ಗಂಡಂದಿರು ಮತ್ತು ಚೆಕ್ ಬೌನ್ಸ್: ಚೈತ್ರಾ-ಅಶ್ವಿನಿ ಗೌಡ ನಡುವೆ ವಾಕ್ಸಮರ

ಗಂಡಂದಿರು ಮತ್ತು ಚೆಕ್ ಬೌನ್ಸ್: ಚೈತ್ರಾ-ಅಶ್ವಿನಿ ಗೌಡ ನಡುವೆ ವಾಕ್ಸಮರ


ಬಿಗ್ಬಾಸ್ ಕನ್ನಡ ಸೀಸನ್ 12 (ಬಿಗ್ ಬಾಸ್ ಕನ್ನಡ) ಮುಗಿದು ತಿಂಗಳಾಗುತ್ತಾ ಬಂದಿದೆ. ಆದರೆ ಬಿಗ್ಬಾಸ್ ಮನೆಯೊಳಗೆ ಶುರುವಾದ ಕೆಲ ಜಗಳಗಳು ಮನೆಯ ಹೊರಗೂ ಮುಂದುವರೆದಿವೆ. ಗಿಲ್ಲಿ ಬಿಗ್ಬಾಸ್ ಕನ್ನಡ 12ರ ವಿನ್ನರ್ ಆಗಿದ್ದಾರೆ. ಅಶ್ವಿನಿ ಚೆನ್ನಾಗಿ ಆಡಿದ್ದರಾದರೂ ಗೆಲುವು ಅವರ ಕೈತಪ್ಪಿದೆ. ಬಿಗ್ಬಾಸ್ ಮನೆಗೆ ಕಳೆದ ಸೀಸನ್ ಚೈತ್ರಾ ಕುಂದಾಪುರ ಅತಿಥಿಯಾಗಿ ಹೋಗಿ ಬಂದಿದ್ದರು. ಬಿಗ್ಬಾಸ್ ಮನೆಯಲ್ಲಿ ಚೈತ್ರಾ ಮತ್ತು ಅಶ್ವಿನಿ ಅವರ ನಡುವೆ ಸಾಕಷ್ಟು ಜಗಳಗಳು ನಡೆದಿದ್ದವು. ಆದರೆ ಆ ಜಗಳ ಮನೆಯಿಂದ ಹೊರಬಂದ ಮೇಲೂ ಮುಂದುವರೆದಿವೆ. ಯಾವ ಮಟ್ಟಿಗೆ ಜಗಳ ಮುಂದುವರೆದಿದೆ ಎಂದರೆ ಮಾತುಗಳು ವೈಯಕ್ತಿಕ ಮಟ್ಟಕ್ಕೆ ಇಳಿದಿವೆ.

ಸ್ಥಳದಲ್ಲಿ ಅಶ್ವಿನಿ ಅವರು ಇನ್ ಸ್ಟಾಗ್ರಾಂನಲ್ಲಿ ತಮಗೆ ಆಗಿದ್ದ ತರಚಿದ ಗಾಯಗಳ ಫೋಟೊವನ್ನು ಹಂಚಿಕೊಂಡಿದ್ದರು. ಆದರೆ ಅವರು ಯಾರಿಂದ ಗಾಯ ಆಗಿದ್ದಾರೆ ಎಂದೆಲ್ಲ ಹೇಳಲಿಲ್ಲ. ಆದರೆ ಅದಕ್ಕೆ ಪ್ರತಿಕ್ರಿಯಿಸಿದ್ದ ಚೈತ್ರಾ ಕುಂದಾಪುರ, ‘ನನಗೂ ಗಾಯಗಳಾಗಿವೆ ಆದರೆ ಅದನ್ನು ತೋರಿಸಿ ಸಿಂಪತಿ ಗಿಟ್ಟಿಸಿಕೊಳ್ಳಲು ಪಿಆರ್ ಟೀಂ ಇಲ್ಲ ಎಂದಿದ್ದರು. ಅಲ್ಲಿಂದ ಇಬ್ಬರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಣ್ಣ ವಾಗ್ವಾದ ಶುರುವಾಗಿತ್ತು.

ಆದರೆ ಈಗ ಬೇರೆ ರೂಪುಗೊಂಡಿದ್ದು ವೈಯಕ್ತಿಕ ವಾಗ್ದಾಳಿಗೆ ಇಳಿದಿದೆ. ಅಶ್ವಿನಿ ಅವರ ಖಾಸಗಿ ಜೀವನದ ಬಗ್ಗೆ ಚೈತ್ರಾ ಇತ್ತೀಚೆಗೆ ಆರೋಪ ಮಾಡಿದ್ದರು. ಅಶ್ವಿನಿ ಅವರ ವಿಚ್ಛೇದನ ಮತ್ತು ಅವರ ಮೇಲಿರುವ ಪ್ರಕರಣಗಳ ಬಗ್ಗೆ ಮಾತನಾಡುತ್ತಿದ್ದರು. ಇದೀಗ ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅಶ್ವಿನಿ ಗೌಡ, ಮೂವರು ಗಂಡಂದಿರು ಚೆಕ್ ಬೌನ್ಸ್ ಪ್ರಕರಣದಲ್ಲಿ ಚೈತ್ರಾ ಅವರ ಅನುಭವ ಆಗಿರಬಹುದು ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ:ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ

‘ನಾನು ಗಾಯಗಳ ಚಿತ್ರಗಳನ್ನಷ್ಟೇ ಹಂಚಿಕೊಂಡಿದ್ದೆ, ಅದು ಯಾರು ಮಾಡಿದ್ದು ಎಲ್ಲಿ ಆಗಿದ್ದು ಎಂದೆಲ್ಲ ಹೇಳಿರಲಿಲ್ಲ, ಆದರೆ ಕುಂಬಳಕಾಯಿ ಕಳ್ಳಿಯ ರೀತಿ ಚೈತ್ರಾ ಅವರೇ ಮೊದಲು ಪ್ರತಿಕ್ರಿಯೆ ತೋರಿಸಿದ್ದಾರೆ, ಚೈತ್ರಾ ಅವರ ಮಿತಿಯಲ್ಲಿ ಇದ್ದರೆ ಒಳ್ಳೆಯದು’ ಎಂದು ಅಶ್ವಿನಿ ಹೇಳಿದ್ದಾರೆ.

ಇವರಿಬ್ಬರ ಜಗಳದ ನಡುವೆ, ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದ ಹಳೆಯ ಡೈಲಾಗ್ ವೈರಲ್ ಆಗುತ್ತಿದೆ. ‘ಹುಡುಗರು ಕಿತ್ತಾಡಿದರು ಕೆಲವೇ ನಿಮಿಷಕ್ಕೆ ಕಾಂಪ್ರೊಮೈಸ್ ಆಗಿ ಬಿಡುತ್ತಾರೆ. ಆದರೆ ಹೆಣ್ಣುಮಕ್ಕಳು ಬಿಗ್ ಬಾಸ್ ಹೊರಗೂ ಜಗಳ ಮುಂದುವರೆಸುತ್ತಾರೆ’ ಎಂದಿದ್ದರು ಅದು ಹಾಗೆಯೇ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *