'Bigg Boss ಬಗ್ಗೆ ಎಲ್ಲಾ ಗೊತ್ತು ಅಂತೀರಾ?' ಎನ್ನುತ್ತಲೇ ಹೊಸ ಪ್ರೊಮೋದಲ್ಲಿ ತಲೆಗೆ ಹುಳ ಬಿಟ್ಟ ಕಿಚ್ಚ ಸುದೀಪ್!

'Bigg Boss ಬಗ್ಗೆ ಎಲ್ಲಾ ಗೊತ್ತು ಅಂತೀರಾ?' ಎನ್ನುತ್ತಲೇ ಹೊಸ ಪ್ರೊಮೋದಲ್ಲಿ ತಲೆಗೆ ಹುಳ ಬಿಟ್ಟ ಕಿಚ್ಚ ಸುದೀಪ್!

'Bigg Boss ಬಗ್ಗೆ ಎಲ್ಲಾ ಗೊತ್ತು ಅಂತೀರಾ?' ಎನ್ನುತ್ತಲೇ ಹೊಸ ಪ್ರೊಮೋದಲ್ಲಿ ತಲೆಗೆ ಹುಳ ಬಿಟ್ಟ ಕಿಚ್ಚ ಸುದೀಪ್!
ಕಿಚ್ಚ ಸುದೀಪ್ ನಿರೂಪಣೆಯ ಬಿಗ್​ಬಾಸ್​ ಕನ್ನಡ ಸೀಸನ್​ 12ಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಚರ್ಚೆಯಾಗುತ್ತಿದ್ದು, ವಜ್ರ ಖಚಿತವಾದ ಹೊಸ ಲೋಗೋ ಮತ್ತು ಕುತೂಹಲಕಾರಿ ಪ್ರೊಮೋಗಳು ವೀಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿವೆ.
ಬಿಗ್​ಬಾಸ್​ ಕನ್ನಡದ ಸೀಸನ್​ 12ಕ್ಕೆ (Bigg Boss Kannada Season 12) ಕೌಂಟ್​ಡೌನ್​ ಶುರುವಾಗಿದೆ. 28ರಿಂದ ಷೋ ಆರಂಭವಾಗಲಿದ್ದು ಐದೇ ದಿನ ಬಾಕಿ ಇದೆ. ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವವರು ಯಾರು ಎನ್ನುವುದು ವೀಕ್ಷಕರಿಗೆ ತಿಳಿಯಬೇಕಿದೆಯಷ್ಟೇ. ಅಷ್ಟಕ್ಕೂ ಇದಾಗಲೇ ಸ್ಪರ್ಧಿಗಳು ಕೂಡ ಅಂತಿಮಗೊಂಡಿದ್ದು, ಎಲ್ಲರ ಹೆಸರುಗಳೂ ರಿವೀಲ್​ ಆಗಿಲ್ಲ. ಅಂತೆ-ಕಂತೆ ಅಡಿ ಕೆಲವರ ಹೆಸರು ರಿವೀಲ್​ ಆಗಿವೆ ಅಷ್ಟೇ. ಆದ್ದರಿಂದ ಯಾರು ಮನೆಯೊಳಕ್ಕೆ ಹೋಗುತ್ತಾರೆ ಎಂದು ನೋಡಲು 28ರ ವರೆಗೆ ಕಾಯಲೇಬೇಕಿದೆ.

ಇದರ ನಡುವೆಯೇ, ಕೆಲವರ ಹೆಸರು ಮುನ್ನೆಲೆಗೆ ಬಂದಿದೆ. ಸಾಗರ್ ಬಿಳಿಗೌಡ, ಸಂಜನಾ ಬುರ್ಲಿ, ಸಮೀರ್ ಎಂಡಿ, ಗಗನ್ ಶ್ರೀನಿವಾಸ್, ದೀಪಿಕಾ ಗೌಡ, ವಿಜಯ್ ಸೂರ್ಯ, ಶ್ವೇತಾ ಪ್ರಸಾದ್, ಪಯಲ್ ಚಂಗಪ್ಪ, ಮೇಘಾ ಶೆಟ್ಟಿ, ಗಗನಾ, ಅರವಿಂದ್ ರತ್ನನ್, ವರುಣ್ ಆರಾಧ್ಯ, ದೀಪಿಕಾ ಗೌಡ, ಧನುಷ್, ಅಮೃಟಾ ರಾಮಾಮೂರ್ತಿ, ಸಿಂಗರ್ ಸುನಿಲ್, ಬಾಲು ಬೆಳಗುಂಡಿ, ತೇಜಸ್ ಗೌಡ, ಆಶ್ ಮೆಲ್ಲೋ, ದಿವ್ಯಾ ವಸಂತ್, ಗೀತಾ ಎಂದು ಹೇಳಲಾಗುತ್ತಿದೆ. ಈ ಲಿಸ್ಟ್​ ಬದಲಾಗುತ್ತಲೇ ಇದೆ.

ಇದಾಗಲೇ ಕಲರ್ಸ್​ ಕನ್ನಡ ವಾಹಿನಿ (Colors Kannada) ಹಲವಾರು ಪ್ರೊಮೋಗಳನ್ನು ರಿಲೀಸ್​ ಮಾಡುತ್ತಲೇ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತಿದೆ. ಗ್ರ್ಯಾಂಡ್ ಓಪನಿಂಗ್ ನಲ್ಲಿ ಕಿಚ್ಚ ಸುದೀಪ್ (Kiccha Sudeep) ಅವರನ್ನು ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ. ಈಗಾಗಲೇ ಕಲರ್ಸ್ ಕನ್ನಡದ ಕೆಲವು ಸೀರಿಯಲ್​ಗಳನ್ನು ಮುಕ್ತಾಯಗೊಳಿಸಲಾಗಿದೆ. ಕೆಲವು ಸೀರಿಯಲ್​ಗಳ ಟೈಮ್​ ಬದಲಾದರೆ, ಮತ್ತೆ ಕೆಲವನ್ನು 1 ಗಂಟೆ ಪ್ರಸಾರ ಮಾಡಿ ಮುಗಿಸಲಾಗುತ್ತಿದೆ.

ಬಿಗ್​ಬಾಸ್​ಗೆ ಕೌಂಟ್​ಡೌನ್​ ಶುರುವಾಗುತ್ತಿದ್ದಂತೆಯೇ ಪ್ರತಿದಿನವೂ ಕಲರ್ಸ್​ ಕನ್ನಡ ವಾಹಿನಿ ಒಂದೊಂದು ಪ್ರೊಮೋ ರಿಲೀಸ್​ ಮಾಡುತ್ತಿದೆ. ಇದೀಗ ಬಿಗ್​ಬಾಸ್​ಗೆ ಐದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಒಂದು ಪ್ರೊಮೋ ರಿಲೀಸ್​ ಮಾಡಿದೆ. ಅದರಲ್ಲಿ ಸುದೀಪ್​ ಅವರನ್ನು ನೋಡಬಹುದು. ಬಿಗ್​ಬಾಸ್​ ಬಗ್ಗೆ ಎಲ್ಲಾ ಗೊತ್ತು ಅನ್ನೋರಿಗೆ ಎನ್ನುತ್ತಲೇ ಕಟ್​ ಆಗಿದೆ. ಇದರಲ್ಲಿ ಶುರುವಾಗಲು 5 ದಿನ ಬಾಕಿ ಎನ್ನುವುದನ್ನು ನೋಡಬಹುದು.

ಹಾಗಿದ್ದರೆ ಬಿಗ್​ಬಾಸ್​ನಲ್ಲಿ ಏನಿರುತ್ತೆ ಎನ್ನುವ ಬಗ್ಗೆ ಕುತೂಹಲ ಶುರುವಾಗಿದೆ. ಅಂದಹಾಗೆ ಈ ಬಾರಿಯ ಬಿಗ್​ಬಾಸ್ ಲೋಗೋದಲ್ಲಿನ ಕಣ್ಣಿನಲ್ಲಿಯೂ ಕುತೂಹಲ ಇರುವುದನ್ನು ನೋಡಬಹುದು. ಅಷ್ಟೇ ಅಲ್ಲದೇ ಇದಾಗಲೇ ನೋಡಿರುವಂತೆ ಈ ಬಾರಿಯ ಬಿಗ್​ಬಾಸ್​ ಕಣ್ಣು ವಜ್ರ ಖಚಿತವಾಗಿದೆ. ಸುಂದರವಾಗಿ ಕಾಣಿಸುತ್ತದೆ. ಹೊಳೆಯುತ್ತಿದೆ. ಅದರಲ್ಲಿಯೂ 12 ಎಂದು ನೋಡಬಹುದು. ಕೆಳಗಿನ ಲಿಂಕ್​ ಓಪನ್​ ಮಾಡಿದ್ರೆ ಅದು ನಿಮಗೆ ಕಾಣಿಸಲಿದೆ…

ಬಿಗ್​ಬಾಸ್​​ ಹಲವಾರು ಭಾಷೆಗಳಲ್ಲಿ ಪ್ರಸಾರ ಆಗುತ್ತಿದೆ. ಪ್ರತಿ ಭಾಷೆಯಲ್ಲಿಯೂ ಪ್ರತಿ ಸೀಸನ್​ನಲ್ಲಿಯೂ ವಿಭಿನ್ನ ರೀತಿಯ ಲೋಗೋ ಕಾಣಿಸುತ್ತದೆ. ಆ ವರ್ಷದ ಥೀಮ್​ಗೆ ತಕ್ಕಂತೆ ಅದರ ಲೋಗೋ ಬದಲಾಗುತ್ತದೆ. ಅದೇ ರೀತಿ ಇದೀಗ ಕನ್ನಡದ 12ನೇ ಸೀಸನ್​ನ ಲೋಗೋ ಪ್ರದರ್ಶಿಸಲಾಗಿದೆ. ಇದನ್ನು scroll ಮಾಡುತ್ತಾ ಹೋಗಿ ಎಂದು ವಾಹಿನಿ ಹೇಳಿದೆ. ಹಾಗಿದ್ದರೆ ನಿಮಗೆ ಏನು ಕಾಣಿಸ್ತು?

ಅಷ್ಟಕ್ಕೂ ಈ ಬಿಗ್​ಬಾಸ್​​ ಕಣ್ಣಿನಲ್ಲಿ 12 ಎಂದು ಕನ್ನಡದ ಸಂಖ್ಯೆಯಲ್ಲಿ ಬರೆದಿರುವುದನ್ನು ನೋಡಬಹುದಾಗಿದೆ. ಬಿಗ್​ಬಾಸ್​ 12ರ ಸಂಕೇತವದು. ಈ ಲೋಗೋ ನೋಡಿಯೇ ನೆಟ್ಟಿಗರು ಉತ್ಸುಕರಾಗಿದ್ದಾರೆ. ಯಾವಾಗ ಷೋ ಆರಂಭವಾಗುತ್ತದೆ ಎಂದು ಕಾಯುತ್ತಿದ್ದಾರೆ.
View this post on Instagram
A post shared by Colors Kannada Official (@colorskannadaofficial)

Source link

Leave a Reply

Your email address will not be published. Required fields are marked *