Headlines

ಗಿಲ್ಲಿ ನಟನಿಗೆ ರಾಜಯೋಗ; Bigg Boss Kannada 12 ಮುಗಿಯುತ್ತಿದ್ದಂತೆ ಕಂಡ ಕನಸು ಈಡೇರಿತು!

ಗಿಲ್ಲಿ ನಟನಿಗೆ ರಾಜಯೋಗ; Bigg Boss Kannada 12 ಮುಗಿಯುತ್ತಿದ್ದಂತೆ ಕಂಡ ಕನಸು ಈಡೇರಿತು!

ಗಿಲ್ಲಿ ನಟನಿಗೆ ರಾಜಯೋಗ; Bigg Boss Kannada 12 ಮುಗಿಯುತ್ತಿದ್ದಂತೆ ಕಂಡ ಕನಸು ಈಡೇರಿತು!

Bigg Boss Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ವಿಜೇತ ಗಿಲ್ಲಿ ನಟ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನಿತ್ಯ ಒಂದಲ್ಲ ಒಂದು ಕಾರ್ಯಕ್ರಮಗಳು, ರಾಜಕಾರಣಿಗಳ ಭೇಟಿ ಮಧ್ಯೆ ಇನ್ನೆರಡು ಖುಷಿಯ ವಿಷಯವೂ ಇದೆ.

ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳಬೇಕು ಎಂದು ಗಿಲ್ಲಿ ನಟ ಆಸೆ ಪಟ್ಟಿದ್ದರು. ಅದರಂತೆ ಫೆಬ್ರವರಿ 6ರಂದು ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಕಥಾಹಂದರ ಹೊಂದಿರುವ ‘ಸರ್ಕಾರಿ ಶಾಲೆ- H 8′ ಸಿನಿಮಾವು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

ಬಿಗ್ ಬಾಸ್ ಕನ್ನಡ ಸೀಸನ್‌ 12 ವಿಜೇತ ಗಿಲ್ಲಿ ನಟ ಪ್ರಮುಖ ಪಾತ್ರಲ್ಲಿ ನಟಿಸಿರುವ ಈ ಸಿನಿಮಾಕ್ಕೆ ಗುಣ ಹರಿಯಬ್ಬೆ ಅವರು ಕಥೆ, ಚಿತ್ರಕಥೆ ಬರೆದಿದ್ದಾರೆ, ಅಷ್ಟೇ ಅಲ್ಲದೆ ನಿರ್ದೇಶನ ಮಾಡಿದ್ದಾರೆ. ಗಿರಿಚಂದ್ರ ಪ್ರೊಡಕ್ಷನ್ಸ್ ಮೂಲಕ ತೇಜಸ್ವಿನಿ ಎಸ್. ಅವರು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

’ಸರ್ಕಾರಿ ಶಾಲೆ- H 8′ ಸಿನಿಮಾವು ಪ್ರಾರಂಭದಿಂದಲೂ ಕುತೂಹಲ ಕೆರಳಿಸುತ್ತಲೇ ಸಾಗುತ್ತದೆ. ಈ ಸಿನಿಮಾ ಕಥೆ ಒಂದು ವಿಗ್ರಹದ ಸುತ್ತಲೇ ನಡೆಯುತ್ತದೆ. ಈ ಸಿನಿಮಾಕ್ಕೆ ಬೆಂಗಳೂರು, ಚಿತ್ರದುರ್ಗ, ಶಿರಾ, ಶಿವಮೊಗ್ಗ ಸುತ್ತಮುತ್ತ ಶೂಟಿಂಗ್‌ ಮಾಡಲಾಗಿದೆ.

ವಿಜೇತ್ ಮಂಜಯ್ಯ ಸಂಗೀತ ಸಂಯೋಜನೆಯ 3 ಹಾಡುಗಳು ಈ ಸಿನಿಮಾದಲ್ಲಿ, ಹಾಸ್ಯನಟ ಶರಣ್, ಮೆಹಬೂಬ್ ಸಾಬ್ ಒಂದೊಂದು ಹಾಡನ್ನು ಹಾಡಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯ, ರವಿ ರಾಮದುರ್ಗ, ವೀನಸ್ ಮೂರ್ತಿ ಕ್ಯಾಮೆರಾ ವರ್ಕ್, ರವಿತೇಜ ಸಿ ಎಚ್ ಸಂಕಲನ ಈ ಸಿನಿಮಾಕ್ಕಿದೆ.

’ಸರ್ಕಾರಿ ಶಾಲೆ- H 8’ ಸಿನಿಮಾದಲ್ಲಿ ಗಿಲ್ಲಿ ನಟ, ಗುಣ ಹರಿಯಬ್ಬೆ, ಮೇಘಶ್ರೀ, ಜನಪದ ಕಲಾವಿದ ಮೋಹನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹಿರಿಯನಟ ರಾಘವೇಂದ್ರ ರಾಜ್ ಕುಮಾರ್, ಸುಚೇಂದ್ರ ಪ್ರಸಾದ್ , ಜಗಪ್ಪ, ನವಾಜ್, ಸುಷ್ಮಿತಾ ಜಗಪ್ಪ, ಕಡ್ಡಿ ವಿಶ್ವ, ಜೋತಿರಾಜ್, ನಮ್ರತಾ ನಟಿಸಿದ್ದಾರೆ.

Source link

Leave a Reply

Your email address will not be published. Required fields are marked *