Headlines

BBK 12: ಕಚಡಾ,T ಗಾಂಚಾಲಿ, ನೀನು ಗಂಡಸಾಗಿದ್ರೆ! ಏನ್ರೀ ಇದು ಥರ್ಡ್‌ರೇಟೆಡ್‌ ಭಾಷೆ? Ashwini Gowda-Rajath ಜಗಳ | Bigg Boss Kannada Season 12 Ashwini Gowda And Rajath Verbal Fight

BBK 12: ಕಚಡಾ,T ಗಾಂಚಾಲಿ, ನೀನು ಗಂಡಸಾಗಿದ್ರೆ! ಏನ್ರೀ ಇದು ಥರ್ಡ್‌ರೇಟೆಡ್‌ ಭಾಷೆ? Ashwini Gowda-Rajath ಜಗಳ | Bigg Boss Kannada Season 12 Ashwini Gowda And Rajath Verbal Fight


15

ಬಿಗ್‌ ಬಾಸ್‌ ಮನೆಗೆ ವಿಲನ್‌ ಎಂಟ್ರಿ

Image Credit : colors kannada

ಬಿಗ್‌ ಬಾಸ್‌ ಮನೆಗೆ ವಿಲನ್‌ ಎಂಟ್ರಿ

ಸದ್ಯ ಬಿಗ್‌ ಬಾಸ್‌ ಮನೆಗೆ ವಿಲನ್‌ ಎಂಟ್ರಿ ಆಗಿದೆ. ವಿಲನ್‌ ಅವತಾರಕ್ಕೆ, ಅಬ್ಬರಕ್ಕೆ ಸ್ಪರ್ಧಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಇದರ ಮಧ್ಯೆ ಸ್ಪರ್ಧಿಗಳ ನಾಮಿನೇಶನ್‌ ಟಾಸ್ಕ್‌ ಕೂಡ ನಡೆಯುತ್ತಿದೆ. ನಾಮಿನೇಶನ್‌ ವಿಚಾರ ಬಂದಾಗ, ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ. ಕಾವ್ಯ ಶೈವ ನಾಮಿನೇಟ್‌ ಮಾಡಿದ್ದಕ್ಕೆ ರಜತ್‌ ಸಿಟ್ಟಾಗಿದ್ದರು.

25

T ಗಾಂಚಾಲಿ ಎಂದಾಗ ಯಾಕೆ ಮಾತನಾಡಲಿಲ್ಲ?

Image Credit : colors kannada

T ಗಾಂಚಾಲಿ ಎಂದಾಗ ಯಾಕೆ ಮಾತನಾಡಲಿಲ್ಲ?

“ಈಗ ರಜತ್‌ ಮಾತಿಗೆ ಅಶ್ವಿನಿ ಗೌಡ ಅವರು ಕೂಗಾಡಿದ್ದಾರೆ. ಧ್ರುವಂತ್‌ ಅವರು t ಗಾಂಚಾಲಿ ಎಂದಾಗ ಅಶ್ವಿನಿ ಗೌಡ ಅವರು ಏನೂ ಮಾತನಾಡಲಿಲ್ಲ, ಆದರೆ ರ‍ಘು ಅವರು ಒಂದು ಮಾತು ಹೇಳಿದಾಗ, ಹಾಗೆ ಹೇಳಬಾರದು, ಹೀಗೆ ಹೇಳಬಾರದು ಎಂದರು” ಎಂದಿದ್ದಾರೆ ರಜತ್.‌

35

ಅಶ್ವಿನಿ ಮನೆಗೆ ಹೋಗೋದು ಒಳ್ಳೆಯದು

Image Credit : colors kannada

ಅಶ್ವಿನಿ ಮನೆಗೆ ಹೋಗೋದು ಒಳ್ಳೆಯದು

“ನಾವು ಅಶ್ವಿನಿ ಗೌಡ ಅವರ ಜೊತೆ ಫೈಟ್‌ ಮಾಡೋಕೆ ಆಗೋದಿಲ್ಲ. ಹೀಗಾಗಿ ಅವನು ಮನೆಗೆ ಹೋಗೋದು ಒಳ್ಳೆಯದು” ಎಂದು ರಜತ್‌ ಹೇಳಿದ್ದಾರೆ. ಆಗ ಅಶ್ವಿನಿ ಅವರು, “ನಿಮ್ಮಷ್ಟು ಥರ್ಡ್‌ರೇಟೆಡ್‌ ಮಾತುಗಳನ್ನು ಯಾರೂ ಬಳಸಿಲ್ಲ. ನಾವು ಗಂಡಸರ ಜೊತೆ ಗುದ್ದಾಡ್ತೀವಿ ಎಂದಿರಿ. ನೀವು ಬಂದು ಕೇಳಬೇಕಿತ್ತು. ನೀವು ಗಂಡ್ಸಲ್ವಾ?” ಎಂದು ಹೇಳಿದ್ದಾರೆ.

45

 ಸ್ವಿಮ್ಮಿಂಗ್‌ ಪೂಲ್‌ಗೆ ನೂಕಿದ ರಜತ್

Image Credit : colors kannada

ಸ್ವಿಮ್ಮಿಂಗ್‌ ಪೂಲ್‌ಗೆ ನೂಕಿದ ರಜತ್

ಅಶ್ವಿನಿ ಗೌಡ ಮಾತು ಕೇಳಿದ ಬಳಿಕ ರಜತ್‌ ಅವರನ್ನು ಸ್ವಿಮ್ಮಿಂಗ್‌ ಪೂಲ್‌ಗೆ ನೂಕಿದ್ದಾರೆ. ಸ್ವಿಮ್ಮಿಂಗ್‌ ಪೂಲ್‌ಗೆ ನೂಕೋದು ನಾಮಿನೇಶನ್‌ ಭಾಗವಾಗಿತ್ತು. ಅಶ್ವಿನಿ ಮಾತು ಇನ್ನು ಇತ್ತು, ಅದನ್ನು ಕೇಳಿಸಿಕೊಳ್ಳದೆ ನೂಕಿದ್ದಾರೆ ಎಂದು ಅಶ್ವಿನಿ ಗೌಡ ಅವರು ಇನ್ನಷ್ಟು ಸಿಟ್ಟಾಗಿದ್ದಾರೆ.

55

ಕಚಡಾ‌ ಎಂದು ಬೈಕೊಂಡ್ರು

Image Credit : colors kannada

ಕಚಡಾ‌ ಎಂದು ಬೈಕೊಂಡ್ರು

ಅಶ್ವಿನಿ ಗೌಡ ಅವರು ಸ್ವಿಮ್ಮಿಂಗ್‌ ಪೂಲ್‌ಗೆ ಬೀಳುತ್ತಿದ್ದಂತೆ “ಕಚಡಾ” ಎಂದಿದ್ದಾರೆ. ಆಗ ರಜತ್‌ ಅವರು, “ನೀನು ನನಗೆ ಏನು ಹೇಳೋದು, ಕಚಡಾ” ಎಂದಿದ್ದಾರೆ. ಒಟ್ಟಿನಲ್ಲಿ ಸೈಲೆಂಟ್‌ ಆಗಿದ್ದ ಅಶ್ವಿನಿ ಗೌಡ ಈಗ ಜಗಳ ಆಡುತ್ತಿದ್ದಾರೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *