Headlines

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಟಿಆರ್​ಪಿ: ವಾರಾಂತ್ಯದಲ್ಲಿ ಬೊಂಬಾಟ್, ವಾರದ ದಿನದಲ್ಲಿ..

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಟಿಆರ್​ಪಿ: ವಾರಾಂತ್ಯದಲ್ಲಿ ಬೊಂಬಾಟ್, ವಾರದ ದಿನದಲ್ಲಿ..


‘ಬಿಗ್ ಬಾಸ್ ಕನ್ನಡ ಸೀಸನ್ 12’ರ (ಬಿಬಿಕೆ 12) ಶೋ ‘ಎಕ್ಸ್‌ಪೆಕ್ಟ್ ದಿ ಅನ್‌ಎಕ್ಸ್‌ಪೆಕ್ಟ್’ ಎಂಬ ಥೀಮ್ ಅಡಿಯಲ್ಲಿ ಮೂಡಿ ಬಂದಿದೆ. ಯಾರೂ ನಿರೀಕ್ಷಿಸದೇ ಇರುವದೇ ಇದೆ ಎಂಬುದು ಇದರ ಅರ್ಥ. ಟಿಆರ್ ಪಿ ವಿಚಾರದಲ್ಲಿಯೂ ಹೀಗೆಯೇ ಆಯಿತೇ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ವಾರಾಂತ್ಯದಲ್ಲಿ ಒಳ್ಳೆಯ ಟಿಆರ್ ಪಿ ಪಡೆಯುತ್ತಿರುವ ಶೋ, ವಾರದ ದಿನಗಳಲ್ಲಿ ಡಲ್ ಹೊಡೆದಿದೆ.

ಕಿಚ್ಚ ಸುದೀಪ್ ಅವರನ್ನು ನೋಡುವ ಕಾರಣದಿಂದ ಅನೇಕರು ಬಿಗ್ ಬಾಸ್ ನೋಡುತ್ತಾರೆ. ಶನಿವಾರ ಹಾಗೂ ಭಾನುವಾರ ‘ಬಿಗ್ ಬಾಸ್’ ಪ್ರಸಾರ ಕಾಣಿಸಿಕೊಂಡಿದೆ. ಶನಿವಾರದ ಎಪಿಸೋಡ್ಗೆ ನಗರ ಭಾಗದಲ್ಲಿ 9.1 ಟಿಆರ್ಪಿ ಸಿಕ್ಕಿದೆ. ನಗರ ಹಾಗೂ ಗ್ರಾಮಾಂತರ ಸೇರಿದರೆ 8.3 ಟಿವಿಆರ್ ಸಿಕ್ಕಿದೆ. ಭಾನುವಾರ ನಗರ + ಗ್ರಾಮಾಂತರ 7.8 ಹಾಗೂ ನಗರದಲ್ಲಿ 8.9 ಟಿವಿಆರ್ ದೊರೆತಿದೆ.

ಆದರೆ, ವಾರದ ದಿನಗಳಲ್ಲಿ ಶೋಗೆ ಟಿಆರ್‌ಪಿ ಸ್ವಲ್ಪ ಕಡಿಮೆಯಾಗಿದೆ ಎಂಬ ಅಭಿಪ್ರಾಯ ವೀಕ್ಷಕರ ವಲಯದಲ್ಲಿ ಕಂಡುಬರುತ್ತದೆ. ಏಕೆಂದರೆ ಕರ್ನಾಟಕದಲ್ಲಿ 5.8 ಟಿವಿಆರ್ ಹಾಗೂ ನಗರದಲ್ಲಿ 6.2 ಟಿವಿಆರ್ ಸಿಕ್ಕಿದೆ. ಆರಂಭದ ವಾರದಲ್ಲಿ ಕಡಿಮೆ ಟಿಆರ್ ಪಿ ಸಿಕ್ಕಿರಬಹುದು ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಇದನ್ನೂ ಓದಿ

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್; ಆ ಇಬ್ಬರು ಔಟ್?

ಧಾರಾವಾಹಿ ಟಿಆರ್ ಪಿ

ಧಾರಾವಾಹಿ ಟಿಆರ್ ಪಿ ಕೂಡ ಗಮನ ಸೆಳೆಯುವ ರೀತಿಯಲ್ಲಿ ಇದೆ. ಮೊದಲ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ಎರಡನೇ ಸ್ಥಾನದಲ್ಲಿ ‘ಕರ್ಣ’ ಧಾರಾವಾಹಿ ಇದೆ. ಮೂರನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಎಲ್ಲಾ ಧಾರಾವಾಹಿಗಳು 8+ ಟಿಆರ್‌ಪಿ ಇವೆ. ನಾಲ್ಕನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಹಾಗೂ ಐದನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ.

ಈ ವಾರವೇ ಫಿನಾಲೆ

‘ಬಿಗ್ ಬಾಸ್ ಕನ್ನಡ ಸೀಸನ್ 12’ ರ ಮೊದಲ ಫಿನಾಲೆ ಈ ವಾರ. ಈ ವೇಳೆ ಕೆಲವು ಔಟ್ ಆಗುವ ಸಾಧ್ಯತೆಯಿದೆ. ಹೀಗಾಗಿ, ವೀಕೆಂಡ್ ಎಪಿಸೋಡ್ನಲ್ಲಿ ಒಳ್ಳೆಯ ಟಿಆರ್ಪಿ ನಿರೀಕ್ಷಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *