Headlines

ಕ್ಯಾಪ್ಟನ್ ಆದ ಧನುಶ್, ಮಂಜು ಶ್ರಮ ವ್ಯರ್ಥ ಮಾಡಿದ ಸೂರಜ್

ಕ್ಯಾಪ್ಟನ್ ಆದ ಧನುಶ್, ಮಂಜು ಶ್ರಮ ವ್ಯರ್ಥ ಮಾಡಿದ ಸೂರಜ್


ಬಿಗ್ಬಾಸ್ (ಬಿಗ್ ಬಾಸ್) ಮನೆಗೆ ಉಗ್ರಂ ಮಂಜು, ರಜತ್, ಚೈತ್ರಾ ಕುಂದಾಪುರ, ಮೋಕ್ಷಿತಾ, ತ್ರಿವಿಕ್ರಮ್ ಅವರು ಅತಿಥಿಗಳಾಗಿ ಬಂದಿದ್ದರು. ವಾರವೆಲ್ಲ, ಮನೆ ಸ್ಪರ್ಧಿಗಳು ಅವರ ಸೇವೆಗಳನ್ನು ಮಾಡಿದರು. ಕೆಲವು ಸಂದರ್ಭಗಳಲ್ಲಿ ಅತಿಥಿಗಳು ಮತ್ತೆ ಆತಿಥ್ಯ ವಹಿಸಿದವರ ನಡುವೆ ಮನಸ್ಥಾಪವೂ ಸಹ ನಡೆಯಿತು. ಆದರೆ ಗುರುವಾರದ ಎಪಿಸೋಡ್‌ನಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ಆಡಿಸಬೇಕಿತ್ತು. ಯಾರಿಗೆ ಹೆಚ್ಚು ಅಂಕಗಳು ಇವೆಯೋ ಅವರಿಗೆ ಮಾತ್ರ ಕ್ಯಾಪ್ಟೆನ್ಸಿ ಟಾಸ್ಕ್ ಅವಕಾಶ ಇತ್ತು.

ಅದರಂತೆ ರಘು, ಅಭಿಷೇಕ್, ಧನುಶ್, ಸೂರಜ್, ಸ್ಪಂದನಾ ಅವರಿಗೆ ಕ್ಯಾಪ್ಟೆನ್ಸಿ ಓಟಕ್ಕೆ ಅವಕಾಶ ಸಿಕ್ಕಿತು. ಇವರುಗಳ ವಾರದಲ್ಲಿ ನಡೆದ ಟಾಸ್ಕ್‌ನಲ್ಲಿ ಹೆಚ್ಚಿನ ಪಾಯಿಂಟ್‌ಗಳನ್ನು ಸಂಪಾದನೆ ಮಾಡಲಾಯಿತು. ಪಾಯಿಂಟ್ಸ್ ಶೇರಿಂಗ್ ವಿಚಾರಕ್ಕೆ ತುಸು ಅಸಮಾಧಾನ ಉಂಟಾದರೂ ಅಂತಿಮವಾಗಿ ರಘು, ಸೂರಜ್, ಅಭಿ, ಧನುಷ್ ಮತ್ತು ಸ್ಪಂದನಾ ಅವರಿಗೆ ಹೆಚ್ಚು ಪಾಯಿಂಟ್ಸ್ ಸಿಕ್ಕಿದೆ ಅವರಿಗೆ ಮಾತ್ರ ಕ್ಯಾಪ್ಟೆನ್ಸಿ ಟಾಸ್ಕ್ ಆಯ್ಕೆಯಾಗಿದೆ.

ಆದರೆ ಅವರಿಗೆ ಬಿಗ್ಬಾಸ್ ಷರತ್ತನ್ನು ವಿಧಿಸಿದರು. ಅತಿಥಿಗಳ ಮನವೊಲಿಸಿ ತಮ್ಮೊಟ್ಟಿಗೆ ಒಬ್ಬ ಅತಿಥಿಯನ್ನು ಕರೆತರಬೇಕು ಎಂಬುದು ನಿಬಂಧನೆ. ಅದರಂತೆ ಎಲ್ಲ ಸ್ಪರ್ಧಿಗಳು ಅತಿಥಿಗಳ ಬಳಿ ಮನವಿ ಮಾಡಿ ಅವರ ಮನವೊಲಿಸುವ ಯತ್ನ ಮಾಡಿದರು. ಅಂತಿಮವಾಗಿ ಧನುಶ್ ಪರವಾಗಿ ತ್ರಿವಿಕ್ರಮ್, ಸೂರಜ್ ಪರವಾಗಿ ಉಗ್ರಂ ಮಂಜು, ರಘು ಪರವಾಗಿ ಮೋಕ್ಷಿತಾ, ಅಭಿ ಪರವಾಗಿ ಚೈತ್ರಾ ಕುಂದಾಪುರ, ಸ್ಪಂದನಾ ಪರವಾಗಿ ರಜತ್ ಸ್ಪರ್ಧಿಸಿದರು.

ಇದನ್ನೂ ಓದಿ:ಎಲ್ಲ ಸ್ಪರ್ಧಿಗಳು ಹೊರಕ್ಕೆ: ಖಾಲಿಯಾಗಿರುವ ಬಿಗ್ಬಾಸ್ ಮನೆ ಹೇಗಿದೆ ನೋಡಿ

ಟಾಸ್ಕ್ ಎರಡು ಹಂತದಲ್ಲಿತ್ತು. ಮೊದಲ ಹಂತವನ್ನು ಅತಿಥಿಗಳು, ಎರಡನೇ ಹಂತವನ್ನು ಸ್ಪರ್ಧಿಗಳು ಆಡಬೇಕಿತ್ತು. ಉಗ್ರಂ ಮಂಜು ಅದ್ಭುತವಾಗಿ ಆಡಿ ಎಲ್ಲರಿಗಿಂತಲೂ ಮೊದಲು ಸೂರಜ್ ಅವರಿಗೆ ಇಷ್ಟ ಬಿಟ್ಟುಕೊಟ್ಟರು. ಆದರೆ ಬ್ಯಾಲೆನ್ಸ್ ಮಾಡುವ ಆಟದಲ್ಲಿ ಸೂರಜ್ ಎಡವಿದರು. ಪದೇ ಪದೇ ಎಡವಿದರು. ಸಾಕಷ್ಟು ಪ್ರಯತ್ನಗಳ ಬಳಿಕವೂ ಅವರಿಗೆ ಕಡ್ಡಿಗಳನ್ನು ಬ್ಯಾಲೆನ್ಸ್ ಮಾಡಲು ಆಗಲಿಲ್ಲ. ರಘು ಒಮ್ಮೆ ಬ್ಯಾಲೆನ್ಸ್ ಮಾಡಿದರೂ ಸಹ ಅದು ನಿಲ್ಲಲಿಲ್ಲ. ಬಳಿಕ ತ್ರಿವಿಕ್ರಮ್ ಜೊತೆಗೂಡಿ ಆಡಿದ ಧನುಷ್ ತಡವಾಗಿ ಅವಕಾಶ ಸಿಕ್ಕರೂ ಸಹ ಸರಿಯಾಗಿ ಬ್ಯಾಲೆನ್ಸ್ ಮಾಡಿ ಆಟ ಗೆದ್ದು ಮತ್ತೊಮ್ಮೆ ಕ್ಯಾಪ್ಟನ್ ಆದರು. ಧನುಶ್ ಇದು ಎರಡನೇ ಬಾರಿ ಕ್ಯಾಪ್ಟನ್ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *