ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ (ಬಿಗ್ ಬಾಸ್ ಕನ್ನಡ) ಮುಂಚೂಣಿಯಲ್ಲಿರುವ ಸ್ಪರ್ಧಿಗಳಲ್ಲಿ ಗಿಲ್ಲಿ ಪ್ರಮುಖರು. ಆರಂಭದ ಕೆಲ ವಾರಗಳು ತಮ್ಮ ಹಾಸ್ಯದಿಂದ ಇಡೀ ಮನೆಯನ್ನು ನಗೆ ಗಡಲಲ್ಲಿ ತೇಲಿಸಿದ ಗಿಲ್ಲಿ ಪ್ರದರ್ಶನಕ್ಕೂ ಭರ್ಜರಿ ಮನರಂಜನೆ ಒದಗಿಸಿದ್ದರು. ಕೆಲವು ಸಂಕೀರ್ಣ ಸಮಯಗಳಲ್ಲಿ ರಕ್ಷಿತಾ ಇನ್ನೂ ಕೆಲವರ ಪರವಾಗಿ ಸ್ಟ್ಯಾಂಡ್ ತೆಗೆದುಕೊಂಡಿದ್ದರು. ಕಿಚ್ಚನಿಂದ ಚಪ್ಪಾಳೆ ಸಹ ತೆಗೆದುಕೊಂಡರು. ಆದರೆ ಬರ ಬರುತ್ತಾ ಗಿಲ್ಲಿ ಬೇರೆ ಹಾದಿಯನ್ನೇ ಹಿಡಿದಂತೆ ಇದ್ದಾರೆ. ಅವರ ಹಾಸ್ಯ, ವ್ಯಂಗ್ಯದ ಕಡೆ, ಹೀಗಳಿಕೆ ಕಡೆ ತಿರುಗಿದಂತಿದೆ. ಇದೀಗ ಗಿಲ್ಲಿಯ ಆತ್ಮೀಯರೇ ಅವರನ್ನು ಟೀಕೆ ಮಾಡಲು ಆರಂಭಿಸಿದ್ದಾರೆ. ಗಿಲ್ಲಿಯ ತಂಡವೂ ಇದರಿಂದ ಸಮಸ್ಯೆಗೆ ಸಿಲುಕಿದೆ.
ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಪ್ರಮುಖವಾಗಿ ಅಶ್ವಿನಿ ಮತ್ತು ಜಾನ್ವಿಯನ್ನು ಎದುರು ಹಾಕಿಕೊಂಡಿದ್ದಾರೆ. ಅವರ ಬಗ್ಗೆ ತಮಾಷೆ ಮಾಡುವುದು, ಕಾಲೆಳೆಯುವುದು ಮಾಡುತ್ತಲೇ ಇರುತ್ತಾರೆ. ಆದರೆ ಈ ವಾರ ಅದನ್ನು ತುಸು ಹೆಚ್ಚೇ ಮಾಡಿಕೊಂಡಿದ್ದಾರೆ. ಯಾವ ಮಟ್ಟಿಗೆಂದರೆ ಸದಾ ಗಿಲ್ಲಿಯ ಬೆಂಬಲಕ್ಕೆ ನಿಲ್ಲುತ್ತಿದ್ದವರೇ ಈ ಬಾರಿ ತುಸು ಅತಿಯಾಯ್ತು. ಅಶ್ವಿನಿ, ಜಾನ್ವಿಯನ್ನು ಮುದುಕರು ಎಂದು ಹಿಯಾಳಿಸಿದಾಗ ಹಿಡಿದು ಸಾಕಷ್ಟು ಋಣಾತ್ಮಕ ಮಾತುಗಳನ್ನು ಈ ವಾರ ಗಿಲ್ಲಿ ಆಡಿದ್ದಾರೆ. ಅದಕ್ಕೆ ಪ್ರತಿಯಾಗಿ ಅಶ್ವಿನಿ, ಜಾನ್ವಿ ಸಹ ಮಾತುಗಳನ್ನಾಡಿದ್ದಾರಾದರೂ, ಗಿಲ್ಲಿಯ ಮಾತುಗಳು ಎಲ್ಲೆ ಮೀರಿವೆ.
ಈ ಬಗ್ಗೆ ಕಾವ್ಯ, ಗಿಲ್ಲಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದರೂ ಗಿಲ್ಲಿಗೆ ಅದು ಅರ್ಥವಾಗಿಲ್ಲ. ಟಾಸ್ಕ್ ನಡೆಯುವಾಗ ಗೆಳೆಯ ಧನುಶ್ ಮತ್ತು ಅಭಿ ಮೇಲೂ ಗಿಲ್ಲಿ ಜಗಳ ಮಾಡಿದರು. ಇಬ್ಬರೂ ಸೇರಿ ಸಮಾಧಾನದಿಂದಲೇ ಗಿಲ್ಲಿಗೆ ಅರ್ಥ ಮಾಡುವ ಪ್ರಯತ್ನ ಮಾಡಿದರು. ಆದರೆ ಅಲ್ಲಿಯೂ ಸಹ ಗಿಲ್ಲಿ ವಿತಂಡವಾದ ಆರಂಭವಾಯಿತು. ಅಲ್ಲಿಗೆ ಅಭಿ ಹಾಗೂ ಧನುಷ್ ಸಹ ತಾಳ್ಮೆ ಕಳೆದುಕೊಂಡರು. ಆ ಬಳಿಕವೂ ಸಹ ಜಾನ್ವಿಗೆ ವಯಸ್ಸೆಷ್ಟು ಎಂದು ಹಿಯಾಳಿಸುವುದು, ಅಶ್ವಿನಿಗೆ ಹಿಯಾಳಿಸುವುದು, ಸುಮ್ಮನಿದ್ದರೂ ಧ್ರುವಂತ್ ಎಂದು ಹಿಯಾಳಿಸುವುದು.
ಇದನ್ನೂ ಓದಿ:ಬಿಗ್ ಬಾಸ್ ಕನ್ನಡ 12: ಫಿನಾಲೆ ಬರಲಿರುವ ಸ್ಪರ್ಧಿಗಳ ಹೆಸರಿಸಿದ ಮಾಜಿ ಸ್ಪರ್ಧಿ ವಿನಯ್
ಕಾವ್ಯ ಹಲವು ಬಾರಿ ಗಿಲ್ಲಿಗೆ ಅವರ ತಪ್ಪನ್ನು ಅರ್ಥ ಮಾಡುವ ಪ್ರಯತ್ನ ಮಾಡಿದರು. ಆದರೆ ಗಿಲ್ಲಿ ಅದೇ ವಿತಂಡವಾದವನ್ನು ಮುಂದುವರೆಸಿದರೇ ವಿನಃ ಕಾವ್ಯ ಹೇಳಿದ್ದನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನ ತೋರಲಿಲ್ಲ. ಗಿಲ್ಲಿಯ ಮಾತುಗಳಿಗೆ ಎದುರು ಮಾತು ಹೇಳಲು ವಿಫಲರಾದ ಅಶ್ವಿನಿ ಸಹಾಯಕರಾಗಿ ಕಣ್ಣೀರು ಹಾಕಿದರು. ಹಾಸ್ಯಕ್ಕೆ ಮಿತಿ ಇರಬೇಕು, ಯಾರನ್ನು ಹೀಗಳೆಯುವುದು, ಅವಮಾನ ಮಾಡುವುದು ಹಾಸ್ಯ ಅಲ್ಲ ಎಂದರು. ಕಾವ್ಯ ಸಹ ಗಿಲ್ಲಿಗೆ ಅದನ್ನೇ ಹೇಳುವ ಪ್ರಯತ್ನ ಮಾಡಿ ವಿಫಲರಾಗಿ, ಕಣ್ಣೀರು ಹಾಕಿದರು. ಈ ವಾರಾಂತ್ಯದಲ್ಲಿ ಸುದೀಪ್ ಆದರೂ ಗಿಲ್ಲಿಗೆ ಹಾಸ್ಯ ಮತ್ತು ಹೀಗಳಿಕೆಯ ನಡುವಿನ ವ್ಯತ್ಯಾಸವನ್ನು ತಿಳಿಸುತ್ತಾರಾ ನೋಡಬೇಕು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ