Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಅವರಿಗೆ ಗಿಲ್ಲಿ ನಟನ ವಿಚಾರದಲ್ಲಿ ಪೊಸೆಸ್ಸಿವ್ ಆಗಿದ್ದಾರೆ ಎನ್ನಲಾಗಿತ್ತು. ಈಗ ಧನುಷ್ ಗೌಡ, ರಾಶಿಕಾ ಇನ್ನೊಂದು ಸಾಕ್ಷಿ ನೀಡಿದ್ದಾರೆ. ಹಾಗಾದರೆ ಏನದು?

ರಘು ಹಾಗೂ ರಾಶಿಕಾ ಮಂದಣ್ಣ ಅವರು ಒಂದು ಸೋಫಾ ಮೇಲೆ ಕೂತಿದ್ದರು. ಆಗ ರಕ್ಷಿತಾ ಅವರು, “ನೀವು ಯಾಕೆ ಅಲ್ಲಿ ಕೂತಿದೀರಾ?” ಎಂದು ಪ್ರಶ್ನೆ ಮಾಡಿದ್ದಾರೆ. ಈ ಮಾತು ಕೇಳಿ ರಘು, ರಕ್ಷಿತಾ ಅವರು ಸರ್ಪ್ರೈಸ್ ಆಗಿದ್ದಾರೆ.

ಆಗ ಕಾವ್ಯ ಶೈವ ಅವರು, “ಅವರು ಯಾವಾಗಲೂ ಹೀಗೆ ತಾನೇ ಕೂರೋದು” ಎಂದಿದ್ದರು. ಆಗ ರಕ್ಷಿತಾ ಅವರು “ನೀವು ಅನ್‌ಕಂಫರ್ಟೇಬಲ್ ಫೀಲ್ ಮಾಡ್ತಿದೀರಾ, ಅದು ನನಗೆ ಗೊತ್ತಾಗ್ತಿದೆ” ಎಂದಿದ್ದಾರೆ.

ಧನುಷ್ ಗೌಡ ಅವರು, “ರಘು ಅಣ್ಣನಿಗೆ ಅನ್‌ಕಂಫರ್ಟೇಬಲ್ ಫೀಲ್ ಮಾಡ್ತಿದೀರಾ ಎಂದು ಹೇಳಿದ್ರೆ ರಕ್ಷಿತಾಗೆ ಇಷ್ಟ ಆಗ್ತಿಲ್ಲ ಎಂದರ್ಥ. ರಕ್ಷಿತಾ ಪೊಸೆಸ್ಸಿವ್ ಆಗ್ತಿದ್ದಾಳೆ” ಎಂದಿದ್ದಾರೆ.

ರಾಶಿಕಾ ಶೆಟ್ಟಿ ಅವರು, “ನಾನು ರಘು ಅವರನ್ನು ಅಣ್ಣಾ ಅಂತ ಕರೆಯುತ್ತೇನೆ” ಎಂದಿದ್ದಾರೆ. “ನೀನು ತುಂಬ ಪೊಸೆಸ್ಸೆವ್ ಫೀಲ್ ಮಾಡ್ತಿದ್ದೀಯಾ. ನೀನು ನಗುತ್ತಿರುವುದರಿಂದಲೇ ನನಗೆ ಸತ್ಯ ಎಂದು ಗೊತ್ತಾಗಿದೆ.

ಗಿಲ್ಲಿ ನಟ ಅವರು ಸ್ಪಂದನಾ ಸೋಮಣ್ಣ, ಕಾವ್ಯ ಶೈವ ಜೊತೆ ಕ್ಲೋಸ್ ಆಗಿದ್ದಾರೆ. ಗಿಲ್ಲಿ ಜೊತೆ ಇವರು ಕ್ಲೋಸ್ ಆದರೆ ರಕ್ಷಿತಾ ಪೊಸೆಸ್ಸಿವ್ ಆಗ್ತಾರೆ ಎಂದು ಧ್ರುವಂತ್ ಕೂಡ ಹೇಳಿದ್ದರು. ಒಟ್ಟಿನಲ್ಲಿ ರಕ್ಷಿತಾ ಪೊಸೆಸ್ಸಿವ್ ಎನ್ನೋದು ಸಾಬೀತಾಯ್ತು.

ರಕ್ಷಿತಾ ಅವರಿಗೆ ಗಿಲ್ಲಿ ನಟ, ರಜತ್, ರಘು, ಮಾಳು ನಿಪನಾಳ, ಮಲ್ಲಮ್ಮ ಇಷ್ಟವಾಗಿದ್ದರು. ಈಗ ರಘು, ಗಿಲ್ಲಿ ನಟ ಬಿಟ್ಟು ಉಳಿದವರು ಮನೆಯಿಂದ ಹೊರಗಡೆ ಹೋಗಿದ್ದಾರೆ.

Source link
ಕೊನೆಗೂ ಸಾಕ್ಷಿ ಸಮೇತ ರಕ್ಷಿತಾ ಶೆಟ್ಟಿ ಅಸಲಿ ಗುಣ ಬಿಚ್ಚಿಟ್ಟ BBK 12 ಧನುಷ್ ಗೌಡ! ಹೀಗೂ ಇದಾರಾ?