Headlines

ಡಬಲ್ ಎಲಿಮಿನೇಷನ್: ಎಲ್ಲರಿಗೂ ಸರ್ಪ್ರೈಸ್ ಕೊಟ್ಟ ಬಿಗ್​​ಬಾಸ್​​

ಡಬಲ್ ಎಲಿಮಿನೇಷನ್: ಎಲ್ಲರಿಗೂ ಸರ್ಪ್ರೈಸ್ ಕೊಟ್ಟ ಬಿಗ್​​ಬಾಸ್​​


ಬಿಗ್ಬಾಸ್ (ಬಿಗ್ ಬಾಸ್) ಮನೆಯಲ್ಲಿ ಭಾನುವಾರ ಬಂತೆಂದರೆ ಒಬ್ಬರ ಮನೆಯಿಂದ ಹೊರಗೆ ಬರುವುದು ಖಾತ್ರಿ. ಈ ವಾರವೂ ಸಹ ಅಶ್ವಿನಿ, ಗಿಲ್ಲಿ, ರಜತ್, ಧ್ರುವಂತ್, ರಕ್ಷಿತಾ, ಸ್ಪಂದನಾ ಇನ್ನೂ ಕೆಲವರು ನಾಮಿನೇಟ್ ಆಗಿದ್ದರು. ನಂತರ ಸೇಫ್ ಆಗಿ ಕೊನೆಗೆ ರಜತ್, ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರು ಅಂತಿಮವಾಗಿ ಉಳಿದಿದ್ದರು. ಆಗ ಸುದೀಪ್ ಅವರು ಶಾಕ್ ಮಾಡಿದ್ದಾರೆ. ಈ ಬಾರಿ ಮನೆಯಿಂದ ಒಬ್ಬರಲ್ಲ, ಇಬ್ಬರು ಹೊರಗೆ ಹೋಗುತ್ತಾರೆ. ರಜತ್ ಅವರನ್ನು ಮನೆಯಲ್ಲೇ ಉಳಿಸಿ, ಧ್ರುವಂತ್ ಮತ್ತು ರಕ್ಷಿತಾರನ್ನು ಎವಿಕ್ಟ್ ಎಂದು ಘೋಷಿಸಲಾಯ್ತು.

ಬಿಗ್ಬಾಸ್ ಅವರ ಈ ನಿರ್ಣಯ ಮನೆ ಮಂದಿಗೆ ದೊಡ್ಡ ಶಾಕ್ ನೀಡಿತು. ಧ್ರುವಂತ್ ಅವರು ಕಳೆದ ಎರಡು ವಾರಗಳಿಂದಲೂ ಮನೆಯಿಂದ ಹೊರ ಹೋಗುವ ಪ್ರಯತ್ನದಲ್ಲೇ ಇದ್ದರು. ಯಾರೂ ಸಹ ಅವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ, ಆದರೆ ರಕ್ಷಿತಾ ಶೆಟ್ಟಿ ಎವಿಕ್ಟ್ ಆಗಿದ್ದು ಎಲ್ಲರಿಗೂ ಶಾಕ್ ಆಯ್ತು. ಮಾಳು, ರಘು ಇನ್ನೂ ಕೆಲವರಂತೂ ಕಣ್ಣೀರು ಹಾಕಿಬಿಟ್ಟರು. ಅಶ್ವಿನಿ ಸಹ ಕಣ್ಣೀರು ಹಾಕುತ್ತಾ, ಪದೇ ಪದೇ ರಕ್ಷಿತಾಗೆ ಕ್ಷಮೆ ಕೇಳಿದರು.

ರಕ್ಷಿತಾಗೆ ಸಹ ಬಿಗ್ ಬಾಸ್ ನಿರ್ಣಯ ಶಾಕ್ ತಂದಿತು. ರಕ್ಷಿತಾಗೆ ಅಳು ತಡೆಯಲೇ ಆಗಲಿಲ್ಲ. ಆದರೂ ಗಟ್ಟಿ ಮನಸ್ಸು ಮಾಡಿ ಮನೆಯಿಂದ ಹೊರಗೆ ಬಂದರು. ರಕ್ಷಿತಾ ಹೊರಗೆ ಬಂದ ಬಳಿಕವೂ ಸಹ ಮನೆ ಸದಸ್ಯರು ರಕ್ಷಿತಾ ಬಗ್ಗೆಯೇ ಮಾತನಾಡುತ್ತಾರೆ. ‘ನಾನು ಕಣ್ಣೀರು ಹಾಕಿದವನಲ್ಲ, ಆದರೆ ರಕ್ಷಿತಾ ಹೋಗಿದ್ದು ಯಾರಿಗೂ ಬೇಸರವಾಯ್ತು, ಆಕೆಯನ್ನು ಬಹಳ ಮಿಸ್ ಮಾಡಿಕೊಳ್ಳಲಿದ್ದೇನೆ’ ಎಂದು ಗಿಲ್ಲಿ ಹೇಳಿದರು. ರಜತ್ ಸಹ, ‘ನಾನು ಕಳೆದ ಸೀಸನ್‌ನಲ್ಲಿಯೂ ಸಹ ಯಾರನ್ನೂ ಹಚ್ಚಿಕೊಂಡಿರಲಿಲ್ಲ ಆದರೆ ರಕ್ಷಿತಾ ಅವರನ್ನು ಬಹಳ ಹಚ್ಚಿಕೊಂಡಿದ್ದೆ’ ಎಂದು ಬೇಸರ ವ್ಯಕ್ತಪಡಿಸಿದರು. ರಘು ಅಂತೂ ರಕ್ಷಿತಾ ಹೋಗುವಾಗ, ನೆನಪಿಗೆಂದು ಅವರ ಆಭರಣವನ್ನೇ ತೆಗೆದುಕೊಟ್ಟರು.

ಇದನ್ನೂ ಓದಿ:ಪ್ರೊಮೊನಲ್ಲೇ ಶಾಕ್ ಕೊಟ್ಟ ಬಿಗ್ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ

ಅಸಲಿ ಸುದ್ದಿ ಏನೆಂದರೆ ಈ ವಾರ ಓಟಿಂಗ್ ಲೈನ್ಸ್ ಓಪನ್ ಆಗಿರಲೇ ಇಲ್ಲ. ಅಂದರೆ ಈ ವಾರ ಯಾರೂ ಎವಿಕ್ಟ್ ಆಗುವಂತೆಯೇ ಇಲ್ಲ. ಆದರೆ ಬಿಗ್ಬಾಸ್ ಬೇಕೆಂತಲೆ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿಯನ್ನು ಹೊರಗೆ ಕರೆಸಿಕೊಂಡಿದ್ದಾರೆ. ಆದರೆ ಅವರನ್ನು ಎಲ್ಲಿ ಇರಿಸಿದ್ದಾರೆ. ಮತ್ತೆ ಯಾವಾಗ ಅವರಿಬ್ಬರು ಮನೆಯ ಒಳಗೆ ಹೋಗಲಿದ್ದಾರೆ ಎಂಬುದು ಪ್ರಶ್ನೆ. ಸುದೀಪ್ ಸಹ, ಈ ಬಗ್ಗೆ ಹೇಳಿದ್ದು, ಇಬ್ಬರೂ ಸಹ ಎಲ್ಲಿರಲಿದ್ದಾರೆ, ಅವರು ಏನೇನೋ ನೋಡಲಿದ್ದಾರೆ? ಎಂಬ ಕುತೂಹಲ ಇದೆ. ಒಳ್ಳೆಯ ಸಮಯದಲ್ಲಿ ಮತ್ತೆ ಅವರ ಮನೆಯ ಒಳಗೆ ಕಳಿಸಲಿದ್ದೇವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *