ಹಾಸ್ಯ ಕಲಾವಿದ ಗಿಲ್ಲಿ ನಟ ಅವರು ಬಿಗ್ ಬಾಸ್ (ಬಿಗ್ ಬಾಸ್ ಕನ್ನಡ 12) ಮನೆಯಲ್ಲಿ ಸಿಕ್ಕಾಪಟ್ಟೆ ಆಯಕ್ಟೀವ್ ಆಗಿದ್ದಾರೆ. ಅವರ ಕಾಮಿಡಿಗೆ ವೀಕ್ಷಕರು ಕೂಡ ಫಿದಾ ಆಗಿದ್ದಾರೆ. ಗಿಲ್ಲಿ ನಟನೇ ವಿನ್ನರ್ ಎಂಬ ಅಭಿಪ್ರಾಯ ಇದೆ. ಗಿಲ್ಲಿಯನ್ನು ಕಂಡರೆ ಅಶ್ವಿನಿ ಗೌಡ (ಅಶ್ವಿನಿ ಗೌಡ) ಅವರಿಗೆ ಅಸಮಾಧಾನ ಇದೆ. ಈ ಬಗ್ಗೆ ಅವರು ಅನೇಕ ಬಾರಿ ಹೇಳಿದ್ದಾರೆ. ಇತ್ತೀಚೆಗೆ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರಿಗೆ ದೊಡ್ಡ ಜಗಳ ಆಗಿದೆ. ಅವಕಾಶ ಸಿಕ್ಕಾಗಲೆಲ್ಲಾ ಗಿಲ್ಲಿ ಅವರು ತಿರುಗೇಟು ನೀಡುತ್ತಲೇ ಇದ್ದಾರೆ. ಟಾಸ್ಕ್ ಗೆದ್ದರೂ ಸೋತರೂ ಗಿಲ್ಲಿ ಗತ್ತು ಕಡಿಮೆ ಆಗುತ್ತಿಲ್ಲ. ನವೆಂಬರ್ 21 ರ ಸಂಚಿಕೆಯ ಕಾರ್ಯಕ್ರಮವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಏಕವಚನದ ವಿಷಯವನ್ನು ಇಟ್ಟುಕೊಂಡು ಗಿಲ್ಲಿ ಅವರು ಸಖತ್ ಕಾಮಿಡಿ ಮಾಡಿದ್ದಾರೆ. ‘ರಾಜಮಾತೆ ನೀನು ಇವತ್ತು ಸತ್ತೆ’ ಎಂದ ಗಿಲ್ಲಿ ನಟ (ಗಿಲ್ಲಿ ನಟ) ಹೊಡೆದ ಡೈಲಾಗ್‌ಗೆ ಇಡೀ ಮನೆ ಗೊಳ್ ಎಂದು ನಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.