ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಗೆ ಅತಿಥಿಯಾಗಿ ಬಂದಿದ್ದ ಚೈತ್ರಾ ಕುಂದಾಪುರ ಅವರು ನಂತರ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಅಲ್ಲಿಯೇ ಉಳಿದುಕೊಂಡರು. ಈ ವಾರ ಅವರ ಅದೃಷ್ಟ ಸಂಪೂರ್ಣವಾಗಿ ಬದಲಾಗಿದೆ. ಅವರು ಏಕಾಏಕಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈಗ ಅವರು ಹೇಳಿದ ಪ್ರಕಾರ ನಾಮಿನೇಷನ್ ನಡೆಯುತ್ತಿದೆ. ಜೊತೆಗೆ, ಈ ವಾರದ ನಾಮಿನೇಷನ್ ಇಂದ ಅವರು ಬಚಾವ್ ಕೂಡ ಆಗಿದ್ದಾರೆ. ಈ ಎಲ್ಲಾ ಟ್ವಿಸ್ಟ್‌ಗಳು ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಶಾಕಿಂಗ್ ಎನಿಸಿದೆ.
‘ಬಿಗ್ ಬಾಸ್ ಕನ್ನಡ ಸೀಸನ 12’ರಲ್ಲಿ ಕಳೆದ ವಾರ ಸ್ಪಂದನಾ ಸೋಮಣ್ಣ ಅವರು ಅದೃಷ್ಟದಲ್ಲಿ ಕ್ಯಾಪ್ಟನ್ ಆದರು. ಇದಕ್ಕೆ ಕಾರಣ ಆಗಿದ್ದು ಚೈತ್ರಾ. ಸ್ಪಂದನಾ ಕಾಲಿಗೆ ಪೆಟ್ಟಾಗ ಮಾಡಿದ ಚೈತ್ರಾ ಅವರು ಸ್ಪಂದನಾ ಪರವಾಗಿ ಆಡಿ ಗೆದ್ದರು. ಸ್ಪಂದನಾ ಪರವಾಗಿ ಆಡಿದ ಚೈತ್ರಾಗೆ ಕ್ಯಾಪ್ಟನ್ ಪಟ್ಟ ಸಿಗಲಿಲ್ಲ. ಸ್ಪಂದನಾ ಅವರೇ ಕ್ಯಾಪ್ಟನ್ ಆದರು. ಆದರೆ, ಈ ವಾರ ಆ ಪಟ್ಟ ಸ್ಪಂದನಾ ಕೈ ತಪ್ಪಿದೆ.
ಬಿಗ್ ಬಾಸ್ ಮನೆಯಲ್ಲಿ ಈಗ ವಿಲನ್ ಆಡಳಿತ ಬಂದಿದೆ. ಆಯಕ್ಟಿವಿಟಿ ರೂನ್ನ ವಿಲನ್ ತನ್ನ ಅಡ್ಡೆಯಾಗಿ ಮಾಡಿಕೊಂಡಿದ್ದಾನೆ. ಚೈತ್ರಾನ ಅಲ್ಲಿ ಕರೆದು ಆಫರ್ ನೀಡಿದರು. ‘ನೀವು ಕಳೆದವಾರ ಆಟ ಆಡಿ ಸ್ಪಂದನಾ ಕ್ಯಾಪ್ಟನ್ ಮಾಡಿದಿರಿ. ಇದಕ್ಕೆ ಪ್ರತಿಯಾಗಿ ನಿಮಗೇ ಏನೂ ಸಿಕ್ಕಿಲ್ಲ. ಈಗ ನಾನು ನಿಮಗೆ ಆಫರ್ ಒಂದನ್ನು ನೀಡಿದ್ದೇನೆ. ನೀವು ಕ್ಯಾಪ್ಟನ್ ಆಗಬಹುದು. ಇದರಿಂದ ಕ್ಯಾಪ್ಟನ್ ರೂಂ ಬಾಗಿಲು ಕೂಡ ಓಪನ್ ಆಗುತ್ತದೆ. ಸ್ಪಂದನಾ ಕ್ಯಾಪ್ಟನ್ ಪಟ್ಟ ಕಳೆದುಕೊಳ್ಳುತ್ತಾರೆ’ ಎಂದರು ವಿಲನ್.
ಇದನ್ನೂ ಓದಿ: ಗಿಲ್ಲಿ ವಿರುದ್ಧ ಸಮರ ಸಾರಿದ ಚೈತ್ರಾ ಕುಂದಾಪುರ: ಮಾತಿಗೆ ಮಾತು ಬೆಳೆದು ಮನೆ ರಣರಂಗ
ಇದಕ್ಕೆ ಚೈತ್ರಾ ಒಪ್ಪಿಗೆ ಕೊಟ್ಟಿದ್ದಾರೆ. ಆ ಕ್ಷಣದಿಂದ ಅವರು ಕ್ಯಾಪ್ಟನ್ ಆಗಿದ್ದಾರೆ. ಇದರಿಂದ ಅವರಿಗೆ ವಿಶೇಷ ಅಧಿಕಾರ ಸಿಕ್ಕಿದೆ. ಯಾರು ಮನೆಯಲ್ಲಿ ಎಷ್ಟು ಮಂದಿಯನ್ನು ನಾಮಿನೇಟ್ ಮಾಡಬೇಕು, ಯಾರಿಗೆ ನಾಮಿನೇಷನ್ ಅಧಿಕಾರ ನೀಡಬಾರದು ಎಂದು ಚೈತ್ರಾ ಅವರೇ ನಿರ್ಧರಿಸಬೇಕಾಗಿದೆ. ಈ ವೇಳೆ ಅಶ್ವಿನಿ ಹಾಗೂ ರಕ್ಷಿತಾ ಅವರ ನಾಮನಿರ್ದೇಶನದ ಅಧಿಕಾರವನ್ನು ಚೈತ್ರಾ ಕಿತ್ತುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.