ಬಿಗ್ಬಾಸ್ ಕನ್ನಡ ಸೀಸನ್ 12 ರ (ಬಿಗ್ ಬಾಸ್) ಕೊನೆಯ ವೀಕೆಂಡ್ ಎಪಿಸೋಡ್ ಇಂದು (ಜನವರಿ 11) ನಡೆಯಿತು. ಭಾನುವಾರದ ಎಪಿಸೋಡ್‌ನಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಲೇಬೇಕಿತ್ತು. ಮನೆಯಲ್ಲಿ ಒಟ್ಟು ಎಂಟು ಮಂದಿ ಇದ್ದು, ಇಂದು ಒಬ್ಬರು ಮನೆಯಿಂದ ಹೊರಗೆ ಹೋಗಿದ್ದಾರೆ. ನಾಮಿನೇಟ್ ಆಗಿದ್ದ ಗಿಲ್ಲಿ, ಕಾವ್ಯ, ರಾಶಿಕಾ, ಧ್ರುವಂತ್, ರಘು, ರಕ್ಷಿತಾ, ಅವರಿಬ್ಬರು ಕೊನೆಯ ದಿನಗಳಲ್ಲಿ ಉಳಿದುಕೊಂಡಿದ್ದರು.
ಈ ಇಬ್ಬರಲ್ಲಿ ರಾಶಿಕಾ ಅವರು ಮನೆಯಿಂದ ಹೊರಗೆ ಹೋಗಿದ್ದಾರೆ. ಆ ಮೂಲಕ ಫಿನಾಲೆ ಎಂಟ್ರಿಯ ಹೊಸ್ತಿಲಲ್ಲಿ ಮನೆಯಿಂದ ಹೊರಗೆ ಹೋಗಿದೆ. ಪ್ರಸ್ತುತ ಮನೆಯಲ್ಲಿ ಅಶ್ವಿನಿ, ಧನುಶ್, ಗಿಲ್ಲಿ, ಕಾವ್ಯ, ಧ್ರುವಂತ್, ರಕ್ಷಿತಾ, ರಘು ಅವರು ಮಾತ್ರ ಉಳಿದಿದ್ದು, ಈ ಎಲ್ಲರೂ ಫಿನಾಲೆ ಸ್ಪರ್ಧಿಗಳಾಗಿದ್ದಾರೆ. ರಾಶಿಕಾ ಕೊನೆಯ ಹಂತದಲ್ಲಿ ಮನೆಯಿಂದ ಹೊರಗೆ ಬಂದಿದ್ದಾರೆ. ಆ ಮೂಲಕ ಫಿನಾಲೆ ಸ್ಪರ್ಧಿ ಎನಿಸಿಕೊಳ್ಳುವ ಅವಕಾಶದಿಂದ ಸ್ವಲ್ಪದರಲ್ಲಿ ವಂಚಿತರಾಗಿದ್ದಾರೆ.
ರಾಶಿಕಾ ಚೆನ್ನಾಗಿಯೇ ಆಡಿದ್ದರು. ರಾಶಿಕಾ ಬಂದಾಗ ಇವರು ಆಟದಿಂದಲ್ಲ ಬದಲಾಗಿ ಶೋನಲ್ಲಿ ಉಳಿದುಕೊಳ್ಳುವ ಸ್ಪರ್ಧಿ ಎಂದುಕೊಳ್ಳಲಾಯಿತು. ಆದರೆ ರಾಶಿಕಾ ಅಂದದಿಂದ ಆಟದಿಂದಲೂ ಗಮನ ಸೆಳೆದರು. ಗೆಳೆಯರನ್ನು ಮಾಡಿಕೊಂಡರು, ಜಗಳ ಆಡಿದರು. ಯಾವುದೇ ಒಂದು ಪಕ್ಷ ಸೇರದೆ ಎಲ್ಲರೊಟ್ಟಿಗೆ ಬೆರೆತರು, ಎಲ್ಲರೊಟ್ಟಿಗೆ ಜಗಳ ಕೂಡ ಆಡಿದರು ಒಟ್ಟಾರೆಯಾಗಿ 360 ಡಿಗ್ರಿ ಆಟವಾಡಿದ ರಾಶಿಕಾ ಇದೀಗ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.
ಇದನ್ನೂ ಓದಿ:ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ವೇದಿಕೆಯಲ್ಲಿ ಸುದೀಪ್ ಜೊತೆಗೆ ಮಾತನಾಡಿದ ರಾಶಿಕಾ, ‘ಬಿಗ್ಬಾಸ್ ಮನೆಗೆ ಬಂದಿದ್ದು ನನ್ನ ಜೀವನದಲ್ಲಿ ನಾನು ಮಾಡಿದ ಒಳ್ಳೆಯ ನಿರ್ಧಾರ. ನನಗೆ ಇಷ್ಟು ಧೈರ್ಯವಂತೆ ಎಂಬುದು ಇಲ್ಲಿಗೆ ಬರುವವರೆಗೆ ನನಗೆ ಸಹ ಗೊತ್ತಿರಲಿಲ್ಲ. ನಾನು ಸಹ ಬಹಳ ಸ್ಟ್ರಾಂಗ್ ಎಂದು ಗೊತ್ತಾಯಿತು. ಒಂದಲ್ಲಂತೂ ಬಿಗ್ಬಾಸ್ ಮನೆಯಲ್ಲೇ ಇದ್ದುಬಿಡೋಣ ಎನಿಸಿಬಿಟ್ಟಿತು, ಅಪ್ಪನ ಧ್ವನಿಯ ಬಳಿಕ ನಾನು ಹೆದರಿರುವುದು ಬಿಗ್ಬಾಸ್ ಧ್ವನಿಗೆ ಮಾತ್ರ’ ಎಂದು ಹೇಳಿದರು.
ರಾಶಿಕಾ ಅವರಿಗೆ ಹಲವು ಉಡುಗೊರೆಗಳನ್ನು ಕೊಟ್ಟ ಸುದೀಪ್ ಅವರು ಭವಿಷ್ಯಕ್ಕೆ ಶುಭ ಹಾರೈಸಿ, ಅವರ ಸಂಜೆ ಕೊಂಡಾಡಿ ಬೀಳ್ಕೊಟ್ಟರು. ಮನೆಯಲ್ಲಿ ಏಳು ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದು, ಅವರಲ್ಲಿ ಒಬ್ಬರು ವಾರದ ಮಧ್ಯಭಾಗದಲ್ಲಿಯೇ ಹೊರಗೆ ಹೋಗಲಿದ್ದಾರೆ. ಅದಾದ ಬಳಿಕ ಉಳಿದ ಆರರಲ್ಲಿ ಒಬ್ಬರು ವಿನ್ನರ್ ಆಗಿ ಘೋಷಿತಗೊಳ್ಳಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ