ಖ್ಯಾತ ಉದ್ಯಮಿ ಸಿಜೆ ರಾಯ್ (CJ ರಾಯ್) ನಿನ್ನೆ (ಜನವರಿ 30) ನಿಧನರಾದರು. ಟಿವಿ ಲೋಕದೊಂದಿಗೆ ನಿಕಟ ಸಂಪರ್ಕವನ್ನು ಜೆಸಿ ರಾಯ್ ಹೊಂದಿದ್ದರು. ಹಲವು ರಿಯಾಲಿಟಿ ಶೋಗಳಿಗೆ ಪ್ರಯೋಜಕತ್ವ ನೀಡುತ್ತಿದ್ದ ಜೆಸಿ ರಾಯರು, ನಿಜವಾಗಿಯೂ ಪ್ರತಿಭೆ ಹೊಂದಿದವರಿಗೆ ಪ್ರೋತ್ಸಾಹ ನೀಡಿದರು. ಕರ್ನಾಟಕದ ಜನಪದ ಗಾಯಕ ಎನಿಸಿಕೊಂಡಿರುವ ಹನುಮಂತನಿಗೆ ಸಾಕಷ್ಟು ಬಾರಿ ಸಹಾಯ ಮಾಡಿದ್ದ ಜೆಸಿ ರಾಯ್ ಅವರು, ಹನುಮಂತನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ಹನುಮಂತ ಜೆಸಿ ರಾಯರ ವಿಶಾಲ ಹೃದಯದ ಬಗ್ಗೆ ಮಾತನಾಡಿದ್ದಾರೆ.
ರಾಯ್ ಅವರು ಹನುಮಂತನಿಗೆ ಮೊದಲು ಸಹಾಯ ಮಾಡಿದ್ದು ಸಿಂಗಿಂಗ್ ರಿಯಾಲಿಟಿ ಶೋನಲ್ಲಿ. ಗಾಯನ ರಿಯಾಲಿಟಿ ಶೋನಲ್ಲಿ ಹನುಮಂತ ದ್ವಿತೀಯ ಸ್ಥಾನ ಪಡೆದಿದ್ದಾಗ ರಾಯರು ಅವರಿಗೆ ನಗದು ಬಹುಮಾನವನ್ನು ಹನುಮಂತನಿಗೆ ನೀಡಿದ್ದರು. ‘ದ್ವಿತೀಯ ಸ್ಥಾನ ಪಡೆದಿದ್ದರೂ ಸಹ ನಾನು ಬಡವ ಎಂಬ ಕಾರಣಕ್ಕೆ ನನಗೆ ಹೆಚ್ಚು ಹಣವನ್ನು ನೀಡಿದ್ದೇನೆ’ ಎಂದು ಹನುಮಂತ ನೆನಪು ಮಾಡಿಕೊಂಡಿದ್ದಾರೆ.
‘ನಾನು ಸಿಂಗಿಂಗ್ ಶೋನಲ್ಲಿ ದ್ವಿತೀಯ ಸ್ಥಾನ ಪಡೆದ ಬಳಿಕ ಅದೇ ಸಮಯದಲ್ಲಿ ಕೋವಿಡ್ ಸಹ ಬಂತು. ಆಗ ರಾಯರು ಸೈಟು ಬೇಕಾ ಹಣ ಬೇಕಾ ಎಂದು ಕೇಳುತ್ತಿದ್ದಾರೆ ಎಂದು ಚಾನೆಲ್ ನವರು ಹೇಳಿದ್ದಾರೆ. ನಾನು ಬೆಂಗಳೂರಿನಲ್ಲಿ ಇರುವವನಲ್ಲ, ಜೊತೆಗೆ ಮೊದಲ ಸ್ಥಾನ ಪಡೆದಿದ್ದ ಹೊಳ್ಳ ಅವರು ಹಣ ತೆಗೆದುಕೊಳ್ಳೋಣ ಎಂದು ಸಲಹೆ ಕೊಟ್ಟರು. ಅದರಂತೆ ಹಣ ತೆಗೆದುಕೊಂಡೆವು. ನಾನು ಬಡವ ಎಂದು ನಿಗದಿಪಡಿಸಿದ ಹಣ ಸ್ವಲ್ಪ ಹೆಚ್ಚು ಹಣವನ್ನೇ ಆಗಲು ನನಗೆ ಅವರು ನೀಡಿದ್ದರು’ ಎಂದು ಹನುಮಂತ.
ಇದನ್ನೂ ಓದಿ:ರಾಯ್ ನಿಧನದಿಂದ ಶಾಕ್ ಆದ ಹರ್ಷಿಕಾ; ಮನೆ ಹೇಗಿತ್ತು ಎಂದು ವಿವರಿಸಿದ ನಟಿ
ಅದರ ಬಳಿಕ ಮತ್ತೊಮ್ಮೆ ಹನುಮಂತನ ತಂಗಿಯ ಓದಿಗೆ ಸಹ ಸಹಾಯ ಮಾಡಿದ್ದೇನೆ. ತಂಗಿಯ ಓದಿಗೆ 50 ಸಾವಿರ ರೂಪಾಯಿ ನಗದು ಹಣ ನೀಡಿದ್ದರು. ಜೊತೆಗೆ, ತಂಗಿ ಪದವಿ ಓದಿದ ಬಳಿಕ ಬಾ ನಾನೇ ಕೆಲಸ ಕೊಡುತ್ತೇನೆ ಎಂದಿದ್ದರು. ಹಣಕ್ಕಾಗಿ ಬರಲು ಹೋದಾಗಲೂ ಸಹ ಬಹಳ ಚೆನ್ನಾಗಿ ಮಾತನಾಡುತ್ತಿದ್ದರು. ಅವರ ಕಛೇರಿಯಲ್ಲಿ ಪಕ್ಕದಲ್ಲಿ ಕೂರಿಸಿಕೊಂಡು ಬಹಳ ಹೊತ್ತು ಮಾತನಾಡುತ್ತಿದ್ದರು. ತಮಾಷೆ ಮಾಡಿದರು. ಮದುವೆ ಆಗುತ್ತೀಯ, ಹೆಣ್ಣು ಹುಡುಕಬೇಕ, ನಮ್ಮ ಕಛೇರಿಯಲ್ಲೇ ಸಾಕಷ್ಟು ಹಣ ಯುವತಿಯರು ಇದ್ದಾರೆ ಯಾರಾದರೂ ಒಬ್ಬರನ್ನು ಆಗಿಬಿಡು ಎಂದೆಲ್ಲ ತಮಾಷೆ ಮಾಡಿದರು’ ಹನುಮಂತು.
‘ರಾಯರದ್ದು ಬಹಳ ವಿಶಾಲವಾದ ಮನಸ್ಸು, ನಾನು ಮನೆ ಕಟ್ಟಿಸುತ್ತಿರುವುದನ್ನು ಅವರ ಬಳಿ ಹೇಳಿಕೊಂಡಿದ್ದೆ. ಮನೆ ಗೃಹಪ್ರವೇಶಕ್ಕೆ ಕರಿ ಬರುತ್ತೇನೆ ಎಂದಿದ್ದರು. ತಂಗಿಯ ಓದಿನ ಬಗ್ಗೆಯೂ ವಿಚಾರಿಸಿದ್ದರು, ಅವರು ಅಗಲಿದ್ದನ್ನು ನಂಬಲು ಸಾಧ್ಯವಾಗಲಿಲ್ಲ. ನನಗೆ ವೈಯಕ್ತಿಕವಾಗಿ ಸಾಕಷ್ಟು ಸಹಾಯ ಮಾಡಿದೆ’ ಎಂದು ಹನುಮಂತ. ಸಿಂಗರ್ ಹನುಮಂತ ಬಿಗ್ಬಾಸ್ ಗೆದ್ದಾಗಲೂ ಸಹ ರಾಯರೇ ಮೊದಲ ಬಹುಮಾನದ ಸ್ಪಾನ್ಸರ್ ಮಾಡಿದರು. ಹನುಮಂತನಿಗೆ 50 ಲಕ್ಷ ರೂಪಾಯಿ ನಗದು ಕೊಟ್ಟಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 3:59 pm, ಶನಿ, 31 ಜನವರಿ 26