಬರುತ್ತಲೇ ಇವೆ. ಸಾಕಷ್ಟು ಅವಕಾಶಗಳೂ ಅವರನ್ನು ಹುಡುಕಿ ಬರುತ್ತಿವೆ. ಆದರೂ ಬಿಗ್​ಬಾಸ್​ ಮೇಲಿನ ಅಸಹನೆ ಅವರನ್ನು ಬಿಟ್ಟಂತೆ ಕಾಣುತ್ತಿಲ್ಲ.

ಇದೀಗ ಅವರು ಬೇಸರದಲ್ಲಿ ಕುಳಿತಿದ್ದಾರೆ. ಅವರ ಸ್ನೇಹಿತೆ ಏಕೆ ಹೀಗೆ ಕುಳಿತಿರುವೆ ಎಂದು ಪ್ರಶ್ನಿಸಿದಾಗ ಜಾಹ್ನವಿ ಅವರು, ಬಿಗ್​ಬಾಸ್​ಗೆ ಎಂದು ತುಂಬಾ ಸಾಲ ಮಾಡಿಬಿಟ್ಟೆ. ಇನ್ನೂ ಪೇಮೆಂಟೇ ಕೊಟ್ಟಿಲ್ಲ. ಸಾಲ ತೀರಿಸೋಕೆ ದುಡ್ಡಿಲ್ಲ ಎಂದು ಹೇಳಿದ್ದಾರೆ.

ಹಾಗೆಂದು ಜಾಹ್ನವಿ ಏನೂ ಬಿಗ್​ಬಾಸ್​ಗೆಂದು ಸಾಲ ಮಾಡಿಕೊಂಡಿದ್ದಾರೋ ಗೊತ್ತಿಲ್ಲ, ಒಂದು ವೇಳೆ ಸಾಲ ಮಾಡಿಕೊಂಡಿದ್ದರೂ, ಅದನ್ನು ತೀರಿಸಲಾಗದಷ್ಟು ಕಷ್ಟದಲ್ಲಿ ಅವರಂತೂ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದಿದ್ದೇ. ಏಕೆಂದರೆ ಇದಾಗಲೇ ಅವರು ಖ್ಯಾತ ಆ್ಯಂಕರ್​, ನಟಿಯಾಗಿ ಸಾಕಷ್ಟು ಫೇಮಸ್​ ಆದವರು.

ಆದರೆ, ಈ ವಿಡಿಯೋದಲ್ಲಿ ಅವರು ಹೀಗೆ ಹೇಳಲು ಕಾರಣ ಏನೆಂದರೆ, ಅದೊಂದು ಜಾಹೀರಾತು ಅಷ್ಟೇ. ರೇಷ್ಮೆ ಸೀರೆ ಕೊಟ್ಟರೆ ಹಣ ಕೊಡುತ್ತಾರೆ ಎನ್ನುವ ಜಾಹೀರಾತಿನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಹಳೆದ ರೇಷ್ಮೆ ಸೀರೆ ಕೊಟ್ಟರೆ ತುಂಬಾ ಹಣ ಬರುತ್ತದೆ ಎಂದು ತೋರಿಸುವ ಜಾಹೀರಾತು ಅದು ಅಷ್ಟೇ.

ಆದರೆ, ಆ ಜಾಹೀರಾತಿಗಾಗಿ ಅವರು ಬಿಗ್​ಬಾಸ್​​ನಿಂದ ತಮಗೆ ಇನ್ನೂ ಪೇಮೆಂಟ್​ ಬಂದಿಲ್ಲ ಎನ್ನುವ ಅಸಮಾಧಾನವನ್ನು ಪರೋಕ್ಷವಾಗಿಯಾದರೂ ಹೊರಹಾಕಿದ್ದಾರೆ, ಜೊತೆಗೆ ಬಿಗ್​ಬಾಸ್​ಗಾಗಿ ಸಾಲ ಮಾಡಿರುವುದಾಗಿ ತಿಳಿಸಿದ್ದಾರೆ. ಅದಕ್ಕಾಗಿ ಈ ಜಾಹೀರಾತಿನ ಮಾರ್ಗವನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *