Headlines

ಸುದೀಪ್ ಆದ ಗಿಲ್ಲಿ, ಗಿಲ್ಲಿ ಆದ ಸುದೀಪ್: ಮನೆಯಲ್ಲಿ ನಗುವಿನ ಅಲೆ

ಸುದೀಪ್ ಆದ ಗಿಲ್ಲಿ, ಗಿಲ್ಲಿ ಆದ ಸುದೀಪ್: ಮನೆಯಲ್ಲಿ ನಗುವಿನ ಅಲೆ


ವೀಕೆಂಡ್ ಪಂಚಾಯಿತಿಯಲ್ಲಿ ಶನಿವಾರದ ಎಪಿಸೋಡ್ ಅನ್ನು ಸುದೀಪ್ (ಸುದೀಪ್) ಬಹಳ ಗಂಭೀರವಾಗಿ ನಡೆಸಿಕೊಡುತ್ತಾರೆ. ವಾರದಲ್ಲಿ ನಡೆದ ವಿಷಯಗಳನ್ನು ವಿಶ್ಲೇಷಿಸುತ್ತಾರೆ. ತಪ್ಪು ಮಾಡಿದವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಶನಿವಾರದ ಎಪಿಸೋಡ್ ನಲ್ಲಿ ಸ್ಪರ್ಧಿಗಳು ಸಹ ಗಂಟು ಹಾಕಿಕೊಂಡೇ ಕೂತಿರುತ್ತಾರೆ. ಆದರೆ ಭಾನುವಾರದ ಎಪಿಸೋಡ್ ಹಾಗಿಲ್ಲ. ಸುದೀಪ್ ಅವರು ನಗುತ್ತಾ, ಎಲ್ಲರನ್ನು ನಗಿಸುತ್ತಾ ನಿರೂಪಣೆ ಮಾಡುತ್ತಾರೆ. ಈ ಭಾನುವಾರದ ಎಪಿಸೋಡ್ ಸಹ ಜೊತೆಗೆ ಆಯ್ತು. ಭಾನುವಾರದಂದು ಬಿಗ್ ಬಾಸ್ ಮನೆಯಲ್ಲಿ ನಗುವಿನ ಅಲೆ ಜೋರಾಗಿತ್ತು.

ಆರಂಭದಲ್ಲಿಯೇ ಈ ವಾರದ ಹಾಸ್ಯಾತ್ಮಕ ದೃಶ್ಯಗಳನ್ನು ಸುದೀಪ್ ತೋರಿಸಿದರು. ಬಳಿಕ ಕಾಕ್ರೂಚ್ ಸುಧಿ ಅವರು, ಸುದೀಪ್ ಅವರನ್ನು ಮಿಮಿಕ್ರಿ ಮಾಡಿ ತೋರಿಸಿದರು. ಸುಧಿ ಅವರು ಸುದೀಪ್ ಅವರ ಅನುಕರಣೆಯ ಪ್ರಯತ್ನ ಮಾಡಿದರು. ಬಳಿಕ ಗಿಲ್ಲಿ ಅವರಿಗೆ ಸುದೀಪ್ ಅವಕಾಶ ಕೊಟ್ಟರು. ಕೂಡಲೇ ಗಿಲ್ಲಿ, ರಘು ಅವರಿಂದ ಚೈನ್ ಹಿಡಿದುಕೊಂಡು ಸುದೀಪ್ ಅವರಂತೆ ನಟಿಸಲು ಆರಂಭಿಸಿದರು. ಧ್ರುವಂತ್, ರಾಶಿಕಾ, ರಿಶಾ ಇತರರನ್ನು ಸುದೀಪ್ ಅವರಂತೆಯೇ ಮಾತನಾಡಿದರು.

ಅಲ್ಲಿ ಸುದೀಪ್ ಅವರು ಕೆಲವು ಪದಗಳನ್ನು ಬಳಸಿ ಮಾತನಾಡಿದ್ದು ಸುದೀಪ್ ಅವರಿಗೆ ನಗು ತರಿಸಿದರು. ಸುದೀಪ್ ಅವರಂತೆಯೇ ಧ್ವನಿ ಏರಿಳಿತ ಮಾಡಿಕೊಂಡಿದ್ದಾರೆ. ಬಳಿಕ ಕಾವ್ಯದ ಬಗ್ಗೆ ಏನಾದರೂ ಹೇಳಿ ಎಂದಾಗ, ಗಿಲ್ಲಿ, ಸುದೀಪ್ ಅವರ ‘ವಾಲಿ’ ಸಿನಿಮಾದ ಹಾಡು ಹಾಡಿದರು. ಬಳಿಕ ಸುದೀಪ್, ಸರಿ ಈಗ ಗಿಲ್ಲಿಗೆ ಏನಾದ್ರೂ ಹೇಳಿ ಎಂದು, ಈಗ ನಾನೇ ಗಿಲ್ಲಿ ಆಗುತ್ತೇನೆ, ನೀನು ಸುದೀಪ್, ನನ್ನನ್ನು ನೋಡಿದೆ ಎಂದು ಹೇಳಿದರು. ಜೊತೆಗೆ, ನಾನು ಬನಿಯನ್ ಅನ್ನು ಹಾಕಿಕೊಂಡು ಬೇಕಾದರೆ ಬರುತ್ತೇನೆ. ಆದರೆ ಸುದೀಪ್ ಅವರು ಗಿಲ್ಲಿ ರೀತಿ ನಟನೆ ಮಾಡಿದ್ದು ಗಿಲ್ಲಿ ಗಾಬರಿ ಆದರು.

ಗಿಲ್ಲಿಯಂತೆ ಬಟ್ಟೆ ಒಗೆಯಬಲ್ಲಿರಾ?

ಕಳೆದ ವಾರ ಗಿಲ್ಲಿಗೆ ಬಟ್ಟೆ ಒಗೆಯುವ ಶಿಕ್ಷೆಯನ್ನು ಸುದೀಪ್ ನೀಡಿದ್ದರು. ಆದರೆ ಮಾಳುಗೆ ಏನೋ ಕಾರಣ ಹೇಳಿ ಅದರಿಂದ ತಪ್ಪಿಸಿಕೊಂಡಿದ್ದರು ಗಿಲ್ಲಿ. ಈ ಬಾರಿ ಯಾರು ಯಾರು ನಿಮ್ಮ ಬಟ್ಟೆಗಳನ್ನು ಗಿಲ್ಲಿ ಕೈಯಿಂದ ಒಗೆಸಿಕೊಳ್ಳಬೇಕು ಎಂಬ ಆಸೆಯಿದೆ ಎಂದು ಕೇಳಿದರು. ಅದಕ್ಕೆ ಹಲವು ಕೈ ಎತ್ತಿದರು. ಆದರೆ ಕಾವ್ಯ ಕೈ ಎತ್ತಲಿಲ್ಲ. ಏಕೆಂದು ಕೇಳಿದಾಗ, ಗಿಲ್ಲಿ ಬಟ್ಟೆ ಒಗೆಯುವ ರೀತಿ ನೋಡಿದರೆ ಯಾರೂ ಸಹ ಅವನಿಂದ ಬಟ್ಟೆ ಒಗಿಸಿಕೊಳ್ಳಲಾರರು.

ಬಳಿಕ ಸುದೀಪ್ ಅವರು ವಿಡಿಯೋ ಸಹ ಮಾಡಿದರು. ಅದರಲ್ಲಿ ಗಿಲ್ಲಿ, ತನ್ನ ಬಟ್ಟೆಗಳನ್ನು ಬಕೀಟಿಗೆ ಹಾಕಿ ಅದಕ್ಕೆ ನೀರು, ಬಟ್ಟೆ ಒಗೆಯುವ ಪೌಡರ್ ಹಾಕಿ, ಕುಂಬಾರರು ಮಣ್ಣು ತುಳಿವಂತೆ ಕಸ ಕಸನೆ ಕಾಲಿನಿಂದ ಬಟ್ಟೆಗಳನ್ನು ತುಳಿಯಲು ಆರಂಭಿಸಿದರು. ಕಾವ್ಯಾ, ‘ಇದೆಂಥಹಾ ಬಟ್ಟೆ ಒಗೆಯುವ ರೀತಿ’ ಎಂದಿದ್ದಕ್ಕೆ, ವಾಷಿಂಗ್ ಮಷೀನ್‌ನಲ್ಲೂ ಇದೇ ತಂತ್ರಜ್ಞಾನದಲ್ಲಿ ಬಟ್ಟೆಗಳನ್ನು ತೊಳೆಯುವುದು ಎಂದು ಹೇಳಿದರು. ಆ ವಿಡಿಯೋ ನೋಡಿದ ಬಳಿಕ ಮನೆಯ ಯಾವ ಸದಸ್ಯರೂ ಸಹ ಗಿಲ್ಲಿಯಿಂದ ತಾವು ಬಟ್ಟೆಗಳನ್ನು ಒಗೆಸಿಕೊಳ್ಳುವುದಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *