ಬಿಗ್ ಬಾಸ್ (ಬಿಗ್ ಬಾಸ್) ಮನೆಯಲ್ಲಿ ನಿಜವಾದ ಪ್ರೀತಿ ಹುಟ್ಟೋದು ತುಂಬಾನೇ ಅಪರೂಪ. ಎಲ್ಲೋ ಅಲ್ಲೊಂದು, ಇಲ್ಲೊಂದು ನಿಜವಾದ ಪ್ರೀತಿ ಹುಟ್ಟಿದ ಉದಾಹರಣೆ ಇದೆ. ಆದರೆ, ಇಲ್ಲಿಯವರೆಗೆ ಪ್ರೀತಿಯ ನಾಟಕ ಆಡುತ್ತಾರೆ. ರಾಶಿಕಾ ಶೆಟ್ಟಿ ಹಾಗೂ ಸೂರಜ್ ಸಿಂಗ್ ಅವರನ್ನು ನೋಡಿದಾಗ ಇದೇ ರೀತಿ ಅನಿಸುತ್ತದೆ. ಇಬ್ಬರೂ ಪ್ರೀತಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಆದರೆ, ಇದರಲ್ಲಿ ನಾಟಕೀಯತೆ ಹೆಚ್ಚಿದೆ.
ಬಿಗ್ ಬಾಸ್ ಮನೆಗೆ ಹೋದ ದಿನದಿಂದಲೂ ರಾಶಿಕಾ ಆಯಕ್ಟಿವ್ ಆಗಿದ್ದು ಕಡಿಮೆ. ಅವರು ಒಂದು ಲವ್ಸ್ಟೋರಿ ಕ್ರಿಯೇಟ್ ಮಾಡಲು ಆಸಕ್ತಿ ತೋರಿಸಿದರು. ಯಾವಾಗ ಸೂರಜ್ ಅವರು ಬಿಗ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರೋ ಆಗಲೇ ರಾಶಿಕಾ ಆಯಕ್ಟೀವ್ ಆದರು. ಅದರಲ್ಲೂ ಸೂರಜ್ ಅವರು ಬರುತ್ತಿದ್ದಂತೆ, ‘ರಾಶಿಕಾ ಕ್ಯೂಟ್ ಆಗಿ ಕಾಣಿಸ್ತಾರೆ’ ಎಂದು ರೋಸ್ ಕೊಟ್ಟರು. ಆಗ ರಾಶಿಕಾ ಮೊಗದಲ್ಲಿ ನಗು ಮೂಡಿತು.
ಇದಾದ ಬೆನ್ನಲ್ಲೇ ಇವರ ಪ್ರೇಮ ಗೀತೆ ಆರಂಭವಾಗಿದೆ. ಅಷ್ಟು ಬೇಗ ಅವರ ಪ್ರೀತಿ ಹುಟ್ಟಲು ಸಾಧ್ಯ ಎಂಬ ಪ್ರಶ್ನೆ ಅನೇಕರದ್ದು. ಬಿಗ್ ಬಾಸ್ ಮನೆಯಲ್ಲೂ ಇದೇ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ರಾಶಿಕಾ, ‘ಪ್ರೀತಿ ಎಲ್ಲಿ, ಹೇಗೆ ಹುಟ್ಟುತ್ತದೆ ಎಂದು ಹೇಳೋಕೆ ಆಗಲ್ಲ’. ಇದನ್ನು ಕೇಳಿ ವೀಕ್ಷಕರಿಗೆ ಜಿಗುಪ್ಸೆ ಬಂದಿದೆ.
ಇದನ್ನೂ ಓದಿ
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ರಘು ವಿರುದ್ಧ ಕೇಳಿ ಬಂತು ದೊಡ್ಡ ಆರೋಪ
ಲವ್ ಸ್ಟೋರಿಗಳು ನಿಜವಾಗಿದ್ದಾಗ ಅದನ್ನು ನೋಡೋಕೂ ಖುಷಿ ಎನಿಸುತ್ತದೆ. ದಿವ್ಯಾ ಊರುಡುಗ ಹಾಗೂ ಅರವಿಂದ್ ಕೆಪಿ ಮಧ್ಯೆ ಇದ್ದ ಬಾಂಧವ್ಯ ಎಲ್ಲಿಯೂ ನಾಟಕೀಯ ಎನಿಸಲಿಲ್ಲ. ಈ ಕಾರಣದಿಂದಲೇ ಈ ಜೋಡಿ ಇಷ್ಟವಾಗುತ್ತಿತ್ತು. ಆದರೆ, ಸೂರಜ್ ಹಾಗೂ ರಾಶಿಕಾ ಲವ್ಸ್ಟೋರಿ ನೋಡಿದ ಅನೇಕರು ನಗಲು ಆಗದೆ, ಅಳಲೂ ಆಗದೆ ಒದ್ದಾಡುತ್ತಿದ್ದಾರೆ. ಈ ವಿಚಾರದಲ್ಲಿ ಸುದೀಪ್ ಸೂಚನೆ ನೀಡಿದ್ದಾರೆ. ಆದರೂ ರಾಶಿಕಾ ಬದಲಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 10:46 am, ಮಂಗಳವಾರ, 28 ಅಕ್ಟೋಬರ್ 25