BBK 12 ಮನೆಯಲ್ಲಿ ಕಾವ್ಯ ಶೈವ ಪಾಲಕರು; ಆ ಕಾರಣಕ್ಕೆ ಭಯ ಬಿದ್ದು ಕಾಲ್ಕೀಳಲಿರೋ ಗಿಲ್ಲಿ ನಟ | Bigg Boss Kannada Season 12 Gilli Nata Scarred For Kavya Shaiva Parents

BBK 12 ಮನೆಯಲ್ಲಿ ಕಾವ್ಯ ಶೈವ ಪಾಲಕರು; ಆ ಕಾರಣಕ್ಕೆ ಭಯ ಬಿದ್ದು ಕಾಲ್ಕೀಳಲಿರೋ ಗಿಲ್ಲಿ ನಟ | Bigg Boss Kannada Season 12 Gilli Nata Scarred For Kavya Shaiva Parents


15

ಯಾವಾಗಲೂ ತಮಾಷೆ, ತರಲೆ

Image Credit : colors kannada

ಯಾವಾಗಲೂ ತಮಾಷೆ, ತರಲೆ

ಹೌದು, ಯಾವಾಗ ನೋಡಿದರೂ ಕಾವ್ಯ ಅಂದ್ರೆ ಇಷ್ಟ, ಮದುವೆಯಾಗಲು ಕಾವ್ಯಳಂಥ ಹುಡುಗಿ ಬೇಕು, ಕಾವ್ಯಳನ್ನು ನಾನು ಮಾತ್ರ ಅಳಿಸಬೇಕು ಹೀಗೆ ಅವರು ಒಂದಿಷ್ಟು ತರಲೆಯ, ತಮಾಷೆಯ ಮಾತುಗಳನ್ನು ಹೇಳುತ್ತಲೇ ಇದ್ದರು. 

25

ಗಿಲ್ಲಿಯನ್ನು ನಾಮಿನೇಟ್‌ ಮಾಡಿದ್ರು

Image Credit : colors kannada

ಗಿಲ್ಲಿಯನ್ನು ನಾಮಿನೇಟ್‌ ಮಾಡಿದ್ರು

ನನಗೆ ಈ ರೀತಿ ರೇಗಿಸಬೇಡ, ಹೀಗೆಲ್ಲ ಮಾತನಾಡಬೇಡ, ಒಳ್ಳೆಯದಲ್ಲ. ಹೊರಗಡೆ ಚೆನ್ನಾಗಿ ಕಾಣಿಸೋದಿಲ್ಲ, ನನ್ನ ವೈಯಕ್ತಿಕ ವ್ಯಕ್ತಿತ್ವವಿದೆ, ಗಿಲ್ಲಿಯಿದ್ದರೆ ಮಾತ್ರ ನಾನಲ್ಲ ಎಂದು ಕಾವ್ಯ ಶೈವ ಅವರು ಸಾಕಷ್ಟು ಬಾರಿ ಹೇಳಿದ್ದರು. ಇದೇ ಕಾರಣ ಇಟ್ಟುಕೊಂಡು ಗಿಲ್ಲಿಯನ್ನು ನಾಮಿನೇಟ್‌ ಮಾಡಿದ್ದರು. 

35

ಪೇರೆಂಟ್ಸ್‌ ಮೀಟ್‌ ಇರುತ್ತದೆ

Image Credit : colors kannada

ಪೇರೆಂಟ್ಸ್‌ ಮೀಟ್‌ ಇರುತ್ತದೆ

ಬಿಗ್‌ ಬಾಸ್‌ ಮನೆಯಲ್ಲಿ ಪೇರೆಂಟ್ಸ್‌ ಮೀಟ್‌ ಇರುತ್ತದೆ. ಸಾಕಷ್ಟು ಬಾರಿ ಪೇರೆಂಟ್ಸ್‌ಗಳು ಬಂದಾಗ ಸಹಸ್ಪರ್ಧಿಗಳನ್ನು ಹೊಗಳುವುದುಂಟು, ಕೆಲವೊಮ್ಮೆ ವಿರೋಧ ಕೂಡ ಮಾಡೋದುಂಟು. ಈಗ ಕಾವ್ಯ ಮನೆಯವರು ಬಂದರೆ ಏನು ಗತಿ ಎಂದು ಗಿಲ್ಲಿ ನಟ ಅವರು ತಲೆ ಕೆಡಿಸಿಕೊಂಡಿದ್ದಾರೆ.

45

ಗಿಲ್ಲಿ ನಟನಿಗೆ ಭಯ

Image Credit : colors kannada

ಗಿಲ್ಲಿ ನಟನಿಗೆ ಭಯ

ಕಾವ್ಯ ಶೈವ ಅವರನ್ನು ಗಿಲ್ಲಿ ನಟ ಗೋಳು ಹೊಯ್ದುಕೊಂಡಿದ್ದಕ್ಕೆ ಅವರ ಮನೆಯವರು ಏನು ಹೇಳಬಹುದು? ಏನು ಮಾತನಾಡಬಹುದು ಎಂದು ಗಿಲ್ಲಿ ನಟ ತಲೆ ಕೆಡಿಸಿಕೊಂಡಿದ್ದಾರೆ. ಇದೇ ವಿಚಾರವಾಗಿ ಅವರು ಬಿಗ್‌ ಬಾಸ್‌ ಮನೆಯಲ್ಲಿ ಮಾತನಾಡಿದ್ದಾರೆ.

55

ಓಡಿ ಹೋಗ್ತೀನಿ

Image Credit : colors kannada

ಓಡಿ ಹೋಗ್ತೀನಿ

ಕಾವ್ಯ ಶೈವ ಅವರ ಪಾಲಕರು ಬಂದರೆ ಓಡಿ ಹೋಗ್ತೀನಿ. ಸುಮ್ನೆ ಯಾಕೆ ಬೇಕು? ಅವಿತುಕೊಂಡು ಅವರ ರಿಯಾಕ್ಷನ್‌ ನೋಡ್ತೀನಿ, ಗಿಲ್ಲಿ ಎಲ್ಲಿ ಹೋದ್ರು ಎಂದು ಹುಡುಕಾಟ ಮಾಡಿದ್ರೆ ನಾನು ಅಲ್ಲೇ ಇರ್ತೀನಿ. ಅದಿಕ್ಕೆ ಒಂದು ಸೂಟ್‌ ಎತ್ತಿಕೊಂಡಿರ್ತೀನಿ ಎಂದು ಗಿಲ್ಲಿ ನಟ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *