ಮತ್ತೊಂದು ವೀಕೆಂಡ್ ಬಂದಿದೆ. ಸುದೀಪ್ (ಸುದೀಪ್) ಮತ್ತೆ ಬಂದಿದ್ದಾರೆ. ಶನಿವಾರದ ಎಪಿಸೋಡ್ ನಲ್ಲಿ ಸುದೀಪ್ ಅವರು ಸಾಧ್ಯವಾದಷ್ಟು ಗಂಭೀರವಾಗಿರುತ್ತಾರೆ. ಆದರೆ ಶನಿವಾರದ ಎಪಿಸೋಡ್ ಈ ಹಿಂದಿನ ಶನಿವಾರದ ಎಪಿಸೋಡ್ ತುಸು ಭಿನ್ನವಾಗಿತ್ತು. ಸುದೀಪ್ ಅವರು ಆರಂಭದಿಂದ ತುಸು ತಮಾಷೆಯಾಗಿಯೇ ಎಪಿಸೋಡ್ ಆರಂಭಿಸಿದರು. ಅದರಲ್ಲೂ ಸೀಕ್ರೆಟ್ ರೂಂನಲ್ಲಿರುವ ಧ್ರುವಂತ್ ಮತ್ತು ರಕ್ಷಿತಾ ಅವರನ್ನು ಮಾತನಾಡಿಸುವಾಗ ವೀಕ್ಷಿಸಿದಾಗ ಸುದೀಪ್ ಸ್ಪರ್ಧಿಗಳನ್ನು ವೀಕ್ಷಿಸಿದರು, ಸಹ ನಗಿಸಿದರು.
‘ನನಗೆ ಈ ವಾರ ಬಹಳ ಎಂಟರ್ಟೈನ್ ಮೆಂಟ್ ಆಗಿದ್ದು ಬಿಗ್ ಬಾಸ್ ಮನೆಯ ಮೇಯಿನ್ ಮನೆಯವರ ಆಟ ಅಲ್ಲ. ಬದಲಿಗೆ ಸೀಕ್ರೆಟ್ ರೂಂನಲ್ಲಿದ್ದ ನಿಮ್ಮಿಬ್ಬರ ಆಟ. ನಿಮ್ಮಿಬ್ಬರ ಜಗಳ, ನಿಮ್ಮಿಬ್ಬರ ಚರ್ಚೆ, ನಿಮ್ಮಿಬ್ಬರ ಮಾತುಗಳೇ ನನಗೆ ಹೆಚ್ಚು ಖುಷಿ ಕೊಟ್ಟಿತು. ಆ ಮನೆಯಲ್ಲಿ (ಮುಖ್ಯ ಮನೆಯಲ್ಲಿ) ಸ್ಪರ್ಧಿಗಳು ಟಾಸ್ಕ್, ರೂಲ್ಸ್, ಜಗಳ ಎಂದು ತಲೆ ನೋವು ತರಿಸಿದರು’ ಎಂದು ಸುದೀಪ್ ಹೇಳಿದರು.
ಆದರೆ ರಕ್ಷಿತಾ ಮತ್ತು ಧ್ರುವಂತ್ ಅವರು ಪರಸ್ಪರರ ಬಗ್ಗೆ ದೂರುಗಳ ಸರಮಾಲೆಯನ್ನೇ ಸುದೀಪ್ ಎದುರು ಹೇಳಿದ್ದಾರೆ. ರಕ್ಷಿತಾ ಅಂತು, ಸುದೀಪ್ ಅವರು ಏನನ್ನಾದರೂ ಕೇಳುವ ಮುಂಚೆಯೇ ಸರ್ ನನಗೆ ಇಲ್ಲಿ ಇರಲು ಆಗುತ್ತಿಲ್ಲ, ನನಗೆ ಇವರನ್ನು ನೋಡೋಕೆ ಸಹ ಆಗಲ್ಲ. ನಾನು ಅವಾಯ್ಡ್ ಮಾಡುತ್ತೇನೆ ಆದರೂ ಬೇರೆ ಆಪ್ಷನ್ ನನಗೆ ಇಲ್ಲ, ನನ್ನನ್ನು ಇಲ್ಲಿಂದ ಕರೆಸಿಕೊಂಡು ಬಿಡಿ, ನನ್ನನ್ನು ಆ ಮನೆಗೆ ಕಳಿಸಿಕೊಡಿ ಎಂದು ಕೇಳಿದೆ.
ಇದನ್ನೂ ಓದಿ:ಅಪ್ಪನ ಸಿನಿಮಾ ಮೂಲಕ ವಿತರಕಿ ಆದ ಸುದೀಪ್ ಪುತ್ರಿ
ಧ್ರುವಂತ್ ಅವರು ಸಹ ರಕ್ಷಿತಾ ಮೇಲೆ ದೂರು ಹೇಳಿದರು. ಆದರೆ ಧ್ರುವಂತ್ ಅವರು, ತುಸು ಗಾಂಭೀರ್ಯದಿಂದ ದೂರುಗಳನ್ನು ಹೇಳಿದ್ದಾರೆ. ಆದರೆ ಸುದೀಪ್ ಅವರು ನೀವಿಬ್ಬರು ಚೆನ್ನಾಗಿ ಆಡುತ್ತಿದ್ದೀರ, ಇಲ್ಲದಿದ್ದರೆ ನಿಮಗೆ ಇನ್ನೂ ಒಂದು ವಾರ ಇರೋಣ ಅಂದುಕೊಂಡಿದ್ದೀವಿ, ಇನ್ನೂ ಚೆನ್ನಾಗಿ ಆಡಿದರೆ ಈ ಒಂದು ವಾರ ಇಲ್ಲೇ ಇರಿಸುತ್ತೀವಿ, ನೀವು ನೇರವಾಗಿ ಫಿನಾಲೆಗೆ ಹೋಗಬಹುದು. ಇದು ಧ್ರುವಂತ್‌ಗೆ ಆಸಕ್ತಿಯಾಗಿ ಆಯ್ಕೆಯಾಯಿತು, ಆದರೆ ರಕ್ಷಿತಾಗೆ ಇದು ಇಷ್ಟವಾಗಲಿಲ್ಲ.
ಸುದೀಪ್ ಅವರು ರಕ್ಷಿತಾಗೆ ಅವಕಾಶ ನೀಡಿ, ‘ಆ ಮನೆಗೆ ಹೋಗಲು ನೀವು ಧ್ರುವಂತ್ ಅವರನ್ನು ಒಪ್ಪಿಸಿ?’ ಹೇಳಿದರು. ಅದರಂತೆ ರಕ್ಷಿತಾ, ಧ್ರುವಂತ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಿದರು. ಆದರೆ ಧ್ರುವಂತ್ ಒಪ್ಪಲಿಲ್ಲ. ಮೂರು-ನಾಲ್ಕು ಬಾರಿ ಪ್ರಯತ್ನ ಮಾಡಿದರೂ ಸಹ ಧ್ರುವಂತ್, ಇಲ್ಲಿಂದ ನೇರವಾಗಿ ಫಿನಾಲೆಗೆ ಹೋಗೋಣ ಆ ಮನೆಗೆ ಹೋಗೋದು ಇಷ್ಟ ಇಲ್ಲ ಎಂದರು. ಎಲ್ಲ ಬುದ್ಧಿವಂತಿಕೆಯನ್ನು ಬಳಸಿದ ಬಳಿಕ ಕೊನೆಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು ರಕ್ಷಿತಾ, ನೀವು ಮನೆಯಲ್ಲಿ ಉಳಿಯಬೇಕು ಎಂದರೆ ನಾನು ನಿಮ್ಮನ್ನು ನೆಮ್ಮದಿಯಾಗಿ ಇರಲು ಬಿಡುವುದಿಲ್ಲ’ ಎಂದು ಹೇಳಿದರು. ಇದು ಧ್ರುವಂತ್‌ಗೆ ಶಾಕ್ ತಂದಿತು. ಸುದೀಪ್ ಸಹ ರಕ್ಷಿತಾರ ಮಾತು ಕೇಳಿ ನಕ್ಕರು. ಕೊನೆಗೆ ಧ್ರುವಂತ್ ಮತ್ತು ರಕ್ಷಿತಾ ಇಬ್ಬರನ್ನೂ ಮನೆಯೊಳಗೆ ಕಳಿಸಲಾಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ