BBK 12: ಚಾಮುಂಡಿ ದೇವಿ ಮುಂದೆ ಮಾತು ಕೊಟ್ಟು ತಪ್ಪಿದ ಗಿಲ್ಲಿ ನಟ; ಇಂಥ ಮಹಾಪ್ರಮಾದ ಯಾಕೆ? | Bigg Boss Kannada Season 12 Gilli Nata Assures Dhruvanth About Comedy

BBK 12: ಚಾಮುಂಡಿ ದೇವಿ ಮುಂದೆ ಮಾತು ಕೊಟ್ಟು ತಪ್ಪಿದ ಗಿಲ್ಲಿ ನಟ; ಇಂಥ ಮಹಾಪ್ರಮಾದ ಯಾಕೆ? | Bigg Boss Kannada Season 12 Gilli Nata Assures Dhruvanth About Comedy


15

ಧ್ರುವಂತ್‌ ಡ್ರಿಲ್‌ ಮಾಡ್ತಾರೆ

Image Credit : colors kannada

ಧ್ರುವಂತ್‌ ಡ್ರಿಲ್‌ ಮಾಡ್ತಾರೆ

ಧ್ರುವಂತ್‌ ಏನಾದರೂ ಅವಕಾಶ ಸಿಕ್ಕಿದರೆ ಡ್ರಿಲ್‌ ಮಾಡ್ತಾರೆ, ಎರಡು ಗಂಟೆ ಕೊರೆಯುತ್ತಾರೆ ಎಂದೆಲ್ಲ ಗಿಲ್ಲಿ ನಟ ಅವರು ಆಗಾಗ ಹೇಳುತ್ತಾರೆ. ಅಷ್ಟೇ ಅಲ್ಲದೆ ಧ್ರುವಂತ್‌ ಅವರ ನಡೆಯನ್ನು ಆಡಿಕೊಳ್ಳುತ್ತಿರುತ್ತಾರೆ. ಇದು ಧ್ರುವಂತ್‌ಗೆ ಬೇಸರ ತಂದಿದೆ.

25

 ಗಿಲ್ಲಿ ನಟ ಎಲ್ಲರ ಬಳಿ ಕಾಮಿಡಿ ಮಾಡ್ತಾರೆ

Image Credit : colors kannada

ಗಿಲ್ಲಿ ನಟ ಎಲ್ಲರ ಬಳಿ ಕಾಮಿಡಿ ಮಾಡ್ತಾರೆ

ಅವಕಾಶ ಸಿಕ್ಕಿದಾಗೆಲ್ಲ ಗಿಲ್ಲಿ ನಟ ಎಲ್ಲರ ಬಳಿ ಕಾಮಿಡಿ ಮಾಡ್ತಾರೆ, ಬೇರೆಯವರನ್ನು ಕೆಳಗಡೆ ಹಾಕಿ ಕಾಮಿಡಿ ಮಾಡ್ತಾರೆ, ತೇಜೋವಧೆ ಮಾಡುತ್ತಾರೆ, ಗಿಲ್ಲಿ ನಟನಿಗೆ ಕಾಮಿಡಿ ಮಾಡೋಕೆ ಬರೋದಿಲ್ಲ, ಗಿಲ್ಲಿ ನಟನಿಗೆ ಬೇರೆಯವರ ವ್ಯಕ್ತಿತ್ವವೇ ಕಾಮಿಡಿ ಎಂದು ಧ್ರುವಂತ್‌ ಸಾಕಷ್ಟು ಬಾರಿ ಹೇಳಿದ್ದರು.

35

ಗಿಲ್ಲಿ ನಟ ತಿಗಣೆ ಥರ

Image Credit : colors kannada

ಗಿಲ್ಲಿ ನಟ ತಿಗಣೆ ಥರ

ಕಳೆದ ಸೂಪರ್‌ ಸಂಡೇ ವಿಥ್‌ ಸುದೀಪ ಎಪಿಸೋಡ್‌ನಲ್ಲಿ ಗಿಲ್ಲಿ ನಟ ತಿಗಣೆ ಥರ, ಎಲ್ಲರನ್ನು ಅವರು ಕಚ್ಚುತ್ತಿರಬೇಕು ಎಂದು ಕೂಡ ಧ್ರುವಂತ್‌ ಅವರು ಕಿಚ್ಚ ಸುದೀಪ್‌ ಮುಂದೆ ಹೇಳಿದ್ದರು. ಬೇರೆಯವರನ್ನು ಟಾರ್ಗೆಟ್‌ ಮಾಡಿ, ಕಾಮಿಡಿ ಮಾಡೋದು ನಿಲ್ಲಿಸು ಕೂಡ ಹೇಳಿದ್ದರು. ಆದರೆ ಗಿಲ್ಲಿ ಯಾರ ಮಾತನ್ನು ಕೇಳಿರಲಿಲ್ಲ.

45

ಮಾತು ತಗೊಂಡ ಧ್ರುವಂತ್‌

Image Credit : colors kannada

ಮಾತು ತಗೊಂಡ ಧ್ರುವಂತ್‌

ಚಾಮುಂಡಿ ದೇವಿ ಬಳಿ ಗಿಲ್ಲಿ ನಟ ಅವರನ್ನು ನಿಲ್ಲಿಸಿಕೊಂಡ ಧ್ರುವಂತ್‌ ಈಗ ಇನ್ನೊಂದು ಮಾತು ಹೇಳಿದ್ದಾರೆ. “ನಾನು ಈ ಮನೆಯಲ್ಲಿ ಆಡುತ್ತಿರುವ ಆಟಕ್ಕೆ ತುಂಬ ಗೌರವ ಕೊಡುತ್ತೀನಿ. ನನ್ನ ಆಟ ಅಥವಾ ನನ್ನ ಮೇಲೆ ಆಡಿಕೊಳ್ಳಬೇಡಿ. ನನ್ನ ಹಿಂದೆ ನೀವು ಮಾತನಾಡಿದರೆ ಅದು ನಿಮ್ಮ ವ್ಯಕ್ತಿತ್ವ. ನಮ್ಮನ್ನೊಂದು ಬಿಟ್ಟುಬಿಡಿ, ಬಡಜೀವ ಬದುಕಿಕೊಳ್ತೀನಿ” ಎಂದು ಹೇಳಿದ್ದಾರೆ.

55

ಗಿಲ್ಲಿ ನಟ ಅವರು “ತಪ್ಪಾಯ್ತು” ಎಂದಿದ್ದಾರೆ

Image Credit : colors kannada

ಗಿಲ್ಲಿ ನಟ ಅವರು “ತಪ್ಪಾಯ್ತು” ಎಂದಿದ್ದಾರೆ

ಧ್ರುವಂತ್‌ ಅವರ ಮಾತು ಕೇಳಿ ಗಿಲ್ಲಿ ನಟ ಅವರು “ತಪ್ಪಾಯ್ತು” ಎಂದಿದ್ದಾರೆ. ಆಮೇಲೆ ಗಿಲ್ಲಿ ನಟ ಸುಮ್ಮನೆ ಅಲ್ಲಿಂದ ಹೋಗಿದ್ದಾರೆ. ಅದಾದ ಬಳಿಕ ವಿಲನ್‌ ಅಬ್ಬರ ಶುರುವಾಯ್ತು. ಗಿಲ್ಲಿ ನಟ ಅವರು ಮತ್ತೆ ಧ್ರುವಂತ್‌ ಆಟವನ್ನು ಆಡಿಕೊಂಡು, ನಕ್ಕಿದ್ದಾರೆ. ಧ್ರುವಂತ್‌ ಅವರು ಬಿಗ್‌ ಬಾಸ್‌ ಬಿಡಿಸ್ತೀನಿ, ಕರೆದುಕೊಂಡು ಬರ್ತೀನಿ, ತಪಸ್ಸು ಮಾಡ್ತೀನಿ ಎಂದು ಹೇಳಿದ್ದರು. ಇದನ್ನು ಗಿಲ್ಲಿ ಆಡಿಕೊಂಡು ನಕ್ಕಿದ್ದಾರೆ. ಚಾಮುಂಡಿ ದೇವಿ ಬಳಿ ಈ ರೀತಿ ಮಾತು ಆಡಿರೋದಿಕ್ಕೆ ಗಿಲ್ಲಿ ನಟ ಏನು ಮಾಡ್ತಾರೆ ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *