ಬಿಗ್ಬಾಸ್ (ಬಿಗ್ ಬಾಸ್) ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯಾ ಅವರದ್ದು ಆತ್ಮೀಯ ಗೆಳತಿ. ಗಿಲ್ಲಿ, ಕಾವ್ಯವನ್ನು ಕಾಲೆಳೆಯುತ್ತಾನೆ, ಗೋಳು ಹೊಯ್ದುಕೊಳ್ಳುತ್ತಾನೆ ಹಾಗಿದ್ದರೂ ಸಹ ಇವರ ಆತ್ಮೀಯತೆ ಮಿತಿಯಲ್ಲೇ ಇದೆ. ಕಾವ್ಯ ಸಹ ಗಿಲ್ಲಿ ಹೇಳಿದ್ದಕ್ಕೆಲ್ಲ ಸೊಪ್ಪು ಹಾಕಲ್ಲ, ಗಿಲ್ಲಿಯನ್ನು ಬೈಯ್ಯುತ್ತಾ, ಅವಕಾಶ ಸಿಕ್ಕಾಗ ಗಿಲ್ಲಿಗೆ ಬುದ್ಧಿವಾದ ಹೇಳುತ್ತಾ ಒಟ್ಟಿನಲ್ಲಿ ಒಂದು ಒಳ್ಳೆಯ ಗೆಳೆತನವನ್ನು ಮೇಂಟೇನ್ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಗಿಲ್ಲಿ ಬಗ್ಗೆ ಕಾವ್ಯ ತಪ್ಪು ತಿಳಿದುಕೊಂಡಿದ್ದರೇ?
ಭಾನುವಾರದ ಎಪಿಸೋಡ್‌ನಲ್ಲಿ ಸುದೀಪ್ ಪ್ರಶ್ನೋತ್ತರ ಬಯಸಿದ್ದಾರೆ. ಸುದೀಪ್ ಕೇಳುವ ಪ್ರಶ್ನೆಗೆ ಸ್ಪರ್ಧಿಗಳು ಎಸ್ ಅಥವಾ ನೋ ಎಂದು ತೋರಿಸಿದರೆ ಉತ್ತರಿಸಬೇಕು, ಸುದೀಪ್ ವಿವರಣೆ ಕೇಳಿದಾಗ ಅದಕ್ಕೆ ವಿವರಣೆ ನೀಡಲಾಗಿದೆ ಇದು ನಿಯಮ. ಅದರಂತೆ ಸುದೀಪ್ ಇಂದು ಸ್ಪರ್ಧಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಸ್ಪರ್ಧಿಗಳು ಉತ್ತರ ಸಹಿತ.
ಅದರಂತೆ ಸುದೀಪ್ ಅವರು ‘ಗಿಲ್ಲಿ, ಕಾವ್ಯಾ ಅವರನ್ನು ಸಲುಗೆ ತೆಗೆದುಕೊಂಡಿದ್ದಾರೆ’ ಎಂಬ ಹೇಳಿಕೆ ನೀಡಿದ್ದಾರೆ. ಅದಕ್ಕೆ ಕಾವ್ಯ ಸೇರಿದಂತೆ ಹೌದು ಎಂಬ ಉತ್ತರ. ಕಾವ್ಯಾ ಸಹ ಹೌದು ಎಂದರು. ಅದೇಕೆಂದು ಸುದೀಪ್ ಕೇಳಿದಾಗ, ಉತ್ತರಿಸಿದ ಕಾವ್ಯ, ‘ಹಲವು ಬಾರಿ ನನ್ನನ್ನು ಗ್ಯಾಂಟೆಡ್ ಆಗಿ ತೆಗೆದುಕೊಂಡಿದ್ದಾನೆ ಗಿಲ್ಲಿ. ಕಳೆದ ಟಾಸ್ಕ್ ಒಂದರಲ್ಲಿ ಗಿಲ್ಲಿ ಕ್ಯಾಪ್ಟನ್ ಆಗಿದ್ದಾಗ, ನಾನು ಹೋಗಿ ಯಾರ್ಯಾರು ಆಡುತ್ತಿದ್ದೇನೆ ಎಂದು ಕೇಳಿದೆ ಆಗ ನನಗೆ ಸರಿಯಾಗಿ ಉತ್ತರಿಸಲಿಲ್ಲ, ನಾನು ಹಲವು ಬಾರಿ ಗಂಭೀರವಾಗಿ ಕೆಲವು ಬುದ್ಧಿವಾದ ಹೇಳುತ್ತೇನೆ ಆಗಲೂ ಸಹ ಅದರ ಬಗ್ಗೆ ಗಮನ ಹರಿಸುವುದಿಲ್ಲ’ ಕಾವ್ಯಾ.
ಇದನ್ನೂ ಓದಿ:ಅಶ್ವಿನಿ ಬಗ್ಗೆ ಗಿಲ್ಲಿ ಆಡಿದ ಮಾತು ಕೇಳಿ ಕುಸಿದೇ ಬಿಟ್ಟ ಕಿಚ್ಚ ಸುದೀಪ್
ಆದರೆ ಕಾವ್ಯಾರಿಗೆ ಪ್ರತ್ಯುತ್ತರ ನೀಡಿದ ಗಿಲ್ಲಿ, ‘ನಾನು ಕಾವ್ಯದ ಮೇಲೆ ನಂಬಿಕೆ ಇಟ್ಟಿದ್ದೇನೆ ಆದರೆ ಅದನ್ನು ಅವರು ಸೂಚಿಸಿದ್ದಾರೆ. ಟಾಸ್ಕ್ ನಲ್ಲಿ ಕಾವ್ಯಾ ಅವರನ್ನು ಆಡಿಸಬೇಕು ಎಂದು ನಾನು ಮೊದಲೇ ನಿಶ್ಚಯಿಸಿದ್ದೇನೆ, ಕಾವ್ಯಾ ಬಂದು ಯಾರನ್ನು ಆಡಿಸುತ್ತೀಯ ಎಂದಾಗ ನನ್ನ ಜೊತೆಗೆ ಯಾರನ್ನು ಆಡಿಸುತ್ತಿದ್ದೀರಿ ಎಂದು ಕಾವ್ಯ ಕೇಳುತ್ತಿದ್ದಾಳೆ ಎಂದು ನಾನು ಅಂದುಕೊಂಡೆ, ಆಗ ನಾನು ಯೋಚಿಸಿದೆವು ಅದಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಅದನ್ನು ಕಾವ್ಯಾ ತಪ್ಪಾಗಿ ಅರ್ಥ ಮಾಡಿಕೊಂಡಳು. ಮುಂದುವರೆದು, ‘ಕಾವ್ಯಾ ಬಹಳ ವಿಷಯಗಳನ್ನು ಆಳವಾಗಿ ಅರ್ಥ ಮಾಡಿಕೊಂಡು ಬುದ್ಧಿವಾದ ಹೇಳುತ್ತದೆ, ಅದನ್ನು ನಾನು ಗಮನ ಇಟ್ಟು ಕೇಳಿಸಿಕೊಳ್ಳುತ್ತೇನೆ’ ಎಂದು ಹೇಳಿದರು.
ಅಲ್ಲಿಗೆ, ಗಿಲ್ಲಿ, ಕಾವ್ಯದ ಮೇಲೆ ನಂಬಿಕೆ ಇಟ್ಟಿದ್ದ, ಆದರೆ ಅದನ್ನು ಸಲುಗೆ ಎಂದು ಕಾವ್ಯ ತಪ್ಪು ತಿಳಿದುಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 11:02 pm, ಭಾನುವಾರ, 23 ನವೆಂಬರ್ 25