ಈ ವಾರ ಒಬ್ಬರಲ್ಲ ಇಬ್ಬರು ಔಟ್? ಟ್ವಿಸ್ಟ್ ಕೊಡಲು ಬಿಗ್ ಬಾಸ್ ರೆಡಿ

ಈ ವಾರ ಒಬ್ಬರಲ್ಲ ಇಬ್ಬರು ಔಟ್? ಟ್ವಿಸ್ಟ್ ಕೊಡಲು ಬಿಗ್ ಬಾಸ್ ರೆಡಿ


‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಸಾಕಷ್ಟು ಭಿನ್ನ ತಿರುವುಗಳು ಬಂದಿವೆ. ಕಳೆದ ವಾರ ರಕ್ಷಿತಾ ಹಾಗೂ ಧ್ರುವಂತ್ ಅವರನ್ನು ಫೇಕ್ ಎಲಿಮಿನೇಷನ್ ಹೊರಗೆ ತಂದು ಸೀಕ್ರೆಟ್ ರೂಂನಲ್ಲಿ ಇಡಲಾಗಿದೆ. ಬಿಗ್ ಬಾಸ್ ಅವರು ಸೀಕ್ರೆಟ್ ರೂಂನಿಂದ ನೋಡುತ್ತಿದ್ದಾರೆ. ಈ ವಾರ ರಕ್ಷಿತಾ (ರಕ್ಷಿತಾ ಶೆಟ್ಟಿ) ಹಾಗೂ ಧ್ರುವಂತ್ ದೊಡ್ಮನೆ ಒಳಗೆ ಬರಲಿದೆ, ಮತ್ತಿಬ್ಬರು ಹೊರ ಹೋಗಲಿದ್ದಾರೆ ಎಂದು ಹೇಳಲಾಗುತ್ತಾ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಸ್ಪಂದನಾ, ಮಾಳು ಸೇರಿದಂತೆ ಹಲವರು ನಾಮಿನೇಟ್ ಆಗಿದ್ದಾರೆ. ಆದರೆ, ಈ ವಾರ ವೋಟಿಂಗ್ ಲೈನ್ ಓಪನ್ ಆಗಿಲ್ಲ. ಹೀಗಾಗಿ, ನಾಮಿನೇಟ್ ಆದವರು ಯಾರೊಬ್ಬರ ಮನೆಯಿಂದ ಹೊರ ಹೋಗುವುದು ಅನುಮಾನ ಎಂದು ಹೇಳಲಾಗುತ್ತಾ ಇದೆ. ಆದರೆ, 58ನೇ ದಿನಕ್ಕೆ ಅತಿಥಿಗಳಾಗಿ ಬಂದು ನಂತರ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ರಜತ್ ಹಾಗೂ ಚೈತ್ರಾ ಕುಂದಾಪುರ ಈ ಬಾರಿ ಬಿಗ್ ಬಾಸ್ ನಿಂದ ಹೊರ ಹೋಗುವ ಸಾಧ್ಯತೆ ಇದೆ.

ಚೈತ್ರಾ ಹಾಗೂ ರಾಜ ಸ್ಪರ್ಧಿಗಳಲ್ಲ, ಅವರನ್ನು ಆಯ್ಕೆ ಮಾಡಿದ ಕೆಲವೇ ವಾರಕ್ಕೆ ಮನೆಯಿಂದ ಕಳುಹಿಸಲು ಟಾಕ್ ಮೊದಲಿನಿಂದಲೂ ಇದೆ. ಆದರೆ, ಇದುವರೆಗೆ ನಿಜವಾಗಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಆಗಿದೆ. ಈ ವಾರ ಇವರಿಬ್ಬರೂ ಹೊರ ಹೋಗೋದು ಖಚಿತ ಎನ್ನುತ್ತಿದ್ದಾರೆ.

ಕಳೆದ ವಾರ ಯಾರನ್ನೂ ಎಲಿಮಿನೇಟ್ ಮಾಡಿಲ್ಲ. ಈ ವಾರವೂ ಎಲಿಮಿನೇಷ ಮಾಡದೆ ಸುಮ್ಮನೆ ಕೂರೋದು ಅನುಮಾನವೇ. ಏಕೆಂದರೆ ಬಿಗ್ ಬಾಸ್ ಪೂರ್ಣಗೊಳ್ಳಲು ಇನ್ನು ಕೆಲವೇ ವಾರಗಳಿವೆ. ಆದರೆ, ಸ್ಪರ್ಧಿಗಳ ಸಂಖ್ಯೆ ಮಾತ್ರ 13 ಇದೆ. ಇದನ್ನು ಕಡಿಮೆ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಚೈತ್ರಾ ಹಾಗೂ ರಜತ್ ನ ಮನೆಯಿಂದ ಹೊರ ಹಾಕೋ ಸಾಧ್ಯತೆ ಇದೆ.

ಇದನ್ನೂ ಓದಿ: ಸೈಲೆಂಟ್ ಆಗಿ ಬಿಗ್ ಬಾಸ್ ಮನೆಗೆ ಬಂದು ಅಧ್ವಾನ ಮಾಡಿದ ರಕ್ಷಿತಾ ಶೆಟ್ಟಿ

ವೀಕ್ಷಕರ ಊಹೆಗೆ ವಿರುದ್ಧವಾಗಿಯೇ ಈ ಸೀಸನ್ ನಡೆಯುತ್ತಾ ಇದೆ. ಈಗ ವೋಟಿಂಗ್ ಲೈನ್ ಓಪನ್ ಆಗಿರುವುದನ್ನು ನೋಡಿ ಚೈತ್ರಾ ಹಾಗೂ ರಜತ್ ಹೋಗಬಹುದು ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ಮತ್ತೊಂದು ಟ್ವಿಸ್ಟ್‌ನ ಬಿಗ್ ಬಾಸ್ ನೀಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *