ಬಿಗ್​​ಬಾಸ್ ಮನೆಗೆ ಬಂದು ಮಾಡಿದ ತಪ್ಪಿನ ಅರಿವು ಮೂಡಿಸಿಕೊಂಡ ರಘು

ಬಿಗ್​​ಬಾಸ್ ಮನೆಗೆ ಬಂದು ಮಾಡಿದ ತಪ್ಪಿನ ಅರಿವು ಮೂಡಿಸಿಕೊಂಡ ರಘು


ಬಿಗ್ಬಾಸ್ (ಬಿಗ್ ಬಾಸ್) ಮನೆ ಎಂದರೆ ಅದು ಜಗಳದ ಮನೆ, ಕಚ್ಚಾಟ, ಗೆಲುವಿಗಾಗಿ ಪರಸ್ಪರ ಕಾಲೆಳೆದ ಮನೆ ಎಂಬ ಅಭಿಪ್ರಾಯವಿದೆ. ಆದರೆ ಬಿಗ್ಬಾಸ್ ಮನೆಯಲ್ಲಿ ಕೇವಲ ಜಗಳಕ್ಕೆ, ಅವರು ತಾವು ಅರಿತುಕೊಳ್ಳಲು, ತಪ್ಪುಗಳನ್ನು ತಿದ್ದಲು ಹೊಸ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಹ ಸಹಾಯ ಮಾಡುತ್ತಾರೆ. ಈ ಹಿಂದೆ ಸಹ ಹಲವು ಸ್ಪರ್ಧಿಗಳಿಗೆ ತಮ್ಮ ತಪ್ಪುಗಳನ್ನು ಅರ್ಥ ಮಾಡಿಕೊಳ್ಳಲು ಬಿಗ್ಬಾಸ್ ಮನೆ ಸಹಾಯ ಮಾಡಿದೆ. ಹೊರಗೆ ಅಹಂಕಾರ, ಸಿಟ್ಟಿನಿಂದ ಮೆರೆದವರಿಗೆ ಬಿಗ್ಬಾಸ್ ಮನೆ ತಾಳ್ಮೆ, ಸಹನೆ ಕಲಿಸಿದೆ. ಇದೀಗ ಬಿಗ್ಬಾಸ್ ಸ್ಪರ್ಧಿ ಆಗಿರುವ ರಘು ಅವರೂ ಸಹ ಬಿಗ್ಬಾಸ್ ಮನೆಗೆ ಬಂದು, ತಾವು ಮಾಡುತ್ತಿರುವ ತಪ್ಪು ಅರಿವು ಮೂಡಿಸಿದೆ.

ರಘು ಅವರು ವೈಲ್ಡ್ ಕಾರ್ಡ್ ಎಂಟ್ರಿ ರೂಪದಲ್ಲಿ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ನಟ ರಘು ಅವರು ಈ ಹಿಂದೆ ಅಡುಗೆಗೆ ಸಂಬಂಧಿಸಿದ ರಿಯಾಲಿಟಿ ಶೋ ಗೆದ್ದು ದೊಡ್ಡ ಬಾಸ್ ಮನೆಗೆ ಬಂದಿದ್ದಾರೆ. ರಘು ಅವರು ಬಿಗ್ಬಾಸ್ ಮನೆಯಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ಟಾಸ್ಕ್ ಆಗಲಿ, ಮನೆ ಕೆಸವಾಗಲಿ, ಅಡುಗೆ ಮಾಡುವುದಾಗಲಿ ಎಲ್ಲದಕ್ಕೂ ಸೈ. ಯಾರೇ ರೇಗಿಸಲಿ, ತಕರಾರು ಮಾಡಲಿ ತಾಳ್ಮೆಯಿಂದ ಆಡುತ್ತಿದ್ದಾರೆ ರಘು. ಆದರೆ ಅವರು ಹೊರಗೆ ಹೀಗೆ ಇಲ್ಲವಂತೆ. ಈ ಬಗ್ಗೆ ಅವರ ಕುಟುಂಬದವರು ಮಾತನಾಡಿದ್ದಾರೆ.

ಇದನ್ನೂ ಓದಿ:ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್ಬಾಸ್ ಮನೆಯ ಟಫ್ ಮ್ಯಾನ್ ರಘು

ರಘು ಅವರ ಪುತ್ರ ಮತ್ತು ಪತ್ನಿ ಬಿಗ್ಬಾಸ್ ಮನೆಗೆ ಬಂದಿದ್ದರು. ಈ ವೇಳೆ ಮಾತನಾಡಿದ ರಘು ಅವರ ಪತ್ನಿ, ‘ನಾನು ನೋಡಿರುವ ರಘು ಅವರಿಗೂ ಬಿಗ್ಬಾಸ್ ಮನೆಯಲ್ಲಿ ರಘು ಅವರಿಗೂ ಅಜಗಜಾಂತರ ವ್ಯತ್ಯಾಸವಿದೆ. ಮನೆಯಲ್ಲಿ ಬಹಳ ಸಿಟ್ಟಿನ ವ್ಯಕ್ತಿ, ನಮ್ಮೊಂದಿಗೆ ಸರಿಯಾಗಿ ಮಾತನಾಡುವುದು ಸಹ ಇಲ್ಲ. ಎಲ್ಲದಕ್ಕೂ ರೇಗುತ್ತಿರುತ್ತಾರೆ. ಆದರೆ ಇಲ್ಲಿ ಅವರು ಬಹಳ ತಾಳ್ಮೆಯಿಂದ ಇದ್ದಾರೆ’.

‘ಯಾರಾದರೂ ಅವರ ಮೇಲೆ ಮಲಗಿಕೊಂಡರೆ, ಗಡ್ಡ ಮುಟ್ಟಿದರೆ, ಅವರ ದೇಹದ ಬಗ್ಗೆ, ವ್ಯಾಯಾಮದ ಬಗ್ಗೆ ಟೀಕೆ ಮಾಡಿದರೂ ಸುಮ್ಮನಿದ್ದಾರೆ. ಆದರೆ ಇವರು ಮನೆಯಲ್ಲಿ ಬಂದು ಗಾಡಿ ನಿಲ್ಲಿಸಿದರೂ ನಮಗೆ ಭಯ ಆಗುತ್ತಿರುತ್ತದೆ, ಕೈ ನಡುಗುತ್ತಿರುತ್ತದೆ ಅಷ್ಟು ಸಿಟ್ಟು ಮಾಡಿಕೊಳ್ಳುತ್ತಾರೆ. ಯಾವೊಂದು ಕೆಲಸ ಸಹ. ಬೆಡ್ನಿಂದ ಎದ್ದು ಫ್ಯಾನ್ ಸಹ ಆನ್ ಮಾಡಿಕೊಳ್ಳುವುದಿಲ್ಲ, ಅದಕ್ಕೂ ನನ್ನನ್ನು ಕರೆಯುತ್ತಾರೆ. ಮಾತನಾಡಲು ಬಂದರೆ ಸರಿಯಾಗಿ ಮಾತನಾಡುವುದಿಲ್ಲ, ಮಗ ಆಟ ನೋಡಲು ಕರೆದರೂ ಹೋಗುವುದಿಲ್ಲ. ಆದರೆ ಇಲ್ಲಿ ಎಲ್ಲ ಇದೆ.

ಕುಟುಂಬದವರು ಹೋದ ಬಳಿಕ ರಘು ಸಹ ಈ ವಿಷಯವಾಗಿ ಮಾತನಾಡಿದ್ದು, ‘ನಾನು ಮನೆಯವರೊಟ್ಟಿಗೆ ಸರಿಯಾಗಿ ವರ್ತಿಸಲಿಲ್ಲ. ಅವರು ಬಂದಾಗ ನಾನು ಅವರೊಟ್ಟಿಗೆ ಮಾತನಾಡಲಿಲ್ಲ, ಮಗನೊಟ್ಟಿಗೆ ಆಟ ಆಡಲಿಲ್ಲ ಆದರೆ ನಾನು ಎಂಥಹ ತಪ್ಪು ಮಾಡಿದೆ ಎಂದು ನನಗೆ ಅರ್ಥವಾಗಿದೆ’ ಎಂದು ಹೇಳಲಾಗಿದೆ. ಆ ಮೂಲಕ ಹೊರಗೆ ತಾವು ಮಾಡಿದ ತಪ್ಪಿನ ಅರಿವು ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *