ಜಾನ್ವಿ ಮಾತಿಗೆ ಟ್ರ್ಯಾಪ್ ಆದ ರಕ್ಷಿತಾ ಶೆಟ್ಟಿ; ಗಿಲ್ಲಿ ವಿರುದ್ಧ ಟೊಂಕ ಕಟ್ಟಿದ ವಂಶದ ಕುಡಿ

ಜಾನ್ವಿ ಮಾತಿಗೆ ಟ್ರ್ಯಾಪ್ ಆದ ರಕ್ಷಿತಾ ಶೆಟ್ಟಿ; ಗಿಲ್ಲಿ ವಿರುದ್ಧ ಟೊಂಕ ಕಟ್ಟಿದ ವಂಶದ ಕುಡಿ


ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರು ಅದ್ಭುತವಾಗಿ ಆಡುತ್ತಿದ್ದಾರೆ. ಕಳೆದ ವಾರ ಅವರಿಗೆ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿತು. ಅವರಲ್ಲಿ ಕಳೆದ ವಾರ ಸಾಕಷ್ಟು ಬದಲಾವಣೆಗಳು ಇದ್ದವು. ಈ ಕಾರಣದಿಂದಲೇ ಅವರಿಗೆ ಮೆಚ್ಚುಗೆ ಸಿಕ್ಕಿದೆ. ಈಗ ಜಾನ್ವಿ ಮಾತು ಕೇಳಿ ರಕ್ಷಿತಾ ಟ್ರ್ಯಾಪ್ ಆಗಿದ್ದಾರೆ. ಅವರು ಗಿಲ್ಲಿಯನ್ನು ನಾಮಿನೇಟ್ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಚರ್ಚೆ ನಡೆಯುತ್ತಿತ್ತು. ಈ ಚರ್ಚೆಯಲ್ಲಿ ಗಿಲ್ಲಿ ಆ್ಯಂಕರ್ ಆಗುವ ಆಸೆ. ‘ಸವಿ ರುಚಿ’ ಕಾರ್ಯಕ್ರಮಕ್ಕೆ ಆ್ಯಂಕರ್ ಆಗಬೇಕು ಎಂದು ಗಿಲ್ಲಿ ಹೇಳಿದರು. ಆಗ ಕಾವ್ಯಾ ಅವರು, ಆ ಶೋಗೆ ಆ್ಯಂಕರ್ ಆಗೋದು ಬೇಡ ಎಂದರು. ‘ಆ ಶೋಗೆ ಟಿಆರ್‌ಪಿ ಕಡಿಮೆ ಇದೆಯೇ’ ಎಂದು ಗಿಲ್ಲಿ ಕೇಳಿದರು. ‘ಕುಕಿಂಗ್ ಶೋ ಬೇಡ ಅಷ್ಟೇ’ ಎಂದು ಕಾವ್ಯ ವಿವರಿಸಿದರು.

ಆಗ ಜಾನ್ವಿ ಸಿಕ್ಕಿದ್ದೇ ಅವಕಾಶ ಎಂದು, ‘ಒಂದು ಶೋನ ಗಿಲ್ಲಿ ಕೆಳಗೆ ಹಾಕಿ ಮಾತಾಡ್ತಾನೆ’ ಎಂದು ಬಿಂಬಿಸಲು ಬಂದರು. ‘ನಿನಗೇನು ಮೊದಲಿಗೇ ಅನುಬಂಧ ಅವಾರ್ಡ್ಸ್ ನಲ್ಲಿ ಅವಕಾಶ ಕೊಡಬೇಕೆ’ ಎಂದು ಜಾನ್ವಿ ಪ್ರಶ್ನೆ ಮಾಡಿದರು. ನಂತರ ನಾಮನಿರ್ದೇಶನಕ್ಕೆ ಇದೇ ಕಾರಣ ಕೊಟ್ಟರು. ಇದನ್ನು ರಕ್ಷಿತಾ ಯಾವ ರೀತಿ ಅರ್ಥ ಮಾಡಿಕೊಂಡರೋ ಗೊತ್ತಿಲ್ಲ, ಗಿಲ್ಲಿಯನ್ನು ನಾಮಿನೇಟ್ ಮಾಡಿದರು.

‘ಗಿಲ್ಲಿ ಅವರು ಆ್ಯಂಕರ್‌ಗಳಿಗೆ ಅವಮಾನ ಮಾಡಿದ್ದಾರೆ ಅನ್ನೋದು ಜಾನ್ವಿ ಹೇಳಿದ ಮಾತಿನಿಂದ ಗೊತ್ತಾಯ್ತು. ಹೀಗಾಗಿ, ನಾನು ಅವರನ್ನು ನಾಮಿನೇಟ್ ಮಾಡಿದ್ದೇನೆ ಎಂದು ಹೇಳಿದರು. ಇದನ್ನು ಕೇಳಿ ಅನೇಕರಿಗೆ ಶಾಕ್ ಆಗಿದೆ. ಗಿಲ್ಲಿಗೂ ಇದನ್ನು ಅರಗಿಸಿಕೊಳ್ಳೋದು ಕಷ್ಟ ಆಯಿತು.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬಂದ ಮಾಜಿ ಸ್ಪರ್ಧಿಗಳು; ನಡೀತಿದೆ ದೊಡ್ಡ ಪಾರ್ಟಿ

‘ನಾನು ಜಾನ್ವಿ ಕೆಟ್ಟ ಆ್ಯಂಕರ್ ಎಂದು ಹೇಳಿಲ್ಲ. ಜಾನ್ವಿ ಹೇಳಿದಳು ಎಂದು ನೀನು ಕೇಳಿಬಿಟ್ಟೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ ಎಂದು ಸುದೀಪ್ ಹೇಳಿದ್ದಾರೆ. ಅದನ್ನು ನೀನು ಮಾಡಬೇಕಿತ್ತು’ ಎಂದು ಗಿಲ್ಲಿ ಹೇಳಿದರು. ವೀಕೆಂಡ್‌ನಲ್ಲಿ ಈ ವಿಷಯ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 9:03 am, ಮಂಗಳವಾರ, 25 ನವೆಂಬರ್ 25





Source link

Leave a Reply

Your email address will not be published. Required fields are marked *