BBK 12: ಅಜ್ಜಿ ಸಾವಿನಲ್ಲೂ ಗಟ್ಟಿಯಾಗಿ ನಿಂತಿದ್ದ ಗಿಲ್ಲಿ ನಟನಿಗೆ ಕಣ್ಣೀರು ಹಾಕಿಸಿದ ರಕ್ಷಿತಾ ಶೆಟ್ಟಿ! | Bigg Boss Kannada Season 12 Gilli Nata Sad For Rakshita Shetty S Elimination

BBK 12: ಅಜ್ಜಿ ಸಾವಿನಲ್ಲೂ ಗಟ್ಟಿಯಾಗಿ ನಿಂತಿದ್ದ ಗಿಲ್ಲಿ ನಟನಿಗೆ ಕಣ್ಣೀರು ಹಾಕಿಸಿದ ರಕ್ಷಿತಾ ಶೆಟ್ಟಿ! | Bigg Boss Kannada Season 12 Gilli Nata Sad For Rakshita Shetty S Elimination


15

ಚೈತ್ರಾ ಕುಂದಾಪುರ ನಂಬಿಕೆ ಏನು?

Image Credit : colors kannada

ಚೈತ್ರಾ ಕುಂದಾಪುರ ನಂಬಿಕೆ ಏನು?

ಈ ಹಿಂದೆ ಎಲಿಮಿನೇಟ್‌ ಆದವರು ಕಾರ್‌ನಲ್ಲಿ ಮರಳಿ ಬಂದಿದ್ದುಂಟು. ಈ ಬಾರಿ ರಕ್ಷಿತಾ ಶೆಟ್ಟಿ ಮತ್ತೆ ಬರುತ್ತಾರೆ ಎಂಬ ನಂಬಿಕೆಯಿದೆ. ಈ ಮನೆಯಲ್ಲಿ ಯುನಿಕ್‌ ಕ್ಯಾರೆಕ್ಟರ್‌ ರಕ್ಷಿತಾ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಯಾವಾಗಲೂ ಎಲಿಮಿನೇಟ್‌ ಆಗಿರೋರನ್ನು ಸುದೀಪ್‌ ಅವರು ಇಷ್ಟು ಕಮ್ಮಿ ಮಾತನಾಡಿಸೋದಿಲ್ಲ, ಏನೋ ಇದೆ ಎಂದು ಸೂರಜ್‌ ಹೇಳಿದ್ದಾರೆ.

25

ಇದು ನಮಗೆ ಎಫೆಕ್ಟ್‌ ಆಗುತ್ತದೆ

Image Credit : colors kannada

ಇದು ನಮಗೆ ಎಫೆಕ್ಟ್‌ ಆಗುತ್ತದೆ

ಧನುಷ್‌ ಗೌಡ, ಗಿಲ್ಲಿ ನಟ, ರಘು ಅವರು ಕೂಡ ಬೇಸರ ಮಾಡಿಕೊಂಡಿದ್ದಾರೆ.

ನಮ್ಮ ಮೂವರು ಜನರ ಜೊತೆ ಕ್ಲೋಸ್‌ ಇದ್ದಳು. ನಮಗೆ ಎಫೆಕ್ಟ್‌ ಆಗುತ್ತದೆ. ನಮಗೆ ಅಂಥ ಇರೋ ಜೀವ ಇದು, ಬಂದು ಬಂದು ಮಾತನಾಡಿಸೋ ಜೀವ ಅದು ಎಂದು ರಘು ಹೇಳಿದ್ದಾರೆ.

ನಾನು ರಕ್ಷಿತಾಳನ್ನು ತುಂಬ ಹಚ್ಕೊಂಡಿದ್ದೆ ಎಂದು ರಜತ್‌ ಹೇಳಿದ್ದಾರೆ.

35

ಒಂದು ವಾರ ಬೇಕು ನನಗೆ ಸರಿ ಆಗೋಕೆ

Image Credit : colors kannada

ಒಂದು ವಾರ ಬೇಕು ನನಗೆ ಸರಿ ಆಗೋಕೆ

ಕುಣಿದುಕೊಂಡು ಕುಣಿದುಕೊಂಡು ಬಂದು ಮಾತನಾಡುಸುತ್ತಿದ್ದಳು. ಡಬಲ್‌ ಎಲಿಮಿನೇಶನ್‌ ಎಂದಾಗಲೇ ನನಗೆ ತಲೆ ಕೆಟ್ಟೋಯ್ತು, ಇದು ನಿರೀಕ್ಷೆ ಮಾಡೋಕೆ ಆಗಿರಲಿಲ್ಲ. ನಾನು ಅಳೋದೇ ಇಲ್ಲ, ಆದರೆ ಇವತ್ತು ಬೇಸರ ಆಗೋಯ್ತು. ಇನ್ನು ಒಂದು ವಾರ ಬೇಕು ನನಗೆ ಸರಿ ಆಗೋಕೆ ಎಂದು ಗಿಲ್ಲಿ ನಟ ಹೇಳಿದ್ದಾರೆ.

ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಒಳ್ಳೆಯ ಸ್ನೇಹ ಸಂಬಂಧ ಇದೆ. ಇವರಿಬ್ಬರು ತಮಾಷೆಗೆ ಕಿತ್ತಾಡಿಕೊಂಡಿದ್ದೂ ಇದೆ. 

ಅಜ್ಜಿಯ ಸಾವಿನಲ್ಲಿ ಗಿಲ್ಲಿ ನಗುತ್ತಿದ್ದರು ಎಂದು ಅಶ್ವಿನಿ, ಜಾಹ್ನವಿ ಒಮ್ಮೆ ಮಾತನಾಡಿಕೊಂಡಿದ್ದರು.

45

ಸ್ಪಂದನಾಗೆ ಖುಷಿಯೋ ಖುಷಿ

Image Credit : colors kannada

ಸ್ಪಂದನಾಗೆ ಖುಷಿಯೋ ಖುಷಿ

ಅಂದಹಾಗೆ ಸ್ಪಂದನಾ ಸೋಮಣ್ಣ ಅವರು ತಾನು ಬಚಾವ್‌ ಆದೆ ಎಂದು ಖುಷಿಯಾಗಿದ್ದರು. ಇನ್ನು ಕಾವ್ಯ ಶೈವ ಅವರು ನನಗೆ ಡಬಲ್‌ ಎಲಿಮಿನೇಶನ್‌ ಸರ್ಪ್ರೈಸ್‌ ಅನಿಸಿತು, ಆದರೆ ಧ್ರುವಂತ್‌ ಔಟ್‌ ಆಗಿರೋದು ಸರ್ಪ್ರೈಸ್‌ ಎನಿಸಲಿಲ್ಲ ಎಂದಿದ್ದಾರೆ. 

55

ಅಳೋದಿಲ್ಲ ಎಂದ ಕಾವ್ಯ

Image Credit : colors kannada

ಅಳೋದಿಲ್ಲ ಎಂದ ಕಾವ್ಯ

ಕಾವ್ಯ ಶೈವ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಸಾಕಷ್ಟು ಜಗಳ ಆಗಿದೆ. ನಾಮಿನೇಶನ್‌ ವಿಷಯ ಬಂದಾಗಲೋ, ಇನ್ಯಾವುದೋ ವಿಷಯ ಬಂದಾಗ ಕಾವ್ಯ ಅವರು ರಕ್ಷಿತಾ ವಿರುದ್ಧ ಮಾತನಾಡಿದ್ದರು. ಅದರಂತೆ ರಕ್ಷಿತಾ ಅವರು ಕಾವ್ಯ ವಿರುದ್ಧ ಮಾತನಾಡಿದ್ದರು. ಈಗ ನಾನು ಅಳೋದಿಲ್ಲ ಎಂದು ಕಾವ್ಯ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *