Headlines

BBK 12: ಮತ್ತೆ ರಕ್ಷಿತಾ ಶೆಟ್ಟಿ, ಗಿಲ್ಲಿ ನಟನನ್ನು ಟಾರ್ಗೆಟ್‌ ಮಾಡಿ ಕುಟುಕಿದ ಕಾವ್ಯ ಶೈವ! ಈ ರೀತಿ ಮಾಡೋದ್ಯಾಕೆ? | Bigg Boss Kannada Season 12 Kavya Shaiva Calls Gilli Nata Rakshita As Villain

BBK 12: ಮತ್ತೆ ರಕ್ಷಿತಾ ಶೆಟ್ಟಿ, ಗಿಲ್ಲಿ ನಟನನ್ನು ಟಾರ್ಗೆಟ್‌ ಮಾಡಿ ಕುಟುಕಿದ ಕಾವ್ಯ ಶೈವ! ಈ ರೀತಿ ಮಾಡೋದ್ಯಾಕೆ? | Bigg Boss Kannada Season 12 Kavya Shaiva Calls Gilli Nata Rakshita As Villain


15

ಗಿಲ್ಲಿಗೆ ಸೀರಿಯಸ್‌ನೆಸ್‌ ಗೊತ್ತಾಗಬೇಕು

Image Credit : colors kannada

ಗಿಲ್ಲಿಗೆ ಸೀರಿಯಸ್‌ನೆಸ್‌ ಗೊತ್ತಾಗಬೇಕು

ಕಾವ್ಯ ಶೈವ ಅವರು ಗಿಲ್ಲಿ ನಟ ಅವರನ್ನು ನಾಮಿನೇಟ್‌ ಮಾಡಿದ್ದರು. “ನಾನು ಎಷ್ಟೇ ಹೇಳಿದರೂ ಕೂಡ ಗಿಲ್ಲಿ ನಟ ನನ್ನನ್ನು ರೇಗಿಸುತ್ತಾರೆ, ಇದರಿಂದ ಏನೆಲ್ಲ ಸಮಸ್ಯೆ ಆಗುತ್ತದೆ ಎಂದು ಕೂಡ ಹೇಳಿದ್ದೇನೆ. ಆದರೆ ಅವರು ಕೇಳಲಿಲ್ಲ. ಮತ್ತೆ ಹೇಳಿದರೂ ಕೂಡ ಕ್ಷಮೆ ಕೇಳ್ತಾರೆ, ಆದರೆ ಗಂಭೀರತೆ ಏನೆಂದು ಗೊತ್ತಾಗಬೇಕು” ಎಂದು ಕಾರಣ ನೀಡಿ ನಾಮಿನೇಟ್‌ ಮಾಡಿದ್ದರು. 

25

ರಕ್ಷಿತಾ ಶೆಟ್ಟಿ ಈ ಮನೆಯ ವಿಲನ್‌

Image Credit : colors kannada

ರಕ್ಷಿತಾ ಶೆಟ್ಟಿ ಈ ಮನೆಯ ವಿಲನ್‌

ಅಂದಹಾಗೆ ಕಾವ್ಯ ಶೈವ ಅವರು ರಕ್ಷಿತಾ ಶೆಟ್ಟಿಗೆ ಈ ಮನೆಯ ವಿಲನ್‌ ಎಂಬ ಪಟ್ಟ ನೀಡಿದ್ದಾರೆ. ಈ ಮನೆಯ ವಿಲನ್‌ ಯಾರು ಎಂದು ಬಿಗ್‌ ಬಾಸ್‌ ಟಾಸ್ಕ್‌ ಕೊಟ್ಟಿದ್ದರು. ಅದಕ್ಕೆ ಸ್ಪರ್ಧಿಗಳು ಉತ್ತರ ಕೊಡಬೇಕಿತ್ತು. ಕಾವ್ಯ ಶೈವ ಅವರು ಗಿಲ್ಲಿ ನಟ, ರಕ್ಷಿತಾ ಶೆಟ್ಟಿಯನ್ನು ವಿಲನ್‌ ಎಂದು ಹೇಳಿದ್ದಾರೆ.

35

ರಕ್ಷಿತಾ ಕನ್ನಿಂಗ್‌ ಅನಿಸ್ತು

Image Credit : colors kannada

ರಕ್ಷಿತಾ ಕನ್ನಿಂಗ್‌ ಅನಿಸ್ತು

“ಒಂದೊಂದು ವ್ಯಕ್ತಿಗೆ ಒಂದೊಂದು ಫಾರ್ಮುಲಾ ಬಳಸ್ತಾರೆ. ಭಾಷೆ, ಪರ್ಸನಾಲಿಟಿ ಏನಿದೆ ಅದು ಅವಳ ತಂತ್ರವಾಗಿದೆ. ಕನ್ನಿಂಗ್‌ ಅನಿಸ್ತು, ವಾದವನ್ನು ಅರ್ಧ ಮಾಡಿ ಓಡಿ ಹೋಗೋದಿಲ್ಲ. ನಿನ್ನ ಥರ ನಾನು ಓವರ್‌ ಡ್ರಾಮಾಟಿಕ್‌ ಅಲ್ಲ” ಎಂದು ರಕ್ಷಿತಾ ಶೆಟ್ಟಿ ಅವರು ಕಾವ್ಯ ಶೈವಗೆ ಹೇಳಿದ್ದಾರೆ.

45

ನೀವು ರಿಯಲ್ ಕಾವ್ಯ ಅಲ್ಲ

Image Credit : colors kannada

ನೀವು ರಿಯಲ್ ಕಾವ್ಯ ಅಲ್ಲ

“ನೀವು ರಿಯಲ್‌ ಆಗಿ ಕನ್ನಿಂಗ್‌, ನೀವು ರಿಯಲ್ ಕಾವ್ಯ ಅಲ್ಲ” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ಅಂದಹಾಗೆ ಇನ್ನು ಕೆಲವರು ರಕ್ಷಿತಾ ಶೆಟ್ಟಿಗೆ ವಿಲನ್‌ ಎಂಬ ಪಟ್ಟ ಕೊಟ್ಟಿದ್ದಾರೆ. ಉಳಿದವರು ಏನೇನು ಕಾರಣ ನೀಡಿದ್ದಾರೆ ಎನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

55

ಪ್ರಿ ಪ್ರೊಡಕ್ಟ್‌ ಕಾವ್ಯ ಶೈವ

Image Credit : colors kannada

ಪ್ರಿ ಪ್ರೊಡಕ್ಟ್‌ ಕಾವ್ಯ ಶೈವ

“ಗಿಲ್ಲಿ ನಟ ಅವರು ನನಗೆ ಪ್ರಿ ಪ್ರೊಡಕ್ಟ್‌, ಈ ಮನೆಯಲ್ಲಿ ನಾನು ಮೇಕಪ್‌ ಮಾಡಿಕೊಂಡು ಓಡಾಡ್ತೀನಿ, ಏನೂ ಮಾಡಿಲ್ಲ. ನಾನು ತುಂಬ ಲಕ್ಕಿ. ನಿನ್ನ ಜೊತೆ ನಾನು ಇರಬಾರದಿತ್ತು, ಒಂಟಿಯಾಗಿ ಹೋಗಬೇಕಿತ್ತು ಎಂದೆಲ್ಲ ಹೇಳಿದ್ದರು. ಇಷ್ಟು ದಿನ ಇದನ್ನೆಲ್ಲ ಮನಸ್ಸಿಲ್ಲಿಟ್ಟುಕೊಂಡು ಏನೂ ಹೇಳದೆ ಈಗ ಹೇಳುತ್ತಿದ್ದಾರೆ” ಎಂದು ಕಾವ್ಯ ಶೈವ ಕಾರಣ ನೀಡಿದ್ದಾರೆ ಎನ್ನಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *