ಗಿಲ್ಲಿ ಪ್ರೀತಿಯಿಂದ ಕೈ ಕೊಟ್ಟರು ಕ್ಯಾರೇ ಎನ್ನದೇ ಹೋದ ಕಾವ್ಯಾ; ಫ್ಯಾನ್ಸ್​​ಗೆ ಬೇಸರ

ಗಿಲ್ಲಿ ಪ್ರೀತಿಯಿಂದ ಕೈ ಕೊಟ್ಟರು ಕ್ಯಾರೇ ಎನ್ನದೇ ಹೋದ ಕಾವ್ಯಾ; ಫ್ಯಾನ್ಸ್​​ಗೆ ಬೇಸರ


ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಾವ್ಯ (ಕಾವ್ಯ) ಹಾಗೂ ಗಿಲ್ಲಿ ಗೆಳೆತನದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇಬ್ಬರ ಮಧ್ಯೆ ಆಗಾಗ ಕಿರಿಕ್ ಗಳು ಆಗುತ್ತಲೇ ಇರುತ್ತವೆ. ನಂತರ ಇವರು ಮತ್ತೆ ಒಂದಾಗುತ್ತಾರೆ. ಇದು ಸಾಕಷ್ಟು ಬಾರಿ ರಿಪೀಟ್ ಆಗಿದೆ. ಈಗ ಕಾವ್ಯಾ ಅವರು ನಡೆದುಕೊಂಡ ರೀತಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಗಿಲ್ಲಿ ಅಭಿಮಾನಿಗಳಿಗೆ ಈ ನಡೆ ಸಾಕಷ್ಟು ಬೇಸರ ಮೂಡಿಸಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಚಟುವಟಿಕೆ ಒಂದನ್ನು ಆಯೋಜನೆ ಮಾಡಿತ್ತು. ಇದರ ಪ್ರಕಾರ ಮನೆಯ ಪ್ರತಿ ಸ್ಪರ್ಧಿ ಮತ್ತೋರ್ವ ಸ್ಪರ್ಧಿಯನ್ನು ಕರೆದು ಅವರಿಗೆ ಆದ ನೋವನ್ನು ಹೇಳಬೇಕು. ಅವರು ಯಾವಾಗ ಸಿಟ್ಟಲ್ಲಿ ಮಾತನಾಡಿದ್ದು ಎಂದು ಹೇಳಿ, ಚಾಕೋಲೇಟ್ ನೀಡಿ ಸಿಹಿಯಾಗಿ ಮಾತನಾಡುವಂತೆ ಕೋರಬೇಕು. ಈ ವೇಳೆ ಗಿಲ್ಲಿ ಅವರು ಕಾವ್ಯದ ಬಗ್ಗೆ ಹೇಳಿದರು.

ಕಾವ್ಯಾ ಅವರಿಂದ ಆದ ಒಂದು ಬೇಸರದ ಘಟನೆಯನ್ನು ನೆನಪಿಸಿಕೊಂಡರು ಗಿಲ್ಲಿ. ಆ ಸಂದರ್ಭದಲ್ಲಿ ಕಾವ್ಯಾ ಸಿಹಿಯಾಗಿ ಮಾತನಾಡಬಹುದಿತ್ತು ಎಂದು ಅಭಿಪ್ರಾಯಪಟ್ಟರು. ಇದನ್ನು ಕಾವ್ಯ ಕೇಳಿಸಿಕೊಂಡರು. ಹೋಗುವಾಗ ಶೇಕ್ ಹ್ಯಾಂಡ್ ಮಾಡಲು ಗಿಲ್ಲಿ ಮುಂದಾದರು. ಆದರೆ, ಇದಕ್ಕೆ ಕಾವ್ಯ ಒಪ್ಪಲೇ ಇಲ್ಲ. ಅವರು ಕೈ ಕುಲುಕದೇ ನೇರವಾಗಿ ಅಲ್ಲಿಂದ ಕೆಳಗಿಳಿದು ಬಂದರು. ಈ ವಿಡಿಯೋ ಚರ್ಚೆಗೆ ಕಾರಣ ಆಗಿದೆ. ‘ಗಿಲ್ಲಿ ಗೆಳತನವನ್ನು ಕಡೆಗಣಿಸಬೇಡಿ. ಮುಂದೊಂದು ದಿನ ಅವರ ಕಾಲ್ ಶೀಟ್ ಪಡೆಯಲು ಸಾಲಲ್ಲಿ ನಿಲ್ಲು’ ಎಂದೆಲ್ಲ ಫ್ಯಾನ್ಸ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ನಿನಗೆ ಮಾನ-ಮಾರ್ಯಾದೆ ಏನೂ ಇಲ್ಲ’; ಗಿಲ್ಲಿಗೆ ಗಂಭೀರವಾಗಿಯೇ ಹೇಳಿದ ಕಾವ್ಯ

ಇನ್ನೊಂದು ತಿಂಗಳಿನಲ್ಲಿ ‘ಬಿಗ್ ಬಾಸ್’ ಫಿನಾಲೆ. ಈ ಬಾರಿ ಶೋನ ಗೆಲ್ಲೋದು ಯಾರು ಎಂಬ ಪ್ರಶ್ನೆ ಮೂಡಿದೆ. 13 ಮಂದಿ ಮನೆಯಲ್ಲಿದ್ದಾರೆ. ಈ ವಾರ ಯಾವುದೇ ಎಲಿಮಿನೇಷನ್ ಇಲ್ಲ. ಹೀಗಾಗಿ, ರಜತ್ ಹಾಗೂ ಚೈತ್ರಾ ಅವರು ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಬರುತ್ತಾರೆ ಎಂದು ಹೇಳುತ್ತಿದ್ದಾರೆ. ಡಿಸೆಂಬರ್ 21 ರ ಎಪಿಸೋಡ್ ನಲ್ಲಿ ಈ ಬಗ್ಗೆ ಗೊತ್ತಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *