Bigg Boss ನಿಯಮಕ್ಕೆ ಕ್ಯಾರೆ ಎನ್ನಲಿಲ್ಲ, ಅತಿರೇಕ ಮಾಡಿದ ರಕ್ಷಿತಾ ಶೆಟ್ಟಿ; ರೊಚ್ಚಿಗೆದ್ದ ವೀಕ್ಷಕರು! | Bigg Boss Kannada Season 12 Audience Angry On Rakshita Shetty Captaincy Task

Bigg Boss ನಿಯಮಕ್ಕೆ ಕ್ಯಾರೆ ಎನ್ನಲಿಲ್ಲ, ಅತಿರೇಕ ಮಾಡಿದ ರಕ್ಷಿತಾ ಶೆಟ್ಟಿ; ರೊಚ್ಚಿಗೆದ್ದ ವೀಕ್ಷಕರು! | Bigg Boss Kannada Season 12 Audience Angry On Rakshita Shetty Captaincy Task


16

ಬಾಲ್‌ ಎತ್ತಲು ಕೈಬೆರಳು ಬಳಸುವಂತಿಲ್ಲ

Image Credit : colors kannada

ಬಾಲ್‌ ಎತ್ತಲು ಕೈಬೆರಳು ಬಳಸುವಂತಿಲ್ಲ

ಕಲರ್ಸ್‌ ಕನ್ನಡವು ಹೊಸ ಪ್ರೋಮೋ ರಿಲೀಸ್‌ ಮಾಡಿದೆ. ಅದರಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ ನೀಡಲಾಗಿದೆ. ಸ್ವಿಮ್ಮಿಂಗ್‌ ಪೂಲ್‌ನಲ್ಲಿದ್ದ ಬಾಲ್‌ನ್ನು ಇಬ್ಬರು ಕೋಲಿನಿಂದ ತಗೊಂಡು, ಬಾಕ್ಸ್‌ನೊಳಗಡೆ ಹಾಕಬೇಕಿತ್ತು. ಆದರೆ ಯಾವುದೇ ಕಾರಣಕ್ಕೂ ಬಾಲ್‌ ಎತ್ತಲು ಕೈಬೆರಳು ಬಳಸಿ, ಮುಟ್ಟುವ ಹಾಗಿಲ್ಲ.

26

ನಿಯಮ ಪಾಲಿಸದ ರಕ್ಷಿತಾ ಶೆಟ್ಟಿ

Image Credit : colors kannada

ನಿಯಮ ಪಾಲಿಸದ ರಕ್ಷಿತಾ ಶೆಟ್ಟಿ

ಮಾಳು ನಿಪನಾಳ, ರಕ್ಷಿತಾ ಶೆಟ್ಟಿ ಜೊತೆಯಾಗಿದ್ದರು. ಆ ವೇಳೆ ರಕ್ಷಿತಾ, ಮಾಳು ಅವರು ಸ್ವಿಮ್ಮಿಂಗ್‌ ಪೂಲ್‌ನಲ್ಲಿದ್ದ ಬಾಲ್‌ ಎತ್ತಿಕೊಂಡು, ಬರುವಾಗ ಕೈ ಬೆರಳು ಬಳಸಿಕೊಂಡಿದ್ದರು. ಇದು ಉಸ್ತುವಾರಿಯಾಗಿದ್ದ ಧ್ರುವಂತ್‌ ಕಣ್ಣಿಗೆ ಬಿದ್ದಿದೆ. ಅದನ್ನು ಅವರು ಹೇಳಿದಾಗ ರಕ್ಷಿತಾ ಪಾಲಿಸಲೇ ಇಲ್ಲ.

36

ಧ್ರುವಂತ್‌ಗೆ ಮೊದಲೇ ಗೊತ್ತಿತ್ತು

Image Credit : colors kannada

ಧ್ರುವಂತ್‌ಗೆ ಮೊದಲೇ ಗೊತ್ತಿತ್ತು

ರಕ್ಷಿತಾಗೆ ಕನ್ನಡ ಬಂದರೂ ಸರಿಯಾಗಿ ಮಾತನಾಡೋದಿಲ್ಲ, ಅವಳದ್ದು ನಾಟಕ ಎಂದು ಧ್ರುವಂತ್‌ ಹೇಳಿದ್ದರು. ಧ್ರುವಂತ್‌ಗೆ ಮೊದಲೇ ಅರ್ಥ ಆಗಿತ್ತು, ನಮಗೆ ಈಗ ಗೊತ್ತಾಗಿದೆ ಎಂದು ಹೊರಗಡೆ ಬಂದಿರೋ ಜಾಹ್ನವಿ ಹೇಳಿದ್ದಾರೆ. ಅಂದಹಾಗೆ ಸೋಶಿಯಲ್‌ ಮೀಡಿಯಾದಲ್ಲಿ ಕೂಡ ಇದೇ ರೀತಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

46

ವ್ಯಂಗ್ಯ ಮಾಡಿದ ರಕ್ಷಿತಾ ಶೆಟ್ಟಿ

Image Credit : colors kannada

ವ್ಯಂಗ್ಯ ಮಾಡಿದ ರಕ್ಷಿತಾ ಶೆಟ್ಟಿ

ರಕ್ಷಿತಾ ಶೆಟ್ಟಿ ಅವರು ನಿಯಮ ಉಲ್ಲಂಘನೆ ಮಾಡಿದ್ದಾರೆ, ಧ್ರುವಂತ್‌ ಮಾತಿಗೆ ತಿರುಗಿ ಬಿದ್ದಿದ್ದಾರೆ. ಇದರ ಜೊತೆಗೆ ಉಳಿದವರು ಏನೂ ಹೇಳಿದರೂ ಕೇಳದೆ, ವ್ಯಂಗ್ಯ ಮಾಡಿದ್ದಾರೆ. ಆಮೇಲೆ ಸ್ವಿಮ್ಮಿಂಗ್‌ ಪೂಲ್‌ನಲ್ಲಿದ್ದ ನೀರಿನಲ್ಲಿ ಕೋಲಿನಿಂದ ಹೊಡೆದಿದ್ದಾರೆ. ನಿಲ್ಲಿಸು ಎಂದರೂ ಕೂಡ ಅವರು ಕೇಳಲಿಲ್ಲ.

56

ವೀಕ್ಷಕರು ಏನು ಹೇಳಿದರು?

Image Credit : colors kannada

ವೀಕ್ಷಕರು ಏನು ಹೇಳಿದರು?

ಕಲರ್ಸ್‌ ಕನ್ನಡದ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ವೀಕ್ಷಕರು ಕಾಮೆಂಟ್‌ ಮಾಡಿದ್ದು, ರಕ್ಷಿತಾ ಶೆಟ್ಟಿಯದ್ದು ತುಂಬ ಓವರ್ ಆಯ್ತು. ಕಿಚ್ಚನ ಚಪ್ಪಾಳೆ ಸಿಕ್ಕಿದಮೇಲೆ ಇವಳೇ ಯಾವಾಗಲೂ ಹೋಗಿ ನಿದ್ದೆ ಮಾಡ್ತಾಳೆ. ಗಿಲ್ಲಿಗೆ ಮನೆ ಕೆಲಸ ಮಾಡಲ್ಲ ಅಂತ ಡಬ್ಬ ರೀಸನ್ ಕೊಡ್ತಾಳೆ. ರಕ್ಷಿತಾ ಮೊದಲು ಬಂದು ಹೊರ ಕೂರಿಸಿದಾಗ ತುಂಬಾನೆ ಬೇಜಾರ್ ಆಗಿತ್ತು. ಒಂದೇ ದಿನದಲ್ಲಿ ಆಕೆಯ ಮುಗ್ಧತೆ ಮಾತು ಮನಸ್ಸಿಗೆ ಇಷ್ಟ ಆಗಿತ್ತು. ಆದರೆ ಆಕೆ ಮುಖವಾಡ ಹಾಕಿಕೊಂಡು, ಲೆಕ್ಕಾಚಾರ ಇಟ್ಟು ಆಡೋಳು ಅಂತ ಧ್ರುವಂತ್ ಹೇಳಿದಾಗಲೂ ಕೂಡ ನಂಬಿರಲಿಲ್ಲ. ಈಗ ರಕ್ಷಿತಾಗಿಂತ ಅಶ್ವಿನಿ ಅವರು ಬೆಟರ್ ಅನಿಸ್ತಾರೆ ಎಂದು ಅರ್ಥ ಆಗಿದೆ ಎಂದಿದ್ದಾರೆ. 

66

ಓವರ್‌ ಆಗಿ ಆಡ್ತಿದ್ದಾರೆ ಎಂದ ವೀಕ್ಷಕರು

Image Credit : colors kannada

ಓವರ್‌ ಆಗಿ ಆಡ್ತಿದ್ದಾರೆ ಎಂದ ವೀಕ್ಷಕರು

ರಕ್ಷಿತಾ ಬರ್ತಾ ಬರ್ತಾ ತುಂಬ ಓವರ್ ಆಗಿ ಆಡ್ತಿದಾಳೆ

ತೀರ್ಪುಗರಿಕೆ ಅಂದರೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಆಗಬಾರದು. ಕೊಟ್ಟಿರೋ ನಿಯಮನುಸಾರ ಅಚ್ಚುಕಟ್ಟಾಗಿ ನಿಯಮ ಉಲ್ಲಂಘನೆಯಾದಾಗ ಅದನ್ನು ವಿರೋಧಿಸಿ ಸೂಕ್ತ ಸರಿಯಾಗಿ ಆಡೋ ಆಟಗಾರರಿಗೆ ನ್ಯಾಯ ಒದಗಿಸೋದು. ಬಿಗ್ ಬಾಸ್ ಶೋನ ನಿಯಮನುಸಾರ ಧ್ರುವಂತ್ ಅವರು ಈ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ, ಮನೆಯ ಕೆಲಸ ಕೂಡ ಅತ್ಯಂತ ಶಿಸ್ತಿನಿಂದ ಮಾಡುತ್ತಾರೆ. ಈ ವಾರದ ಕಿಚ್ಚನ ಚಪ್ಪಾಳೆ ಧ್ರುವಂತ್ ಅವರಿಗೆ ಸಿಗಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *