ಸೆಪ್ಟೆಂಬರ್ 22ರಂದು ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ( BBK 12 ) ಶುರುವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆಯ ಶೋ ಇದಾಗಿದೆ. ಹಾಗಾದರೆ ಯಾರೆಲ್ಲ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆ? ಅಂದಹಾಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಪೋಸ್ಟ್ನಲ್ಲಿ ಏನಿದೆ?

ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಸ್ವಾತಿ ಈ ಬಾರಿ ಬಿಗ್ ಬಾಸ್ ಶೋಗೆ ಬರ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಸ್ವಾತಿ ಶೋನಲ್ಲಿ ಭಾಗವಹಿಸೋದು ಡೌಟ್ ಎನ್ನಲಾಗುತ್ತಿದೆ.

ಸತ್ಯ ಧಾರಾವಾಹಿಯಲ್ಲಿ ನಟಿಸಿರುವ ಸಾಗರ್ ಬಿಳಿಗೌಡ ಅವರು ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನಲಾಗುತ್ತಿದೆ. ಅಂದಹಾಗೆ ಹೋಟೆಲ್ ಬ್ಯುಸಿನೆಸ್ ಮಾಡುತ್ತಿರುವ ಸಾಗರ್ ಮಿನಿ ಸಿರೀಸ್ಗಳಲ್ಲಿ ಕಾಣಿಸುತ್ತಿದ್ದಾರೆ.

ಧರ್ಮಸ್ಥಳದ ಕುರಿತು ವಿಡಿಯೋ ಮಾಡಿ ದೊಡ್ಡ ಸಂಚಲನ ಮೂಡಿಸಿರುವ ಎಂಡಿ ಸಮೀರ್ ಅವರು ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನಲಾಗ್ತಿದೆ. ಸದ್ಯ ಪೊಲೀಸ್ ತನಿಖೆಯಲ್ಲಿ ಭಾಗಿ ಆಗ್ತಿರೋ ಇವರು ದೊಡ್ಮನೆಗೆ ಹೋಗೋದು ಡೌಟ್ ಎನ್ನಬಹುದು.

ಸುದ್ದಿ ನಿರೂಪಕಿಯಾಗಿದ್ದು, ಕೆಲ ಶೋಗಳಲ್ಲಿ ಭಾಗವಹಿಸಿರುವ ದಿವ್ಯಾ ವಸಂತ ಅವರು ಬಿಗ್ ಬಾಸ್ ಮನೆಗೆ ಹೋಗ್ತಾರೆ ಎನ್ನಲಾಗ್ತಿದೆ.

ಕನ್ನಡದ ಪ್ರಖ್ಯಾತ ಯುಟ್ಯೂಬರ್ ಡಾ ಬ್ರೋ ಅವರು ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನುವ ವದಂತಿ ಈ ಬಾರಿ ಜೋರಾಗಿ ಕೇಳಿ ಬರುತ್ತಿದೆ.

ಕಳೆದ ಕೆಲ ಸೀಸನ್ಗಳಿಂದಲೂ ಶ್ವೇತಾ ಪ್ರಸಾದ್ ಅವರು ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನಲಾಗ್ತಿದೆ. ಆದರೆ ಆ ವದಂತಿಗಳು ನಿಜವಾಗಿಲ್ಲ. ಈ ಬಾರಿ ಬರ್ತಾರಾ ಎಂದು ಕಾದು ನೋಡೋಣ.

ಮುದ್ದುಸೊಸೆ ಧಾರಾವಾಹಿಯನ್ನು ನಿರ್ಮಾಣ ಮಾಡಿರುವ ನಟಿ ಮೇಘಾ ಶೆಟ್ಟಿ ಈ ಬಾರಿ ಬಿಗ್ ಬಾಸ್ ಮನೆಗೆ ಬರ್ತಾರೆ ಎಂದು ಹೇಳಲಾಗುತ್ತಿದೆ. ಇದು ನಿಜ ಆಗಲಿದೆಯೋ ಏನೋ!

ಬೃಂದಾವನ ಧಾರಾವಾಹಿ ನಟಿ, ಯುಟ್ಯೂಬರ್ ವರುಣ್ ಆರಾಧ್ಯ ಅವರು ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನಲಾಗ್ತಿದೆ.

ಕನ್ನಡದ ಕಾಮಿಡಿ ಶೋ ಸೇರಿದಂತೆ ಅಣ್ಣಯ್ಯ ಧಾರಾವಾಹಿಯಲ್ಲಿ ನಟಿಸುತ್ತಲಿರುವ ದೀಪಿಕಾ ಗೌಡ ಈ ಬಾರಿ ಬಿಗ್ ಬಾಸ್ ಶೋಗೆ ಬರ್ತಾರಾ?

ಗೀತಾ, ನೂರು ಜನ್ಮಕೂ ಧಾರಾವಾಹಿ ಖ್ಯಾತಿಯ ಧನುಷ್ ಗೌಡ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಬರ್ತಾರಾ?

ಅಮೃತಾ ರಾಮಮೂರ್ತಿ ಅವರು ಸದ್ಯ ಆಸೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇವರು ದೊಡ್ಮನೆ ಪ್ರವೇಶ ಮಾಡ್ತಾರೆ ಎನ್ನಲಾಗ್ತಿದೆ.

ಕನ್ನಡ, ತೆಲುಗು ಸಿನಿಮಾ ಸೇರಿದಂತೆ ಕಿರುಚಿತ್ರಗಳಲ್ಲಿ ನಟಿಸುತ್ತಿರುವ ಪಾಯಲ್ ಚೆಂಗಪ್ಪ ಕೂಡ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಬರ್ತಾರೆ ಎನ್ನಲಾಗ್ತಿದೆ.

ಸಂಖ್ಯಾಶಾಸ್ತ್ರಜ್ಞ, ಜ್ಯೋತಿಷಿ ಅರವಿಂದ್ ರತನ್ ಕೂಡ ಬಿಗ್ ಬಾಸ್ ಮನೆಗೆ ಬರ್ತಾರೆ ಎಂದು ಹೇಳಲಾಗುತ್ತಿದೆ.

Source link
Bigg Boss Kannada 12 ಮನೆಗೆ ಹೋಗೋ ಸ್ಪರ್ಧಿಗಳ ಲಿಸ್ಟ್ ಲೀಕ್! ಖ್ಯಾತ ಜ್ಯೋತಿಷಿಯೂ ಹೋಗ್ತಾರಂತೆ