15

Image Credit : colors kannada
ಹೊಸ ಪ್ರೋಮೋ ರಿಲೀಸ್
ಕಿಚ್ಚ ಸುದೀಪ್ ಅವರು ರಜತ್‌ಗೆ ಗಿಲ್ಲಿ ನಟನ ಮನೆಗೆ ಫೋನ್ ಮಾಡಿ ಮಾತನಾಡಿ ಎಂದಿದ್ದಾರೆ. ಆಮೇಲೆ ಗಿಲ್ಲಿಗೂ ಮಾತನಾಡಿ ಎಂದು ಹೇಳಿದ್ದರು. ಅದರಂತೆ ಚೈತ್ರಾ ಕುಂದಾಪುರ ಕೂಡ ಗಿಲ್ಲಿ ಮನೆಯವರ ಜೊತೆ ಮಾತನಾಡಿದ್ದರು. ಈಗ ವಾಹಿನಿಯು ಹೊಸ ಪ್ರೋಮೋ ರಿಲೀಸ್ ಮಾಡಿದೆ.
25
Image Credit : colors kannada
ರಜತ್, ಗಿಲ್ಲಿ ಮಧ್ಯೆ ನಡೆದ ಸಂಭಾಷಣೆ ಏನು?
ರಜತ್: ಗಿಲ್ಲಿ ಆಡು ಅಂದರೆ ಯಾವಾಗಲೂ ಮಾತಾಡ್ತಾನೆ. ಆಟ ಯಾವಾಗಲೋ ಆಡ್ತೀಯಾ? ಆಮೇಲೆ ಮಾತನಾಡಬಹುದು. ಆದರೆ ಗಿಲ್ಲಿ ಬರೀ ಮಾತನಾಡುತ್ತಾನೆ
ಗಿಲ್ಲಿ ನಟ: ಬರುವಾಗ ಸಖತ್ ಮಾಸ್ ಆಗಿ ಬಂದ್ರು, ಈಗ ಠುಸ್ ಆಗಿದ್ದಾರೆ. ಗೇಮ್ ಅಲ್ಲಿ ತೋರಸ್ತೀನಿ ಅಂತ ಅಂದ್ರು, ನಾನು ಗೇಮ್ ಅಲ್ಲಿ ತೂರಸ್ತೀನಿ
35
Image Credit : colors kannada
ಚೈತ್ರಾ ಕುಂದಾಪುರ, ಗಿಲ್ಲಿ ಮಧ್ಯೆ ಏನು ನಡೀತು?
ಚೈತ್ರಾ ಕುಂದಾಪುರ: ನಾಲ್ಕು ದಿನ ಏನು ಮಾಡೋದು ಅಂತ ಟೆನ್ಶನ್ ಅಲ್ಲಿ ಪೂರ್ತಿ ಸೈಲೆಂಟ್ ಕೂತಿದ್ದಾನೆ.
ಗಿಲ್ಲಿ ನಟ: ನಾನು ಮಾತಾನಾಡದೆ ಕೂತಿಲ್ಲ, ಆದರೆ ನಾನು ಮಾತಾಡಿದ್ರೆ ಅವರು ಹೊರಗಡೆ ಹೋಗ್ತಾರೆ ಅಂತ ಕೂತಿದೀನಿ.
45
Image Credit : colors kannada
ಗಿಲ್ಲಿ ನಟ ಇರಿಟೇಟ್ ಅಂತೆ
ಹೊರಗಡೆ ನಾನು ನಿನ್ನನ್ನು ಇಷ್ಟಪಟ್ಟಿದ್ದೆ, ಆದರೆ ನೀನು ಸಿಕ್ಕಾಪಟ್ಟೆ ಇರಿಟೇಟ್. ಇವರೆಲ್ಲ ಹೇಗೆ ತಡ್ಕೊಳ್ತಾರೆ? ಎಷ್ಟು ಅಂತ ಇರಿಟೇಟ್ ಮಾಡ್ತೀಯಾ? ನಾನು ಹೇಗೆ ಅಂತ ನಿನಗೆ ಗೊತ್ತಿಲ್ಲ, ನನ್ನ ಬಗ್ಗೆ ನಿನಗೆ ಗೊತ್ತಿಲ್ಲ, ಮನೆಯಲ್ಲಿದ್ದವರಿಗೆ ನಾನು ತಾಯತ ಕಟ್ಟಿಸಿದ್ದೆ ಎಂದು ರಜತ್ ಅವರು ಗಿಲ್ಲಿಗೆ ಅವಾಜ್ ಹಾಕಿದ್ದರು.
55
Image Credit : colors kannada
ಗಿಲ್ಲಿ ನಟನ ಆಟ ಬದಲಾಗತ್ತಾ?
ಚೈತ್ರಾ ಕುಂದಾಪುರ ಕೂಡ ರೆಸಾರ್ಟ್ ಟಾಸ್ಕ್ ವೇಳೆ ಗಿಲ್ಲಿ ನಟನಿಗೆ ಒಂದಿಷ್ಟು ಕೆಲಸ ಕೊಟ್ಟಿದ್ದರು. ಆದರೆ ಗಿಲ್ಲಿ ಗೊತ್ತಲ್ವಾ? ಯಾರನ್ನೂ ಬಿಡದೆ ಕೌಂಟರ್ ಕೊಡುತ್ತಿದ್ದಾರೆ. ವೈಲ್ಡ್‌ಕಾರ್ಡ್ ಸ್ಪರ್ಧಿಗಳ ಜೊತೆ ಗಿಲ್ಲಿ ನಟನ ಆಟ ಹೇಗೆ ನಡೆಯಲಿದೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.