Headlines

BBK 12: ಗಿಲ್ಲಿ ನಟನ ಜೊತೆ ಅಮಾನವೀಯವಾಗಿ ನಡ್ಕೊಂಡ ರಘು; ಪ್ರತ್ಯಕ್ಷಸಾಕ್ಷಿ ಅಭಿಷೇಕ್‌ ಶ್ರೀಕಾಂತ್‌ ಏನಂದ್ರು? | Bigg Boss Kannada Season 12 Abhishek Raghu Did Not Give Chapati To Gilli Nata

BBK 12: ಗಿಲ್ಲಿ ನಟನ ಜೊತೆ ಅಮಾನವೀಯವಾಗಿ ನಡ್ಕೊಂಡ ರಘು; ಪ್ರತ್ಯಕ್ಷಸಾಕ್ಷಿ ಅಭಿಷೇಕ್‌ ಶ್ರೀಕಾಂತ್‌ ಏನಂದ್ರು? | Bigg Boss Kannada Season 12 Abhishek Raghu Did Not Give Chapati To Gilli Nata


15

ಪ್ಲೇಟ್‌ನಿಂದ ಚಪಾತಿ ತಗೊಂಡು ತಿಂತಾರೆ

Image Credit : colors kannada

ಪ್ಲೇಟ್‌ನಿಂದ ಚಪಾತಿ ತಗೊಂಡು ತಿಂತಾರೆ

ಈ ವಾರದಲ್ಲಿ ರಘು ಅವರು ಕೂತ್ಕೊಂಡು ಚಪಾತಿ ತಿನ್ನುತ್ತಾರೆ. ಆದರೆ ಗಿಲ್ಲಿ ನಟ ಅವರು ಬಂದು, ನನಗೆ ಕೊಡು ಸ್ವಲ್ಪ ಅಂತ ಹೇಳುತ್ತಾರೆ. ಆದರೂ ರಘು ಮಾತ್ರ ಸ್ವಲ್ಪವೂ ಚಪಾತಿ ಕೊಡೋದಿಲ್ಲ ಇಲ್ಲ. ಆದರೆ ರಾಶಿಕಾ ಚಪಾತಿ ಕೊಡು ಎಂದಾಗ, ರಘು ಅವರು ಪ್ಲೇಟ್‌ನಿಂದ ಚಪಾತಿ ತಗೊಂಡು ತಿಂತಾರೆ. ಈ ವಿಷಯವು ರಘು ಅವರಿಗೆ ಸ್ವಲ್ಪ ನೆಗೆಟಿವ್ ಆಗಿದೆ ಎಂದು ಪತ್ರಕರ್ತರು ಪ್ರಶ್ನೆ ಮಾಡಿದ್ದಾರೆ.

25

ಗಿಲ್ಲಿಯಿಂದಲೇ ರಘು

Image Credit : colors kannada

ಗಿಲ್ಲಿಯಿಂದಲೇ ರಘು

ಈ ದೃಶ್ಯ ನೋಡಿ ಅನೇಕರಿಗೆ ಬೇಸರ ಆಗಿದೆ. ಹೀಗಾಗಿ ವೀಕ್ಷಕರು, “ಮಾನವೀಯತೆ ಇಲ್ಲ. ಶತ್ರುಗು ಕೂಡ ಈ ರೀತಿ ಮಾಡಬಾರದು. ಗಿಲ್ಲಿಯಿಂದಲೇ ರಘು” ಎಂದೆಲ್ಲ ನೆಗೆಟಿವ್‌ ಕಾಮೆಂಟ್‌ಗಳು ಬಂದಿದೆ. ನೀವು ನೋಡಿದಂತೆ ಅಲ್ಲಿ ಏನಾಗಿದೆ ಎಂದು ಪ್ರಶ್ನೆ ಮಾಡಲಾಗಿದೆ.

35

ಚಪಾತಿ ಕೇಳಿದಾಗ ಕೊಟ್ಟಿಲ್ಲ

Image Credit : colors kannada

ಚಪಾತಿ ಕೇಳಿದಾಗ ಕೊಟ್ಟಿಲ್ಲ

ಪದೇ ಪದೇ ರಘು ಬಳಿ ಚಪಾತಿ ಕೇಳಿದಾಗ ಕೊಟ್ಟಿಲ್ಲ, ಆಮೇಲೆ ಬೇಸರಗೊಂಡ ಗಿಲ್ಲಿ ಅಲ್ಲಿಂದ ಹೊರನಡೆದಿದ್ದಾರೆ. ಅಂದಹಾಗೆ ರಘು ಕೊಟ್ಟಿಲ್ಲ ಎಂದು ಗಿಲ್ಲಿ ನಟ ಅವರು ರಕ್ಷಿತಾ ಬಳಿ ಚಪಾತಿ ಮಾಡಿಕೊಡು ಎಂದು ಹೇಳಿದ್ದರು. ಈ ವಿಡಿಯೋ ಅನೇಕರ ಮನಸ್ಸನ್ನು ಕಲಕಿತ್ತು.

45

ಜಗಳ ಆಡಿಕೊಂಡು, ಒಂದಾಗಿರುತ್ತಾರೆ

Image Credit : colors kannada

ಜಗಳ ಆಡಿಕೊಂಡು, ಒಂದಾಗಿರುತ್ತಾರೆ

“ರಘು ಹಾಗೂ ಗಿಲ್ಲಿ ನಟ ಅವರು ಹಾವು ಮುಂಗುಸಿ ಇದ್ದಂತೆ. ಯಾವಾಗಲೂ ಜಗಳ ಆಡಿಕೊಂಡು, ಮತ್ತೆ ಒಂದಾಗಿರುತ್ತಾರೆ. ಗಿಲ್ಲಿ ನಟ ಎಲ್ಲರ ಜೊತೆ ಚೆನ್ನಾಗಿರುತ್ತಾನೆ. ಅವನು ಎಲ್ಲರ ಬಳಿ ತಿಂಡಿ ಕೇಳುತ್ತಾನೆ” ಎಂದು ಅಭಿಷೇಕ್‌ ಹೇಳಿದ್ದಾರೆ.

55

ಗಿಲ್ಲಿ ನಟನಿಗೆ ತಿಂಡಿಯನ್ನು ಕೊಟ್ಟಿದ್ದಾರೆ

Image Credit : colors kannada

ಗಿಲ್ಲಿ ನಟನಿಗೆ ತಿಂಡಿಯನ್ನು ಕೊಟ್ಟಿದ್ದಾರೆ

“ಯಾವಾಗಲೂ ಎಲ್ಲರೂ ಗಿಲ್ಲಿ ನಟನಿಗೆ ತಿಂಡಿಯನ್ನು ಕೊಟ್ಟಿದ್ದಾರೆ. ಅಣ್ಣ ಒಂದು ಕೊಡೋಣ. ಅಣ್ಣ ಒಂದು ಕೊಡು ಅಣ್ಣ ಕೊಡು ಅಂತ ಹೇಳಿರುತ್ತಾನೆ. ಆದರೆ ಒಂದು ಸಲ ಎರಡು ಸಲ ಓಕೆ, ಸಾವಿರ ಸಲ ಕೇಳಿರಬಹುದು, ಆಮೇಲೆ ರಘು ಅವರು ಕೊಡಲ್ಲ ಎಂದಿರಬಹುದು ಅಷ್ಟೇ, ಬೇರೆ ಏನೂ ಆಗಿರಲ್ಲ” ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *