Headlines

BBK 12 ಮನೆಯೊಳಗಿರೋ ಗಿಲ್ಲಿ ನಟನಿಗೆ ಈ ವಿಷಯ ಗೊತ್ತೇ ಇಲ್ಲ; ಗೊತ್ತಾದರೆ ಸುಧಾರಿಸಿಕೊಳ್ಳೋಕೆ 15 ದಿನ ಬೇಕು!

BBK 12 ಮನೆಯೊಳಗಿರೋ ಗಿಲ್ಲಿ ನಟನಿಗೆ ಈ ವಿಷಯ ಗೊತ್ತೇ ಇಲ್ಲ; ಗೊತ್ತಾದರೆ ಸುಧಾರಿಸಿಕೊಳ್ಳೋಕೆ 15 ದಿನ ಬೇಕು!

BBK 12 ಮನೆಯೊಳಗಿರೋ ಗಿಲ್ಲಿ ನಟನಿಗೆ ಈ ವಿಷಯ ಗೊತ್ತೇ ಇಲ್ಲ; ಗೊತ್ತಾದರೆ ಸುಧಾರಿಸಿಕೊಳ್ಳೋಕೆ 15 ದಿನ ಬೇಕು!

BBK 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಸ್ಪರ್ಧಿಗಳಿಗೆ ಹೊರಗಡೆ ನಡೆಯುವ ಯಾವುದೇ ವಿಷಯವು ಗೊತ್ತಾಗೋದಿಲ್ಲ. ಆದರೂ ತನ್ನನ್ನು ಕೆಲವರು ಇಷ್ಟಪಡ್ತಾರೆ ಎಂದು ಗಿಲ್ಲಿಗೆ ಸುಳಿವು ಸಿಕ್ಕಿದೆ. ಆದರೆ ಈಗ ಅವರಿಗೆ ಈ ವಿಷಯವೊಂದು ಗೊತ್ತಾದರೆ ಸುಧಾರಿಸಿಕೊಳ್ಳೋಕೆ ಹದಿನೈದು ದಿನವಾದರೂ ಬೇಕು.

ಮಂಡ್ಯ ಮೂಲದ ಹಳ್ಳಿ ಪ್ರತಿಭೆ, ನಟ ಗಿಲ್ಲಿ ನಟ ಅವರು ಹಳ್ಳಿಯಲ್ಲಿ ಒಂದಿಷ್ಟು ಜನರನ್ನು ಸೇರಿಸಿಕೊಂಡು, ಹದಿನೈದು, ಇಪ್ಪತ್ತು ನಿಮಿಷ ನಿರಂತರವಾಗಿ ಡೈಲಾಗ್‌ ಹೇಳುತ್ತಿದ್ದರು. ಅದು ಯುಟ್ಯೂಬ್‌ನಲ್ಲಿ ಲೈವ್‌ ವಿಡಿಯೋ ಆಗುತ್ತಿತ್ತು.

ಅದಾದ ಬಳಿಕ ರಿಯಾಲಿಟಿ ಶೋ, ಸೀರಿಯಲ್‌ ಸೆಟ್‌ನಲ್ಲಿ ಗಿಲ್ಲಿ ನಟ ಅವರು ಕೆಲಸ ಮಾಡಿದ್ದುಂಟು. ಹೊಟ್ಟೆಪಾಡಿಗೋಸ್ಕರ ನಾನಾ ಕೆಲಸ ಮಾಡಿದ್ದರು.

ಭರ್ಜರಿ ಬ್ಯಾಚುಲರ್ಸ್‌, ಕಾಮಿಡಿ ಕಿಲಾಡಿಗಳು, ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಎಂದು ರಿಯಾಲಿಟಿ ಶೋಗಳಲ್ಲಿ ಅವರು ಭಾಗವಹಿಸಿದ್ದರು. ಪ್ರಾಪರ್ಟಿ ಕಾಮಿಡಿ ಎಂದು ಗಿಲ್ಲಿ ನಟ ಮಾಡುತ್ತಿದ್ದ ಹಾಸ್ಯವು, ರಿಯಾಲಿಟಿ ಶೋ ಜಡ್ಜ್‌ಗಳಿಗೆ ಇಷ್ಟ ಆಗುತ್ತಿತ್ತು.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ಹೋಗುವ ಮುನ್ನ ಅವರು ಪ್ರಾಪರ್ಟಿ ಕಾಮಿಡಿ ಮಾಡುತ್ತಿದ್ದರು. ಗಿಲ್ಲಿ ಬಿಗ್‌ ಬಾಸ್‌ ಶೋಗೆ ಬರಬೇಕು ಎಂದು ಕಳೆದ ಫೆಬ್ರವರಿಯಲ್ಲಿ, ಆರು ತಿಂಗಳ ಮುಂಚೆಯೇ ಒಪ್ಪಂದ ಮಾಡಿಕೊಳ್ಳಲಾಗಿತ್ತಂತೆ. ಈ ವಿಷಯವನ್ನು ಕಿಚ್ಚ ಸುದೀಪ್‌ ಅವರೇ ಹೇಳಿದ್ದರು.

ಗಿಲ್ಲಿ ನಟ ಅವರಿಗೆ ಬಿಗ್‌ ಬಾಸ್‌ ಶೋ ಮೂಲಕ ಒಂದಿಷ್ಟು ಜನರು ಇಷ್ಟಪಡುತ್ತಿದ್ದಾರೆ ಎನ್ನೋದು ಗೊತ್ತಾಗಿದೆ, ಆದರೆ ಎಷ್ಟು ಪ್ರಮಾಣದಲ್ಲಿ ಇಷ್ಟಪಡ್ತಾರೆ ಎನ್ನೋದರ ಅರಿವಿಗೆ ಬಂದಿಲ್ಲ. ತಾನು ಬಿಗ್‌ ಬಾಸ್‌ ಶೋನ ಒನ್‌ ಮ್ಯಾನ್‌ ಆರ್ಮಿ ಎನ್ನೋದು ಕೂಡ ಗೊತ್ತಿಲ್ಲ.

ಈ ಹಿಂದೆ ರಿಯಾಲಿಟಿ ಶೋ ಸ್ಪರ್ಧಿ ಆಗಿದ್ದ ಗಿಲ್ಲಿ ನಟ ಅವರಿಗೆ ಲಕ್ಷಗಳಲ್ಲಿ ಫಾಲೋವರ್ಸ್‌ ಇದ್ದರು, ಈಗ ಇವರ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಸಂಖ್ಯೆ ಒಂದು ಮಿಲಿಯನ್‌ ತಲುಪಿದೆ. ಈ ವಿಚಾರ ಅವರಿಗೆ ಗೊತ್ತಿರಲಿಕ್ಕಿಲ್ಲ. ಇದನ್ನೆಲ್ಲ ನೋಡಿದರೆ ಗಿಲ್ಲಿಗೆ ಸುಧಾರಿಸಿಕೊಳ್ಳೋಕೆ ಹದಿನೈದು ದಿನವಂತೂ ಸಾಕಾಗೋದಿಲ್ಲ. ಈ ರೀತಿ ಫಾಲೋವರ್ಸ್‌ ಯಾರಿಗೂ ಆಗಿಲ್ಲ. ಸೂರಜ್‌ ಸಿಂಗ್‌ ಅವರಿಗೆ 18k ಫಾಲೋವರ್ಸ್‌ ಇದ್ದಿದ್ದು, 2.5 ಲಕ್ಷ ಫಾಲೋವರ್ಸ್‌ ಆಗಿದ್ದಾರೆ.

Source link

Leave a Reply

Your email address will not be published. Required fields are marked *