‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಆರಂಭವಾಗಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಅದರ ಜೊತೆಗೆ ಫಿನಾಲೆಗೂ ದಿನಗಣನೆ ಶುರುವಾಗಿದೆ. ಈ ಫಿನಾಲೆಗಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಬಾರಿ ಯಾರು ಕಪ್ ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿದೆ. ಈಗ ಫಿನಾಲೆ ಬಗ್ಗೆ ಸುದೀಪ್ ಅವರ ವೀಕೆಂಡ್ನಲ್ಲಿ ಮಾಹಿತಿ ಲಭ್ಯವಾಗಿದೆ. ಅವರು ಈ ಬಗ್ಗೆ ವಿವರ ನೀಡುವುದಕ್ಕೂ ಒಂದು ಕಾರಣವಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಅಷ್ಟಕ್ಕೂ ಏನದು? ಆ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ ಆರಂಭ ಆಗಿದ್ದು ಸೆಪ್ಟೆಂಬರ್ 28 ರಂದು ಆರಂಭವಾಯಿತು. ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್ಸ್ಟಾರ್ನಲ್ಲಿ ಈ ಶೋ ಪ್ರಸಾರವಾಗುತ್ತಿದೆ. ಪ್ರತಿ ದಿನ ರಾತ್ರಿ 9.30ಕ್ಕೆ ಶೋ ಪ್ರಸಾರವಾಗುತ್ತಿದೆ. ವೀಕೆಂಡ್ನಲ್ಲಿ ಶೋ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತಿದೆ. ಈ ಬಾರಿ ಅಕ್ಟೋಬರ್ 8 ರಂದು ಶೋ ಸಸ್ಪೆಂಡ್ ಆಗಿದೆ. ಈ ಶೋ ನಡೆಯುತ್ತಿರುವ ಜಾಲಿವುಡ್ಗೆ ಆದ ತೊಂದರೆಯೇ ಶೋ ನಿಲ್ಲಲು ಕಾರಣ. ಆ ಬಳಿಕ ಅಕ್ಟೋಬರ್ 9 ರಂದು ಶೋ ಆರಂಭವಾಯಿತು. ಈ ಬಾರಿ ಸಾಕಷ್ಟು ವಿವಾದಗಳು ನಡೆದವು.
ಈ ಬಾರಿ ಶೋನಲ್ಲಿ 24 ಜನರನ್ನು ತರಲಾಗಿದೆ. ಇದರ ಕೆಲವು ವೈಲ್ಡ್ ಕಾರ್ಡ್ ಸ್ಪರ್ಧಿಗಳು. ಧ್ರುವಂತ್, ರಕ್ಷಿತಾ ಅವರನ್ನು ಸೀಕ್ರೆಟ್ ರೂಂನಲ್ಲಿ ಇಡಲಾಗಿದೆ. ಅವರನ್ನು ಬಿಟ್ಟು 11 ಜನರು ಉಳಿದುಕೊಂಡಿದ್ದಾರೆ. ‘ಇನ್ನು ಕೆಲವೇ ವಾರಗಳಲ್ಲಿ ಫಿನಾಲೆಯಲ್ಲಿ’ ಎಂದು ಸುದೀಪ್ ಅವರು ಹೇಳಿದ್ದಾರೆ. ‘ಕೆಲವೇ ವಾರದಲ್ಲಿ ಫಿನಾಲೆ ಬರುತ್ತದೆ. ಹೀಗಾಗಿ, ಬದಲಿಗೆ ಕಾನ್ಫಿಡೆನ್ಸ್ ಬೇಡ, ಅದೇ ರೀತಿ ಎಲ್ಲವನ್ನು ಹಗುರವಾಗಿ ತೆಗೆದುಕೊಳ್ಳೋದು ಬೇಡ’ ಎಂದರು ಸುದೀಪ್. ಕೆಲವು ವರದಿಗಳ ಪ್ರಕಾರ ಜನವರಿ 17 ಮತ್ತು 18 ರಂದು ಫಿನಾಲೆ ಸಾಮಾನ್ಯವಾಗಿ ಎನ್ನಲಾಗುತ್ತಿದೆ.
ಇದನ್ನೂ ಓದಿ: ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಕಳೆದ ಎರಡು ಸೀಸನ್ ಇಂದ ಫಿನಾಲೆಯಲ್ಲಿ ಆರು ಜನರನ್ನು ಇಡಲಾಗುತ್ತಾ ಇದೆ. ಅದು ಈ ಬಾರಿಯೂ ಮುಂದುವರಿಯುವ ಸಾಧ್ಯತೆಯಿದೆ. ಫಿನಾಲೆ ವಾರಕ್ಕೂ ಹಿಂದಿನ ವಾರ ಮಿಡಲ್ ವೀಕ್ ಎಲಿಮಿನೇಷನ್ ಕೂಡ ನಡೆಯಬಹುದು. ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಡಬಲ್ ಎಲಿಮಿನೇಷನ್ ಕೂಡಲಿದೆ. ಅದು ಯಾವ ವಾರ ನಡೆಯುತ್ತಿದೆ ಎಂಬ ಕುತೂಹಲವೂ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.