Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಮನೆಗೆ ಕಾವ್ಯ ಶೈವ ಮನೆಯವರು ಬಂದ್ರೆ ಬಯ್ತಾರೋ ಎಂದು ಗಿಲ್ಲಿ ನಟ ಅವರಿಗೆ ಭಯ ಇತ್ತು. ಇದನ್ನು ಅವರು ಮೊದಲೇ ಹೇಳಿದ್ದರು. ಕಾವ್ಯ ಮನೆಯವರು ಬಂದರೆ ಓಡಿ ಹೋಗಿ ಅಡಗಿ ಕೂರುವೆ ಎಂದಿದ್ದರು. ಆದರೆ ಆಗಿದ್ದೇ ಬೇರೆ!

ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಕಾವ್ಯ ಶೈವ ಮನೆಯವರು ಬಂದರು, ಗಿಲ್ಲಿ ಆಟವನ್ನು ಹೊಗಳಿದ್ದರು. ಇಷ್ಟುದಿನಗಳಿಂದ ಕಾವ್ಯ ಅವರನ್ನು ರೇಗಿಸಿದ್ದಕ್ಕೆ ಬೈಯ್ಯಬಹುದು ಎಂದು ಗಿಲ್ಲಿ ನಟ ಅಂದುಕೊಂಡಿದ್ದರು. ಆದರೆ ಆ ರೀತಿ ಆಗಲಿಲ್ಲ.

ಕಾವ್ಯ ಶೈವ ಮನೆಯವರು ಗಿಲ್ಲಿ ನಟನಿಗೆ ಬೆಳ್ಳಿಯ ಬ್ರಾಸ್‌ಲೈಟ್ ಹಾಕಿದರು. ಯಾವಾಗಲೂ ರಘು ಅವರ ಬ್ರಾಸ್‌ಲೈಟ್‌ನ್ನು ಗಿಲ್ಲಿ ತಗೊಂಡು ಹಾಕುತ್ತಿದ್ದರು. ಅದರಂತೆ ಈಗ ಗಿಲ್ಲಿಗೆ ಬ್ರಾಸ್‌ಲೈಟ್ ಗಿಫ್ಟ್ ಆಗಿ ಸಿಕ್ಕಿದೆ. ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ಈ ಬಗ್ಗೆ ಚರ್ಚೆ ಆಗಿದೆ.

ಕಾವ್ಯ ಶೈವ ಮನೆಯವರು ಬಂದಾಗ ತಲೆಯಲ್ಲಿ ಏನು ಓಡ್ತಿತ್ತು ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಆಗ ಧ್ರುವಂತ್ ಅವರು “ಬ್ರಾಸ್‌ಲೈಟ್ ಕಳಿಸಿದ್ದಾರೆ” ಎಂದಿದ್ದಾರೆ.

“ಬ್ರಾಸ್‌ಲೈಟ್ ತಂದುಕೊಡೋದು ನಮ್ಮನೆ ಸಂಪ್ರದಾಯ. ಹಾಗೆ ಮಾಡಿದರೆ ನಿಶ್ಚಿತಾರ್ಥ ಆಗೋಯ್ತು” ಎಂದು ಗಿಲ್ಲಿ ನಟ ಹೇಳಿದ್ದಾರೆ. ಆಗ ಕಾವ್ಯ ಶೈವ ಅವರು, “ನಮ್ಮನೆ ಕಡೆ ರಿಂಗ್ ಕೊಡೋದು ನಿಶ್ಚಿತಾರ್ಥ” ಎಂದಿದ್ದಾರೆ.

ಅಂದಹಾಗೆ ರಕ್ಷಿತಾ ಅವರು, “ಅವರು ಗಿಲ್ಲಿ, ಗಿಲ್ಲಿ ಹೇಳ್ತಾರೆ. ಆಮೇಲೆ ಗಿಲ್ಲಿ ಪಕ್ಕ ಹೋಗಿ ಕೂರ್ತಾರೆ” ಎಂದಿದ್ದಾರೆ. ಆಗ ಸುದೀಪ್ ಅವರು, “ಇದನ್ನೆಲ್ಲ ಕಾವ್ಯ ಎಂಜಾಯ್ ಮಾಡುತ್ತಾರೋ ಇಲ್ಲವೋ ನಿಮಗಂತೂ ಸ್ವಲ್ಪ ಉರಿಯತ್ತೆ. ಕಾವ್ಯ ಅವರನ್ನು ಹೇಗಾದರೂ ಕಳಿಸಿದರೆ, ನೀವು ಅವರ ಪಕ್ಕ ಕೂರಬಹುದು” ಎಂದು ಹೇಳಿದ್ದಾರೆ.

Source link
BBK 12: ಸುದೀಪ್ ಮುಂದೆಯೇ ನಿಶ್ಚಿತಾರ್ಥ ಆಯ್ತು ಎಂದ ಗಿಲ್ಲಿ ನಟ; ಉರಿದುಕೊಂಡ ರಕ್ಷಿತಾ ಶೆಟ್ಟಿ!