Bigg Boss Kannada Season 12: ಬಿಗ್ ಬಾಸ್ ಮನೆಯಲ್ಲಿ ಮೊದಲು ಸ್ನೇಹದಿಂದ ಇದ್ದ ಗಿಲ್ಲಿ ನಟ, ಕಾವ್ಯ ಶೈವ ನಡುವೆ ಮನಸ್ತಾಪ ಶುರುವಾಗಿದೆ. ಗಿಲ್ಲಿಯನ್ನು ಕಾವ್ಯ ನಾಮಿನೇಟ್ ಮಾಡಿದರೂ ಕೂಡ, ಗಿಲ್ಲಿ ಮಾತ್ರ ಕಾವ್ಯ ಅವರನ್ನು ಬೆಂಬಲ ಮಾಡುತ್ತ ಬಂದರು. ಆದರೆ ಈಗ ಆಟ ಶುರುವಾಗಿದೆ.

ಗಿಲ್ಲಿ ನಟನಿಂದಲೇ ಕಾವ್ಯ ಶೈವ ಅವರ ಆಟಕ್ಕೆ ಎಫೆಕ್ಟ್ ಆಗಿದೆ ಎಂದು ಮನೆಯವರು ಹೇಳಿದರು. ಆದರೆ ಕಾವ್ಯ ಮನೆಯವರು ಮಾತ್ರ ಗಿಲ್ಲಿಯನ್ನು ಬಿಟ್ಟು ಕೊಡಬೇಡ, ಗಿಲ್ಲಿಯನ್ನು ಅಣ್ಣಾ ಅಂತ ಕರೆಯಬೇಡ, ಫ್ರೆಂಡ್ ಅವನು ಎಂದು ಹೇಳಿದ್ದರು.

ನಾನು ಗಿಲ್ಲಿಯನ್ನು ದೂರ ಇಟ್ಟರೆ, ಮನೆಯವರು ಗಿಲ್ಲಿಯಿಂದ ದೂರ ಆಗಬೇಡ ಎಂದು ಹೇಳಿದರು. ಇದು ನನಗೆ ಗೊಂದಲ ಉಂಟು ಮಾಡಿದೆ ಎಂದು ಕಾವ್ಯ ಶೈವ ಅವರು ಧನುಷ್ ಗೌಡ ಬಳಿ ಮಾತನಾಡಿಕೊಂಡಿದ್ದರು. ಗಿಲ್ಲಿ ವಿರುದ್ಧ ಧನುಷ್ ಗೌಡ ಕೂಡ ಮಾತನಾಡಿದ್ದರು.

ಅಂದಹಾಗೆ ಗಿಲ್ಲಿ ನಟ ಅವರು ಕಾವ್ಯಗೆ ಟಾಂಟ್ ಮಾಡುತ್ತಲೇ ಇದ್ದಾರೆ. ಧನುಷ್ ಗೌಡ ಮಾತು ಕೇಳಿ ತನ್ನ ಜೊತೆಗೆ ಸರಿಯಾದ ಮಾತನಾಡದ ಕಾವ್ಯ ಶೈವ, ಆಟದ ವಿಚಾರಕ್ಕೆ ನನ್ನ ಬಳಿ ಬಂದು ದಯವಿಟ್ಟು ಮಣ್ಣು ಹಾಕಬೇಡಿ ಎಂದು ಹೇಳಿದ್ದರು. ಇದನ್ನು ಕೂಡ ಗಿಲ್ಲಿ ಅಣುಕಿಸಿದ್ದರು.

ಟೈಮ್ ಬಂದಿದೆ, ಮಿಡ್ ವೀಕ್ ಬಂತು, ಹೋಗೋ ಟೈಮ್ ಬಂತು ಎಂದು ಗಿಲ್ಲಿ ನಟ ಹೇಳಿದ್ದರು. ಅದರಂತೆ ಕಾವ್ಯ ಶೈವ ಅವರ ಎಲಿಮಿನೇಟ್ ಆಗಿರುವ ಸಾಧ್ಯತೆ ಇದೆ. ಮಿಡ್ ವೀಕ್ ಎಲಿಮಿನೇಶನ್ ನಡೆದಿದ್ದು, ಕಾವ್ಯ ಹೊರಗಡೆ ಹೋಗಿದ್ದಾರೆ ಎನ್ನಲಾಗಿದೆ. ಕಾವ್ಯ ಶೈವ ಅವರ ಫ್ಯಾಮಿಲಿ ಮನೆಯೊಳಗಡೆ ಬಂದು, ಹೊರಗಡೆ ನಡೆದ ವಿಚಾರವನ್ನು ತಿಳಿಸಿದ್ದರು. ನೀವು ಯಾಕೆ ಹೊರಗಡೆ ಹೋಗಿಲ್ಲ ಎಂದು ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ.

ಗಿಲ್ಲಿಯಿಂದಲೇ ಕಾವ್ಯ ಶೈವ ಅವರು ಇಲ್ಲಿಯವರೆಗೆ ಬಂದರು ಎಂದು ರಘು ಕೂಡ ಮಾತನಾಡಿಕೊಂಡಿದ್ದಾರೆ. ಮನೆ ಜೊತೆಗೆ ಕಾವ್ಯ ಮಾತನಾಡಿದ ವಿಡಿಯೋ ನೋಡಿ ರಘುಗೆ ಕೂಡ ಡೌಟ್ ಬಂದಿದೆ. ಕಾವ್ಯಗೆ ತನ್ನ ಮೇಲೆ ಡೌಡ್ ಇದೆ ಎಂದು ಗೊತ್ತಾಗಿತ್ತು.

ಅಂದಹಾಗೆ ಕಾವ್ಯ ಔಟ್ ಆಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ನಾಳೆ ಎಪಿಸೋಡ್‌ನಲ್ಲಿ ಮಾಹಿತಿ ಸಿಗುವುದು.

Source link
BBK 12: ಗಿಲ್ಲಿ ನಟ ನುಡಿದ ಭವಿಷ್ಯ ನಿಜವಾಯ್ತಾ? ಮಿಡ್ ವೀಕ್ ಎಲಿಮಿನೇಶನ್‌ನಲ್ಲಿ ಹೊರಬಂದವರಾರು?